ಎಸ್​ಬಿಐ, ಐಸಿಐಸಿಐ, ಎಚ್​ಡಿಎಫ್​ಸಿ ಬ್ಯಾಂಕ್​ಗಳ ಇತ್ತೀಚಿನ ಎಫ್​ಡಿ ಬಡ್ಡಿ ದರ ವಿವರ ಇಲ್ಲಿದೆ.

ಆರ್​ಬಿಐ ರೆಪೊ ದರ ಹೆಚ್ಚಿಸಿದಾಗ ಸಾಮಾನ್ಯವಾಗಿ ಬ್ಯಾಂಕ್​ಗಳು ಎಫ್​​ಡಿ ದರ ಹೆಚ್ಚಿಸುತ್ತವೆ.

ಎಸ್​ಬಿಐ ವಿವಿಧ ಅವಧಿಯ ಎಫ್​ಡಿಗಳಿಗೆ 65 ಮೂಲಾಂಶದ ವರೆಗೆ ಬಡ್ಡಿ ನೀಡುತ್ತಿದೆ.

1 ವರ್ಷ ಮೇಲ್ಪಟ್ಟ, 2 ವರ್ಷಕ್ಕಿಂತ ಮೊದಲು ಮೆಚ್ಯೂರ್ ಆಗುವ ಎಫ್​ಡಿಗೆ ಹಾಗೂ 2 ವರ್ಷ ಮೇಲ್ಪಟ್ಟ, 3 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್​ಡಿಗೆ ಶೇ 6.75ರ ಬಡ್ಡಿ ನೀಡಲಾಗುತ್ತಿದೆ.

3 ವರ್ಷ ಮೇಲ್ಪಟ್ಟ, 5 ವರ್ಷಕ್ಕಿಂತ ಮೊದಲು ಮೆಚ್ಯೂರ್ ಆಗುವ ಎಫ್​ಡಿಗೆ ಹಾಗೂ 5 ವರ್ಷ ಮೇಲ್ಪಟ್ಟ, 10 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್​ಡಿಗೆ ಶೇ 6.25ರ ಬಡ್ಡಿ ನೀಡಲಾಗುತ್ತಿದೆ.

ಎಚ್​​ಡಿಎಫ್​ಸಿ ಬ್ಯಾಂಕ್ ವಿವಿಧ ಅವಧಿಯ ಎಫ್​ಡಿಗಳಿಗೆ ಶೇ 3ರಿಂದ 6.25ರ ವರೆಗೆ ಬಡ್ಡಿ ನೀಡುತ್ತಿದೆ.

ಹಿರಿಯ ನಾಗರಿಕರ 3 ದಿನಗಳಿಂದ 10 ವರ್ಷಗಳ ವರೆಗಿನ ವಿವಿಧ ಎಫ್​​ಡಿಗಳಿಗೆ ಶೇ 3.5ರಿಂದ 7ರ ವರೆಗೆ ಬಡ್ಡಿ ನೀಡುತ್ತದೆ.

3 ದಿನಗಳಿಂದ 10 ವರ್ಷಗಳ ವರೆಗಿನ ವಿವಿಧ ಎಫ್​​ಡಿಗಳಿಗೆ ಐಸಿಐಸಿಐ ಬ್ಯಾಂಕ್ ಶೇ 3ರಿಂದ 6.60 ವರೆಗೆ ಬಡ್ಡಿ ನೀಡುತ್ತಿದೆ.