ದಕ್ಷಿಣ ಆಫ್ರಿಕಾ ತಂಡ ಪ್ರಸ್ತುತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದು, ಆತಿಥೇಯ ತಂಡದ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡುತ್ತಿದೆ.
Pic credit: Google
ಟ್ರಿನಿಡಾಡ್‌ನ ಪೋರ್ಟ್ ಆಫ್ ಸ್ಪೇನ್ ಮೈದಾನದಲ್ಲಿ ನಡೆದ ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಸರಣಿಯ ಮೊದಲ ಪಂದ್ಯ ಡ್ರಾದಲ್ಲಿ ಕೊನೆಗೊಂಡಿದೆ.
Pic credit: Google
ಇನ್ನು ಈ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಸ್ಪಿನ್ನರ್ ಕೇಶವ್ ಮಹಾರಾಜ್ ಅದ್ಬುತ ಪ್ರದರ್ಶನ ನೀಡಿ ಎರಡೂ ಇನಿಂಗ್ಸ್ಗಳಲ್ಲಿ ಒಟ್ಟು 8 ವಿಕೆಟ್ ಕಬಳಿಸಿದರು.
Pic credit: Google
ಅಲ್ಲದೆ ಈ ಪಂದ್ಯದಲ್ಲಿ ಕೇಶವ್ ಮಹಾರಾಜ್ ಸತತ 40 ಓವರ್ ಬೌಲ್ ಮಾಡಿದರು. ಈ ಮೂಲಕ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಪರೂಪದ ಕ್ಷಣಕ್ಕೆ ಈ ಟೆಸ್ಟ್ ಪಂದ್ಯ ಸಾಕ್ಷಿಯಾಯಿತು.
Pic credit: Google
ಅಂದರೆ ಒಂದು ಎಂಡ್ನಿಂದ ಬೇರೆ ಬೌಲರ್ಗಳು ಬೌಲ್ ಮಾಡಿದರೆ, ಇನ್ನೊಂದು ಎಂಡ್ನಿಂದ ಕೇಶ್ ಸತತ 40 ಓವರ್‌ಗಳನ್ನು ಬೌಲ್ ಮಾಡಿದರು.
Pic credit: Google
2001ರ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲರ್ ಒಬ್ಬರು ಸತತವಾಗಿ ಇಷ್ಟು ಓವರ್‌ಗಳನ್ನು ಬೌಲ್ ಮಾಡುತ್ತಿರುವುದು ಇದು ಎರಡನೇ ಬಾರಿ. ಇದಕ್ಕೂ ಮುನ್ನ 2001ರಲ್ಲಿ ಜಿಂಬಾಬ್ವೆಯ ರೇ ಪ್ರೈಸ್ ಸತತ 42 ಓವರ್‌ಗಳನ್ನು ಎಸೆದಿದ್ದರು.
Pic credit: Google
ಇದರೊಂದಿಗೆ ಈ ಪಂದ್ಯದ ವೇಳೆ ಕೇಶವ್ ಮಹಾರಾಜ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 250 ವಿಕೆಟ್‌ಗಳನ್ನು ಪೂರೈಸಿದರು. ಇಮ್ರಾನ್ ತಾಹಿರ್ ನಂತರ ಈ ಸಾಧನೆ ಮಾಡಿದ ದಕ್ಷಿಣ ಆಫ್ರಿಕಾದ ಎರಡನೇ ಬೌಲರ್ ಎನಿಸಿಕೊಂಡರು.