ತುಂಬೆ ಗಿಡದಲ್ಲಿ ತುಂಬಿದೆ ಔಷಧೀಯ ಗುಣ

Oct-29-2023

ತುಂಬೆ ಎಲೆ ರಸಕ್ಕೆ ಕಾಳುಮೆಣಸಿನ ಪುಡಿ ಸೇರಿಸಿ ಸೇವಿಸುವುದರಿಂದ ಆಗಾಗ ಬರುವ ಜ್ವರ ಕಡಿಮೆಯಾಗುತ್ತದೆ

ಜ್ವರಕ್ಕೆ ರಾಮ ಬಾಣ

ಚೆನ್ನಾಗಿ ಒಣಗಿಸಿದ ತುಂಬೆ ಗಿಡವನ್ನು ಪುಡಿ ಮಾಡಿ, ಕಷಾಯ ಮಾಡಿಕೊಂಡು ದೇಹದ ಮೇಲಿನ ಗಾಯವನ್ನು ತೊಳೆದರೆ, ಆ್ಯಂಟಿ ಸೆಪ್ಟಿಕ್ ಕ್ರೀಮ್‌ನಂತೆ ಕಾರ್ಯ ನಿರ್ವಹಿಸುತ್ತದೆ. 

ಆ್ಯಂಟಿ ಸೆಪ್ಟಿಕ್ ಕ್ರೀಮ್‌

ತುಂಬೆ ಎಲೆ ಪೇಸ್ಟ್ ಅಲರ್ಜಿ ನಿವಾರಣೆಗೆ ಉತ್ತಮ ಔಷಧಿ

ಅಲರ್ಜಿ 

ಪಿರಿಯಡ್ಸ್‌ನಲ್ಲಿ ಅತೀವ ರಕ್ತ ಸ್ರಾವವಾಗುತ್ತಿದ್ದರೆ, ತುಂಬೆ ಎಲೆ ಪೇಸ್ಟ್‌ನೊಂದಿಗೆ ನಿಂಬೆರಸ, ಎಳ್ಳೆಣ್ಣೆ ಸೇರಿಸಿ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು.

ಪಿರಿಯಡ್ಸ್‌ ಸಮಸ್ಯೆಗೂ ಔಷಧಿ

ಬೇಯಿಸಿದ  ಬಿಳಿ ತುಂಬೆಯನ್ನು ಅನ್ನದೊಂದಿಗೆ ಸೇವಿಸಿದರೆ, ವೈಟ್ ಜಿಸ್ಚಾರ್ಜ್ ಸಮಸ್ಯೆಗೆ ಮದ್ದು

ವೈಟ್ ಜಿಸ್ಚಾರ್ಜ್ 

ತುಂಬೆ ಹೂವಿನ ಕಷಾಯ ಮಾಡಿಕೊಂಡು, ಆಗಾಗ ಕುಡಿಯುತ್ತಿದ್ದರೆ ಅತಿಯಾದ ದಾಹದ ಸಮಸ್ಯೆ ನಿವಾರಣೆಯಾಗುತ್ತದೆ. 

ದಾಹ ನಿವಾರಣೆ

ಜೇನು ತುಪ್ಪದೊಂದಿಗೆ ತುಂಬೆ ಹೂ ರಸ ಕುಡಿಸಿದರೆ, ಮಕ್ಕಳ ಹೊಟ್ಟೆ ಹುಳ ತೊಲಗುತ್ತದೆ.

ಮಕ್ಕಳ ಹೊಟ್ಟೆ ಹುಳ

ತುಂಬೆಯ ಬೇರಿನೊಂದಿಗೆ ನೀರಲ್ಲಿ ಕುದಿಸಿದ ಕಷಾಯವನ್ನು ಸೈಂಧವ ಲವಣದೊಂದಿಗೆ ಕುಡಿದರೆ, ಜೀರ್ಣ ಶಕ್ತಿ ಹೆಚ್ಚುತ್ತದೆ. 

ಜೀರ್ಣ ಶಕ್ತಿ

ತುಂಬೆ ಗಿಡವನ್ನು ಒಣಿಗಿಸಿ, ಅದರ ಪುಡಿ ಕಷಾಯವನ್ನು ಆಗಾಗ ಸೇವಿಸುತ್ತಿದ್ದರೆ, ರಕ್ತ ಶುದ್ಧಿಯಾಗುತ್ತದೆ. 

ರಕ್ತ ಶುದ್ಧಿ