ಟಿಕೆಟ್ ಪಡೆದು ಎಲ್ಲೆಂದರಲ್ಲಿ ಇಳಿತಾರೆ ಮಹಿಳೆಯರು! ಸಸ್ಪೆಂಡ್ ಆಗ್ತಿದ್ದಾರೆ ಕಂಡಕ್ಟರ್​ಗಳು‌

02 Dec 2023

Author: Kiran Hanumant Madar

ಶಕ್ತಿ ಯೋಜನೆ ಅಂದ್ರೆ ಅದು ಸರ್ಕಾರದ ಮಹತ್ವದ ಯೋಜನೆ‌. ಮಹಿಳೆಯರಿಗೆ ಅನಕೂಲವಾಗೋ ಉದ್ದೇಶದಡಿ ಜಾರಿಗೆ ಬಂದಿರುವ ಮಹತ್ವದ ಸ್ಕೀಂ.

ಶಕ್ತಿ ಯೋಜನೆ

 ಶಕ್ತಿ ಯೋಜನೆ ಈಗಾಗಲೇ ಭರ್ಜರಿ ಸಕ್ಸಸ್ ಆಗಿದೆ. ಸಾರಿಗೆ ಇಲಾಖೆಗೆ ಈ ಯೋಜನೆಯಿಂದ ಒಳ್ಳೆಯ ಹೆಸರನ್ನ ತಂದು ಕೊಟ್ಟಿದೆ.

ಸಾರಿಗೆ ಇಲಾಖೆ

ಇದೇ ಶಕ್ತಿ ಯೋಜನೆ ಈಗ ಸಾರಿಗೆ ಇಲಾಖೆಯ ನಿರ್ವಾಹಕರಿಗೆ ಮಗ್ಗಲು‌ ಮಳ್ಳಾಗಿ ಪರಿಣಮಿಸಿದೆ. ಹೌದು, ಶಕ್ತಿ ಯೋಜನೆ ಮೂಲಕ ಮಹಿಳೆಯರು ಆಧಾರ್ ಕಾರ್ಡ್ ಅಥವಾ ಇನ್ಯಾವುದೊ ದಾಖಲೆಯನ್ನ ತೋರಿಸಿ ಫ್ರೀ ಟಿಕೆಟ್ ಪಡೀತಾರೆ.

ನಿರ್ವಾಹಕರಿಗೆ

ಹೀಗೆ ಫ್ರೀ ಟಿಕೆಟ್ ಪಡೆಯೋ ಮಹಿಳೆಯರು ಒಂದು ಸ್ಟೇಜ್ ನ ಟಿಕೆಟ್ ಪಡೆದಿದ್ರೆ, ಇಳಿಯೋದು ಮಾತ್ರ ಮಾರ್ಗ ಮಧ್ಯೆ.

ಮಾರ್ಗ ಮಧ್ಯೆ

ಇದೇ ವಿಚಾರಕ್ಕೆ ನಿತ್ಯ ಮಹಿಳೆಯರು ಕಂಡಕ್ಟರ್​ಗಳ ಜೊತೆ ಕಿರಿಕ್ ಮಾಡಿಕೊಳ್ಳುತ್ತಲೇ ಇದ್ದಾರೆ.

ಕಿರಿಕ್ 

ಹೀಗೆ ಬಹುತೇಕ ಮಹಿಳೆಯರು ಬಸ್ ರಶ್ ಇರುವ ಕಾರಣಕ್ಕೋ ಇಲ್ಲ, ವೈಯಕ್ತಿಕ ಕಾರಣಕ್ಕೋ ಒಂದು ಬಸ್ ಅಲ್ಲಿ ಟಿಕೆಟ್ ಪಡೆದು, ಸ್ವಲ್ಪ ಹೊತ್ತಲ್ಲೇ ಬೇರೆ ಟಿಕೆಟ್​ಗೆ ಹೋಗೋದನ್ನ ಮಾಡುತ್ತಾರೆ. ಅಥವಾ ಮಾರ್ಗ ಮಧ್ಯ ಇಳಿಯುತ್ತಾರೆ.

ಬಸ್ ರಶ್

ಇನ್ನು ಚೆಕ್ಕಿಂಗ್ ಆಫೀಸರ್ಸ್ ಬಂದಾಗ ಟಿಕೆಟ್ ದಾಖಲೆ ಇರುತ್ತದೆ. ಆದ್ರೆ, ಟಿಕೆಟ್ ಪಡೆದ ಮಹಿಳೆಯರು ಇರಲ್ಲ.

 ಚೆಕ್ಕಿಂಗ್ ಆಫೀಸರ್ಸ್

ಆಗ ನಿರ್ವಾಹಕರ ಅಹವಾಲನ್ನ ಸ್ವೀಕರಿಸದೇ ಅಧಿಕಾರಿಗಳು ನಿರ್ವಾಹಕರಿಗೆ ನೋಟಿಸ್ ನೀಡಿ ಅಮಾನತ್ತು ಮಾಡ್ತಿರೊ ಪ್ರಕರಣಗಳು ಹೆಚ್ಚಾಗ್ತಿವೆ.

ನೋಟಿಸ್ 

 ಬರಗಾಲಕ್ಕಿಂತ ಹೆಚ್ಚಾಗಿ ಅಕಾಲಿಕ ಮಳೆಗೆ ಭತ್ತ ಹಾನಿ! ಕಂಗಾಲಾದ ರೈತ