ವರ್ಲ್ಡ್ ಮೆಮೊರಿ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಕೋಲಾರದ ಬಾಲಕ 

04 Dec 2023

Author: Vivek Biradar

ವರ್ಲ್ಡ್ ಮೆಮೊರಿ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕೋಲಾರ ನಗರದ ಕಾರಂಜಿಕಟ್ಟೆ ಬಡಾವಣೆಯ ಬಾಲಕ ವಿಶ್ವ ದಾಖಲೆ ನಿರ್ಮಿಸಿದ್ದಾನೆ. 

ವರ್ಲ್ಡ್ ಮೆಮೊರಿ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕೋಲಾರದ ಬಾಲಕ ಅಚಿಂತ್ ಬಿ.ಎ ಪದಕ ಗೆದ್ದಿದ್ದಾನೆ.

ಕಳೆದವಾರ ಮುಂಬೈನ ಸಿಐಡಿಸಿಓ ಎಕ್ಸಿಬಿಷನ್ ಸೆಂಟರ್​ನಲ್ಲಿ ವರ್ಲ್ಡ್ ಮೆಮೊರಿ ಚಾಂಪಿಯನ್ ಶಿಪ್ ಸ್ಪರ್ಧೆ ನಡೆದಿತ್ತು.

ಚಾಂಪಿಯನ್‌ ಶಿಪ್​ನಲ್ಲಿ 23 ದೇಶಗಳ 750 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.  

ನಂಬರ್ಸ್, ಬೈನರಿ, ಸ್ಪೀಡ್ ಕಾರ್ಡ್ಸ್, ಸ್ಪೋಕನ್ ನಂಬರ್ಸ್, ನೇಮ್ಸ್ ಅಂಡ್ ಫೇಸಸ್, ಹಿಸ್ಟೋರಿಕಲ್ ಡೇಟ್ಸ್ ಕುರಿತು ನೆನಪಿನ ಶಕ್ತಿ ಪಂದ್ಯಗಳು ನಡೆದಿದ್ದವು.  

ನೆನಪಿನ ಶಕ್ತಿಯ 10 ವಿವಿಧ ಸುತ್ತುಗಳಲ್ಲಿ ಭಾಗವಹಿಸಿದ್ದ ಅಚಿಂತ್ ಬಿ.ಎ ದ್ವಿತೀಯ ಸ್ಥಾನ ಪಡೆದು, 1 ಬಂಗಾರ, 5 ಬೆಳ್ಳಿ, 4 ಕಂಚಿನ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.  

ನೀಲಿ ಬಣ್ಣದ ಉಡುಗೆಯಲ್ಲಿ ಸೋನು ಶ್ರೀನಿವಾಸ್ ಗೌಡ ಹೊಸ ಫೋಟೋಶೂಟ್