ಮದುವೆ ಸಮಾರಂಭದಿಂದ ಹಿಡಿದು ಪ್ರತಿದಿನ ಧರಿಸಬಹುದಾದಂತಹ ಕುರ್ತಾಗಳು ಇಲ್ಲಿವೆ ನೋಡಿ

ನಟಿ ದೀಪಿಕಾ ಪಡುಕೋಣೆ ಧರಿಸಿರುವ ವಿವಿಧ ವಿನ್ಯಾಸ ಗ್ರ್ಯಾಂಡ್ ಕುರ್ತಾದಿಂದ ಹಿಡಿದು ಸಿಂಪಲ್ ಕುರ್ತಾವರೆಗಿನ ಫೋಟೋಗಳು ಇಲ್ಲಿವೆ ನೋಡಿ.

ಬನಾರಸಿ ದುಪ್ಪಟದೊಂದಿಗಿನ ಸಿಂಪಲ್ ಕುರ್ತಾಗಳು ಮದುವೆ ಅಥವಾ ವಿಶೇಷ ಸಮಾರಂಭಗಳಿಗೆ ಒಂದು ಉತ್ತಮ ಆಯ್ಕೆಯಾಗಿದೆ. ಇದು ನಿಮಗೆ ಗ್ರ್ಯಾಂಡ್ ಲುಕ್ ನೀಡುತ್ತದೆ. 

ಗಾಢ ಬಣ್ಣದ ಎಂಬ್ರಾಯಿಡರ್ ಕುರ್ತಾಗಳು ಮೆಹಂದಿ ಮುಂತಾದ ಯಾವುದೇ ಸಂಗೀತ ಕಾರ್ಯಕ್ರಮಗಳಿಗೆ ಒಂದು ಉತ್ತಮ ಆಯ್ಕೆಯಾಗಿದೆ.

ಬೇಸಿಗೆಕಾಲದಲ್ಲಿ ಇಂತಹ ಕಾಟನ್ ಕುರ್ತಾಗಳನ್ನು ಆಯ್ಕೆ ಮಾಡಿ. ಇವುಗಳು ಸಾಕಷ್ಟು ಹಗುರವಾಗಿದ್ದು, ಆರಾಮದಾಯಕವೂ ಹೌದು.

ಬಿಳಿ ಬಣ್ಣದ ಖಾದಿಯ ಕುರ್ತಾಗಳು ನೋಡಲು ಸಿಂಪಲ್ ಆಗಿದ್ದರೂ ಸಹ, ವಿಶೇಷವಾಗಿ ಬೇಸಿಗೆಯಲ್ಲಿ ಬಿಸಿಲಿನ ಶಾಖದಿಂದ ನಿಮ್ಮನ್ನು ರಕ್ಷಿಸುತ್ತದೆ.

ಫ್ಯಾನ್ಸಿ ಕುರ್ತಾಗಳು ವಿಶೇಷವಾಗಿ ನೈಟ್ ಈವೆಂಟ್ ಗಳಿಗೆಉತ್ತಮ ಆಯ್ಕೆಯಾಗಿದೆ. ಇದು ರಾತ್ರಿಯ ಬೆಳಕಿಗೆ ಹೊಳೆಯುವುದರ ಜೊತೆಗೆ ನಿಮ್ಮನ್ನು ಹೊಳೆಯುವಂತೆ ಮಾಡುತ್ತದೆ.