ವಾರಾಂತ್ಯದಲ್ಲಿ ಕೇರಳದ ಈ ಬೀಚ್​​ಗಳಿಗೆ  ಭೇಟಿ ನೀಡಿ

ಕಡಲ ಕಿನಾರೆಗಳಿಗೆ ಭೇಟಿ ನೀಡಿವುದರಿಂದ ಪ್ರಮುಖವಾಗಿ ಸೂರ್ಯೋದಯ, ಸೂರ್ಯಾಸ್ತ ಸಮಯಗಳನ್ನು ಕಣ್ತುಂಬಿಸಿಕೊಳ್ಳಬಹುದು.

ನೀವು ಮಾಂಸಹಾರಿಗಳಾಗಿದ್ದರೆ  ಕಡಲ ಕಿನಾರೆಯಲ್ಲಿ ಸಿಗುವ ಮೀನು, ಸೀಗಡಿಯ ವಿಶೇಷ ಖಾದ್ಯ ಸವಿಯುವ ಅವಕಾಶವೂ ನಿಮಗಿದೆ.

ಆದ್ದರಿಂದ ಈ ವಾರಾಂತ್ಯದಲ್ಲಿ ಕೇರಳದ ಪ್ರಮುಖ ಬೀಚ್ ಗಳಿಗೆ ಭೇಟಿ ನೀಡಿ. ಇಲ್ಲಿದೆ ನೋಡಿ ಮಾಹಿತಿ.

ವರ್ಕಲಾ ಬೀಚ್: ತಿರುವನಂತಪುರದಲ್ಲಿರುವ ಈ ವರ್ಕಲಾ ಬೀಚ್​​​​ನ ಸಮೀಸದಲ್ಲಿಯೇ 2000 ವರ್ಷಗಳಷ್ಟು ಹಳೆಯ ವಿಷ್ಣು ದೇವಸ್ಥಾನ ಮತ್ತು ಶಿವಗಿರಿ ಮಠ ಕಾಣಸಿಗುತ್ತದೆ.

ಕೋವಲಂ ಬೀಚ್ ಕೇರಳದ ಅತಿದೊಡ್ಡ ಬೀಚ್ ಗಳಲ್ಲಿ ಒಂದಾಗಿದೆ. ನೀವಿಲ್ಲಿ ಸನ್ ಬಾತ್, ಹರ್ಬಲ್ ಬಾಡಿ ಟೋನಿಂಗ್ ಮಸಾಜ್, ಕ್ರೂಸಿಂಗ್ ಹಾಗೂ  ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಾಣಬಹುದು.

ಬೇಕಲ್ ಬೀಚ್:  ಕೇರಳದ ಕಾಸರಗೋಡು ಜಿಲ್ಲೆಯಲ್ಲಿರುವ ಈ ಬೇಕಲ ಬೀಚ್ ನಲ್ಲಿ ಪುರಾತನ ಬೇಕಲ ಕೋಟೆಯನ್ನು ಕಣ್ತುಂಬಿಸಿಕೊಳ್ಳಬಹುದು. ಜೊತೆಗೆ ಇಲ್ಲಿನ ವಿಶೇಷ ಖಾದ್ಯ ಪಾಯಸಂ ಸವಿಯಲು ಮರೆಯದಿರಿ.