ಸ್ವತಃ ತನ್ನನ್ನು ತಾನೇ ಮದುವೆಯಾಗಿದ್ದ ಯವತಿ; ಮೊದಲ ವರ್ಷದ ವಿವಾಹ ಸಂಭ್ರಮ
ಸ್ವಯಂವಿವಾಹಿತೆ ಕ್ಷಮಾ ಬಿಂದು ತನ್ನ ಮೊದಲ ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿದ್ದಾರೆ.
2022ರ ಜೂನ್ 9ರಂದು ಕ್ಷಮಾ ಬಿಂದು ಎಂಬ ಯುವತಿ ತನ್ನನ್ನು ತಾನೇ ವಿವಾಹವಾಗಿದ್ದಳು.
ಇದೀಗಾ ಮದುವೆಯ ಮೊದಲ ವಾರ್ಷಿಕೋತ್ಸವದ ಸಂಭ್ರಮವನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.
ಮದುವೆ ಸಂಭ್ರಮಕ್ಕೆ ಅನೇಕ ಸೋಶಿಯಲ್ ಮೀಡಿಯಾ ಬಳಕೆದಾರರು ಶುಭಹಾರೈಸಿದ್ದಾರೆ.
ಹಿಂದೂ ಸಂಪ್ರದಾಯದಂತೆ ತಾನೊಬ್ಬಳೇ ಸಪ್ತಪದಿ ತುಳಿದು ವಿಭಿನ್ನವಾಗಿ ಮದುವೆಯಾಗಿದ್ದರು.
ಈಕೆ ಭಾರತದ ಮೊದಲ ಸೋಲೋಗಾಮಿ. ಈ ಮದುವೆ ಇದು ಇಡೀ ದೇಶದ ಜನತೆಯಲ್ಲಿ ಸಂಚಲನ ಮೂಡಿಸಿತ್ತು.