ಟಾಸ್ ವೇಳೆ ಕೊಹ್ಲಿ-ರೋಹಿತ್ ಬಗ್ಗೆ ಹಾರ್ದಿಕ್ ಹೇಳಿದ್ದೇನು?

ಎರಡನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯದ ರೋಹಿತ್-ಕೊಹ್ಲಿ

ಇವರಿಬ್ಬರ ಜಾಗದಲ್ಲಿ ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್ ಆಡಿದ್ದರು

ಟೀಮ್ ಇಂಡಿಯಾ ನಾಯಕತ್ವವನ್ನು ಹಾರ್ದಿಕ್ ಪಾಂಡ್ಯ ನಿರ್ವಹಿಸಿದರು

ಟಾಸ್ ವೇಳೆ ಹಾರ್ದಿಕ್ ಕೊಹ್ಲಿ-ರೋಹಿತ್ ಆಡದ ಬಗ್ಗೆ ತಿಳಿಸಿದ್ದಾರೆ

ಕೊಹ್ಲಿ-ರೋಹಿತ್ ಸತತವಾಗಿ ಕ್ರಿಕೆಟ್ ಆಡುತ್ತಿರುವ ಕಾರಣ ವಿಶ್ರಾಂತಿ ನೀಡಲಾಗಿದೆ: ಹಾರ್ದಿಕ್ ಪಾಂಡ್ಯ

ನಾವು ಕೆಲವು ಪ್ರಶ್ನೆಗಳಿಗೆ ಉತ್ತರಿಸಬೇಕು ಹೀಗಾಗಿ ಇವರಿಬ್ಬರು ವಿಶ್ರಾಂತಿ ಪಡೆಯುತ್ತಿದ್ದಾರೆ: ಹಾರ್ದಿಕ್

ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಸೋತಿದ್ದು, ವಿಂಡೀಸ್ 6 ವಿಕೆಟ್​ಗಳ ಜಯ ಸಾಧಿಸಿದೆ

ಈ ಮೂಲಕ 3 ಪಂದ್ಯಗಳ ಏಕದಿನ ಸರಣಿ 1-1 ಅಂತರದಿಂದ ಸಮಬಲಗೊಂಡಿದೆ