5 (3)

ರಾಕ್​ಸ್ಟಾರ್​ ಹೋರಿಯ ಹುಟ್ಟುಹಬ್ಬ; ಅಭಿಮಾನಿಗಳಿಂದ ಕೇಕ್​ ಕತ್ತರಿಸಿ ಸಂಭ್ರಮ

06 Dec 2023

Author: Kiran Hanumant Madar

TV9 Kannada Logo For Webstory First Slide
2

ಇಂದು ಸಾವಿರಾರು ಜನ ಅಭಿಮಾನಿಗಳನ್ನು ಹೊಂದಿದ ಹಾವೇರಿ ರಾಕ್​ಸ್ಟಾರ್​ ಹೋರಿಯ 20 ನೇ ವರ್ಷದ ಹುಟ್ಟುಹಬ್ಬ ಅದ್ದೂರಿಯಾಗಿ ನಡೆದಿದೆ.

ರಾಕ್​ಸ್ಟಾರ್​

7 (2)

ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿ ಬ್ಯಾನರ್, ಅಲಂಕಾರ ಗೊಂಡ ಹೋರಿಗೆ ಸೇಬಿನಹಾರ, ಜೊತೆಗೆ ಹುಟ್ಟುಹಬ್ಬಕ್ಕಾಗಿ ತಂದ ಬೃಹತ್ ಕೇಕ್​ ಕತ್ತರಿಸಿದರು.

ಹೋರಿ

11

20 ವರ್ಷಗಳ ಹಿಂದೆ ಈ ಹೋರಿಯ ಮಾಲಿಕ ಮಾರುತಿ ಎಂಬುವವರು ತಮಿಳುನಾಡಿನಿಂದ ಹೋರಿಯನ್ನು ತಂದು ಸಾಕಿದ್ದರು.

 ಹೋರಿಯ ಮಾಲಿಕ 

ಮೊದಲು ಖಾಲಿ ಗಾಡಾ ಓಟಕ್ಕೆ ಹೋಗಿದ್ದಲೆಲ್ಲ ಬಹುಮಾನ ತಂದಿತು. ನಂತರ ಅದರ ಹವಾ ಹೆಚ್ಚಾಗ್ತಿದ್ದಂತೆ ಹೋರಿ ಹಬ್ಬಕ್ಕೆ ತಯಾರಿ ಮಾಡಲಾಯಿತು.

ಹವಾ 

ಹಾವೇರಿ, ಶಿವಮೊಗ್ಗ, ಉತ್ತರ ಕನ್ನಡ, ದಾವಣಗೆರೆ ಜಿಲ್ಲೆ ಸೇರಿದಂತೆ ತಮಿಳುನಾಡಿನಲ್ಲಿಯು ಸಹ ಭಾಗವಹಿಸಿ ಬಹುಮಾನಗಳನ್ನು ತಂದಿದೆ.

ಬಹುಮಾನ

ಮನೆಯಲ್ಲಿ ಮಹಿಳೆಯರು ಸೇರಿದಂತೆ ಪುಟ್ಟ ಮಕ್ಕಳು ಸಹ ಅದರ ಜೊತೆಗೆ ಅನ್ಯೂನ್ಯವಾಗಿರುತ್ತಾರೆ.

 ಅನ್ಯೂನ್ಯತೆ

ಈ ಹೋರಿ ಉಳುಮೆಯಲ್ಲೂ ಸಹ ಎತ್ತಿದ ಕೈ, ಹೋರಿ ಹಬ್ಬದ ಅಖಾಡಕ್ಕೆ ಬಂದರೆ ಅದನ್ನು ಮುಟ್ಟುವ ಸಾಹಸವನ್ನ ಇಲ್ಲಿಯವರೆಗೆ ಯಾರು ಮಾಡಿಲ್ಲ.

ಸಾಹಸ

ಅಖಾಡದಲ್ಲಿ ರಾಕೇಟ್ ವೇಗದಲ್ಲಿ ಓಡುವ ರಾಕಸ್ಟಾರಗೆ ಸರಿಸಾಟಿ ಯಾರು ಇಲ್ಲಎಂದು ಹೋರಿ ಅಭಿಮಾನಿಗಳು ಹೇಳುತ್ತಾರೆ.

ರಾಕೇಟ್ ವೇಗ

ಹಲವು ವರ್ಷಗಳಿಂದ ರಾಜನಂತೆ‌ ಮೇರೆದ ರಾಕಸ್ಟಾರ್ ಗೆ ಇದೀಗ ಇಳಿವಯಸ್ಸು, ಅದಕ್ಕಾಗಿ ಹೋರಿ ಮಾಲಿಕರು ,ಅಭಿಮಾನಿಗಳು ಇಪ್ಪತೈದು ಕೆಜಿ ಕೇಕ್ ತಂದು ಕತ್ತರಿಸಿ ಸಂಭ್ರಮಿಸಿದರು.

ಅಭಿಮಾನಿಗಳು

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರೇಸ್ ಕಾರುಗಳ ಹವಾ