ಸುಗಂಧ ರಾಜನಿಗೆ ಚಿನ್ನದ ಬೆಲೆ; ರಾತ್ರೋರಾತ್ರಿ ಹೆಚ್ಚಿದ ಹೂಗಳ ಕಳ್ಳತನ

24 ನವೆಂಬರ್  2023

ಹಗಲು ರಾತ್ರಿ ಕಷ್ಟಪಟ್ಟು ಬೆಳೆದ ಸುಗಂಧ ರಾಜ ಹೂಗಳಿಗೆ ಕಳ್ಳರ ಕಾಟ ಹೆಚ್ಚಾಗಿದೆ.

ಕಳ್ಳರ ಕಾಟ

ಮಾರುಕಟ್ಟೆಯಲ್ಲಿ ಸುಗಂಧ ರಾಜ ಹೂವುಗಳಿಗೆ ಭಾರಿ ಡಿಮ್ಯಾಂಡ್ ಹಿನ್ನೆಲೆ ರಾತ್ರೋ-ರಾತ್ರಿ ಕಳ್ಳರು ತೋಟಕ್ಕೆ ನುಗ್ಗಿ ಕಳ್ಳತನ ಮಾಡುತ್ತಿದ್ದಾರೆ. 

ತೋಟಕ್ಕೆ ನುಗ್ಗಿ ಕಳ್ಳತನ

 ಸುಗಂಧ ದ್ರವ್ಯ ತಯಾರಿಕೆ ಸೇರಿದಂತೆ ಹಾರ, ದೇವರ ಪೂಜೆಗೆ ಸುಗಂಧ ರಾಜ ಹೂಗಳು ಬೇಕೇಬೇಕು. ಈ ಸುಗಂಧರಾಜ ಹೂವಿಗೆ ಮಾರುಕಟ್ಟೆಯಲ್ಲಿ ಭಾರಿ ಡಿಮ್ಯಾಂಡ್ ಇದೆ.

ಸುಗಂಧ ದ್ರವ್ಯ ತಯಾರಿಕೆ

ಕೆಜಿ ಸುಗಂಧ ರಾಜ ಹೂವಿಗೆ ಮಾರುಕಟ್ಟೆಯಲ್ಲಿ 150 ರಿಂದ 160 ರೂಪಾಯಿ ಬೆಲೆ ಇದ್ದು, ರೈತರಿಗೆ 80 ರಿಂದ 90 ರೂಪಾಯಿ ಬೆಲೆ ಇದೆ.

ಹೂವಿನ ಬೆಲೆ

ಗೌರಿಬಿದನೂರು ತಾಲ್ಲೂಕು ಜಿ.ಬೊಮ್ಮಸಂದ್ರ ಗ್ರಾಮದ ಸುತ್ತಮುತ್ತ ಕಳ್ಳರ ಉಪಟಳ ಹೆಚ್ಚಾಗಿದೆ. ಕಳ್ಳರು ಹೂದೋಟಗಳ ಮೇಲೆ ಕಣ್ಣು ಹಾಕಿ ರಾತ್ರೋರಾತ್ರಿ ಕಳ್ಳತನಕ್ಕೆ ಇಳಿದಿದ್ದಾರೆ.

ಕಳ್ಳರ ಉಪಟಳ 

ಗ್ರಾಮದ ರಾಮರೆಡ್ಡಿ ಹೂದೋಟಕ್ಕೆ ನುಗ್ಗಿ 10 ಲಕ್ಷ ರೂಪಾಯಿ ಮೌಲ್ಯದ ಹೂವು ಕಳ್ಳತನ ಮಾಡಲಾಗಿದೆ.

ಕಳ್ಳರ ಉಪಟಳ 

ಇದೇ ಜಿ.ಬೊಮ್ಮಸಂದ್ರ ಗ್ರಾಮದ ರೈತ ಶ್ರೀಧರ್, ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ 2 ಎಕರೆ ಜಮೀನಿನಲ್ಲಿ ಬೆಳೆದಿದ್ದ ಸುಗಂಧರಾಜ ಹೂವನ್ನು ಕಳ್ಳರು ಕಳ್ಳತನ ಮಾಡಿ ಮಾರಿಕೊಂಡಿದ್ದಾರೆ.

ಸುಗಂಧರಾಜ

ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ ಎನ್ನುವ ಹಾಗೆ, ಹಗಲು-ರಾತ್ರಿ ಕಷ್ಟಪಟ್ಟು, ಸಾಲಸೋಲ ಮಾಡಿ ಹೂ ಬೆಳೆದರೆ, ಹೂಗಳಿಗೆ ಬೆಲೆ ಬರುತ್ತಿದ್ದಂತೆ ಕಳ್ಳರು ರೈತರ ಹೂವುಗಳನ್ನು ಕದಿಯುತ್ತಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ರೈತರ ಸಂಕಷ್ಟ

ಕಂಬಳದ ಸಿದ್ಧತೆ ಪರಿಶೀಲಿಸಿದ ಸಂಸದೆ ಶೋಭಾ ಕರಂದ್ಲಾಜೆ

24 ನವೆಂಬರ್  2023