ಭಾರತ ಸಕ್ಕರೆ ರಫ್ತು ನಿಷೇಧಕ್ಕೆ ಯಾಕೆ ಮುಂದಾಗಿದೆ?

2023ರ ಅಕ್ಟೋಬರ್ ಬಳಿಕ ಭಾರತ ಸಕ್ಕರೆ ರಫ್ತನ್ನು ನಿಷೇಧಿಸಲು ಚಿಂತಿಸುತ್ತಿದೆ.

ಮಳೆಯ ಅಭಾವದಿಂದ ಕಬ್ಬಿನ ಇಳುವರಿ ಕಡಿಮೆ ಆಗಿರುವುದರಿಂದ ಸಕ್ಕರೆ ಅಭಾವ ಸೃಷ್ಟಿಯಾಗುವ ಸಾಧ್ಯತೆ ಇದೆ.

ಸಕ್ಕರೆ ಕೊರತೆಯಾಗಿ ಬೆಲೆ ಹೆಚ್ಚಳವಾಗದಂತೆ ನಿಯಂತ್ರಿಸಲು ಕೇಂದ್ರ ಸರ್ಕಾರ ಸಕ್ಕರೆ ರಫ್ತು ನಿಷೇಧಿಸಲು ಯೋಜಿಸಿದೆ.

ಭಾರತ ಸಕ್ಕರೆ ರಫ್ತು ನಿಷೇಧಿಸಿದರೆ ಜಾಗತಿಕವಾಗಿ ಸಕ್ಕರೆ ಬೆಲೆ ಹೆಚ್ಚಳ ಆಗುವ ನಿರೀಕ್ಷೆ ಇದೆ.

ವಿಶ್ವದಲ್ಲಿ ಅತಿಹೆಚ್ಚು ಸಕ್ಕರೆ ರಫ್ತು ಮಾಡುವುದು ಬ್ರೆಜಿಲ್ ದೇಶ. ಅದು ಬಿಟ್ಟರೆ ಥಾಯ್ಲೆಂಡ್ ಮತ್ತು ಭಾರತ.

ಬ್ರೆಜಿಲ್ ದೇಶ 2022-23ರಲ್ಲಿ 28.2 ಮಿಲಿಯನ್ ಮೆಟ್ರಿಕ್ ಟನ್​ಗಳಷ್ಟು ಸಕ್ಕರೆ ರಫ್ತು ಮಾಡಿದೆ.

ಥಾಯ್ಲೆಂಡ್ ದೇಶ 11 ಮಿಲಿಯನ್ ಮೆಟ್ರಿಕ್ ಟನ್ ಸಕ್ಕರೆ ರಫ್ತು ಮಾಡಿ 2ನೇ ಸ್ಥಾನದಲ್ಲಿದೆ.

ಭಾರತ ದೇಶ 6.5 ಮಿಲಿಯನ್ ಟನ್ ಸಕ್ಕರೆ ರಫ್ತು ಮಾಡಿ 3ನೇ ಸ್ಥಾನದಲ್ಲಿದೆ.