ಬ್ಯಾಂಕು ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿ ಕಡಿಮೆಗೊಳಿಸಿತಾ? ಕಾರಣ ಮತ್ತು ಉಪಾಯ ತಿಳಿಯಿರಿ
ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯನ್ನು ಕಡಿಮೆ ಮಾಡಲು ಬ್ಯಾಂಕುಗಳಿಗೆ ಸಕಾರಣಗಳಿವೆ. ಈ ಕಾರಣಗಳೇನು ಎಂದು ತಿಳಿಯೋಣ
1. ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಸಕಾಲಕ್ಕೆ ಕಟ್ಟದೇ ಹೋದಾಗ ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತದೆ. ಕ್ರೆಡಿಟ್ ಮಿತಿ ಕಡಿಮೆ ಮಾಡಲಾಗುತ್ತದೆ.
2. ಕ್ರೆಡಿಟ್ ಕಾರ್ಡ್ ಡೀಫಾಲ್ಟ್ ಪ್ರಮಾಣ ಹೆಚ್ಚಾದರೆ ಅದು ಹಣಕಾಸು ಸಂಕಷ್ಟದ ಸೂಚನೆ. ಹೀಗಾಗಿ, ಕ್ರೆಡಿಟ್ ಮಿತಿ ಇಳಿಸಬಹುದು.
3. ಕ್ರೆಡಿಟ್ ಕಾರ್ಡ್ ಮಿತಿಯಲ್ಲಿ ಶೇ. 30ಕ್ಕಿಂತ ಹೆಚ್ಚು ಪ್ರಮಾಣವನ್ನು ಉಪಯೋಗಿಸುವ ಗ್ರಾಹಕರನ್ನು ರಿಸ್ಕಿ ಎಂದು ಪರಿಗಣಿಸಲಾಗುತ್ತದೆ.
4. ಹಲವು ಹೊಸ ಕಾರ್ಡ್ಗಳನ್ನು ಪಡೆದರೆ ಒಟ್ಟು ಕ್ರೆಡಿಟ್ ಮಿತಿ ಗಣನೀಯವಾಗಿ ಹೆಚ್ಚುತ್ತದೆ. ಆಗ ಕ್ರೆಡಿಟ್ ಲಿಮಿಟ್ ಕಡಿಮೆ ಮಾಡಲಾಗುತ್ತದೆ.
5. ಒಂದು ಆರ್ಥಿಕತೆ ಅನಿಶ್ಚಿತ ಸ್ಥಿತಿಯಲ್ಲಿದ್ದಾಗ ಗ್ರಾಹಕರಿಗೆ ಹೆಚ್ಚಿನ ಕ್ರೆಡಿಟ್ ಲಿಮಿಟ್ ನೀಡುವುದು ರಿಸ್ಕಿ ಎಂದು ಪರಿಗಣಿಸಲಾಗುತ್ತದೆ.
6. ನೀವು ಕ್ರೆಡಿಟ್ ಕಾರ್ಡ್ ಹೊಂದಿದ್ದು ಅದನ್ನು ಹೆಚ್ಚು ಉಪಯೋಗಿಸದೇ ಇದ್ದರೆ ಆಗಲೂ ಕೂಡ ಕ್ರೆಡಿಟ್ ಮಿತಿಯನ್ನು ಕಡಿಮೆ ಮಾಡಲಾಗುತ್ತದೆ.
ಒಂದು ವೇಳೆ ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿ ಕಡಿಮೆಗೊಳಿಸಲಾಗಿದ್ದರೆ ನೀವು ಬ್ಯಾಂಕ್ ಅನ್ನು ಸಂಪರ್ಕಿಸಿ ಹಿಂದಿನ ಮಿತಿಗೆ ಹೆಚ್ಚಿಸುವಂತೆ ಮನವಿ ಮಾಡಬಹುದು.
ಇನ್ನಷ್ಟು ನೋಡಿ