ಸಾಹಿತ್ಯ ಲೋಕದಲ್ಲಿ ಅತ್ಯುತ್ತಮ ಸಾಧನೆ ಮಾಡಿದವರನ್ನು ಗುರುತಿಸಿ ಜ್ಞಾನಪೀಠ ಟ್ರಸ್ಟ್ ಜ್ಞಾನಪೀಠ ಪ್ರಶಸ್ತಿಯನ್ನು ನೀಡುತ್ತದೆ.  ಈವರೆಗೆ ಎಂಟು ಕನ್ನಡ ಸಾಹಿತಿಗಳಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ.

Oct-28-2023

ಕನ್ನಡ 2ನೇ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯಾಗಿದೆ. ವಿಜೇತರಿಗೆ ಪ್ರಶಸ್ತಿ ಫಲಕ, 11 ಲಕ್ಷ ರೂಪಾಯಿ ಚೆಕ್ ಹಾಗೂ ವಾಗ್ದೇವಿಯ ಕಂಚಿನ ವಿಗ್ರಹವನ್ನು ನೀಡಿ ಗೌರವಿಸಲಾಗುವುದು.

ಕನ್ನಡಕ್ಕೆ 8 ಜ್ಞಾನಪೀಠ

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಕುಪ್ಪಳಿಯವರಾದ ಕುವೆಂಪು ಅವರ ಶ್ರೀ ರಾಮಾಯಣ ದರ್ಶನಂ ಕೃತಿಗೆ 1967ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿತು. ಇದು ಕನ್ನಡ ಸಾಹಿತ್ಯಕ್ಕೆ ಸಿಕ್ಕ ಮೊದಲ ಜ್ಞಾನಪೀಠ ಪ್ರಶಸ್ತಿ.

ಕುವೆಂಪು 

ಧಾರವಾಡ ಜಿಲ್ಲೆಯ ದ.ರಾ.ಬೇಂದ್ರೆ ಅವರ ನಾಕುತಂತಿ ಕವನ ಸಂಕಲನಕ್ಕೆ 1973ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿತು. 

ದ.ರಾ.ಬೇಂದ್ರೆ

ಶಿವರಾಮ ಕಾರಂತ ಅವರ ಮೂಕಜ್ಜಿಯ ಕನಸು ಕಾದಂಬರಿಗಾಗಿ 1977ರಲ್ಲಿ ಜ್ಞಾನಪೀಠ ಪ್ರಶಸ್ತಿ ಸಿಕ್ಕಿತು. ಅವರು ಉಡುಪಿ ಜಿಲ್ಲೆಯವರು.

ಶಿವರಾಮ ಕಾರಂತ

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಚಿಕ್ಕವೀರ ರಾಜೇಂದ್ರ ಕೃತಿ ಮತ್ತು ಸಮಗ್ರ ಸಾಹಿತ್ಯಕ್ಕೆ 1983ರಲ್ಲಿ ಜ್ಞಾನಪೀಠ ದೊರೆಯಿತು. ಇವರು ಕೋಲಾರ ಜಲ್ಲೆಯವರು.

ಮಾಸ್ತಿ ವೆಂಕಟೇಶ ಅಯ್ಯಂಗಾರ್

ವಿ.ಕೃ.ಗೋಕಾಕ ಅವರ ಸಮಗ್ರ ಸಾಹಿತ್ಯಕ್ಕೆ 1990ರಲ್ಲಿ ಜ್ಞಾನಪೀಠ ಸಿಕ್ಕಿತು. ವಿ.ಕೃ.ಗೋಕಾಕ ಅವರು ಹಾವೇರಿ ಜಿಲ್ಲೆಯ ಸವಣೂರಿನವರು.

ವಿ.ಕೃ.ಗೋಕಾಕ

ಪ್ರೊ. ಯು.ಆರ್.ಅನಂತಮೂರ್ತಿ ಅವರ ಸಮಗ್ರ ಸಾಹಿತ್ಯಕ್ಕೆ 1994ರಲ್ಲಿ ಲಭಿಸಿತು. ಇವರು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಮೇಳಿಗೆಯವರು. 

ಯು.ಆರ್.ಅನಂತಮೂರ್ತಿ

ಗಿರೀಶ್ ಕಾರ್ನಾಡ್ ಅವರ ಸಮಗ್ರ ಸಾಹಿತ್ಯಕ್ಕೆ 1998ರಲ್ಲಿ ಜ್ಞಾನಪೀಠ ಲಭಿಸಿತು. ಇವರು ಜನಸಿದ್ದು ಮುಂಬೈನಲ್ಲಿ ಆದರೆ ಬೆಳದದ್ದು ಶಿರಸಿ, ಧಾರವಾಡದಲ್ಲಿ. ಕೊನೆಯವರೆಗೂ ಬದುಕು ನಡೆಸಿದ್ದು ಬೆಂಗಳೂರಿನಲ್ಲಿ.

ಗಿರೀಶ್ ಕಾರ್ನಾಡ್ 

ಚಂದ್ರಶೇಖರ ಕಂಬಾರ ಅವರ ಸಮಗ್ರ ಸಾಹಿತ್ಯಕ್ಕೆ 2010ರಲ್ಲಿ ಜ್ಞಾನಪೀಠ ಪ್ರಶಸ್ತಿ ಸಿಕ್ಕಿತು. ಚಂದ್ರಶೇಖರ ಕಂಬಾರ ಅವರು ಬೆಳಗಾವಿ ಜಿಲ್ಲೆಯವರು.

ಚಂದ್ರಶೇಖರ ಕಂಬಾರ