ಭಾರತದಲ್ಲಿ ಹಲವು ಕೌತುಕ, ಅಚ್ಚರಿ ಹಾಗೂ ವಿಸ್ಮಯಗಳನ್ನೊಳಗೊಂಡ ತಾಣಗಳು ಇವೆ. ಆ ಸಾಲಿಗೆ ಸೇರಿರುವುದೇ ಈ ದೇವಾಲಯ.
Pic credit - Pintrest
ಸರಿಸುಮಾರು 3000 ವರ್ಷ ಹಳೆಯದಾದ ಕೇರಳದ ನೀರ್ಪುತ್ತೂರು ಶಿವ ದೇವಸ್ಥಾನವು ಇಂದಿಗೂ ಪ್ರವಾಸಿಗರನ್ನು ಆಕರ್ಷಿಸುತ್ತದೆ.
Pic credit - Pintrest
ತನ್ನ ಶ್ರೀಮಂತ ಇತಿಹಾಸದಿಂದಲೇ ಪ್ರಖ್ಯಾತಿ ಪಡೆದಿರುವ ಇಲ್ಲಿ ಸ್ವಯಂಭು ನೆಲೆಸಿದ್ದು, ಆಧ್ಯಾತ್ಮಿಕ ಪರಂಪರೆಗೆ ಸಾಕ್ಷಿಯಾಗಿದೆ.
Pic credit - Pintrest
ಭಾರತೀಯ ಪುರಾತತ್ವ ಸಮೀಕ್ಷೆಯ ಪ್ರಕಾರ ಈ ದೇವಾಲಯವು ಮೂರು ಸಾವಿರ ಹಳೆಯದಾದ ರಚನೆ ಎನ್ನಲಾಗಿದೆ.
Pic credit - Pintrest
ಈ ದೇವಾಲಯವು ಸದಾ ನೀರಿನಿಂದ ತುಂಬಿದ್ದು, ಭಾರತದಲ್ಲಿನ ಅಪರೂಪದ ದೇವಾಲಯವಿದಾಗಿದೆ. ವೀಕ್ಷಣಾ ಪ್ರದೇಶವಾದ ಪಟ್ಟುಪುರದಿಂದ ಮಾತ್ರ ದರ್ಶನ ಪಡೆಯಲು ಸಾಧ್ಯವಂತೆ.
Pic credit - Pintrest
ಬೇಸಿಗೆಯಲ್ಲಿ ನೀರಿನ ಮಟ್ಟ ಕಡಿಮೆಯಾದಾಗ ಮಾತ್ರ ಭಕ್ತರು ದೇವಾಲಯವನ್ನು ಪ್ರವೇಶಿಸಬಹುದು. ಶಿವಲಿಂಗ ಸುತ್ತಲಿನ ನೀರನ್ನು ಪವಿತ್ರ ನೀರೆಂದು ಭಾವಿಸಲಾಗಿದ್ದು ರೋಗರುಜಿನ ಗುಣಪಡಿಸುವ ಶಕ್ತಿ ಹೊಂದಿದೆ.
Pic credit - Pintrest
ಗರ್ಭ ಗುಡಿಯೂ ವೃತ್ತಾಕಾರದ ವಿನ್ಯಾಸವನ್ನು ಹೊಂದಿದ್ದು, ಪ್ರಾಚೀನ ಕಾಲದ ವಾಸ್ತುಶಿಲ್ಪಕ್ಕೆ ಸಾಕ್ಷಿಯಾಗಿದ್ದು, ಇಲ್ಲಿಗೆ ಸಾವಿರಾರು ಭಕ್ತರು ಬಂದು ದೇವರ ದರ್ಶನ ಪಡೆಯುತ್ತಾರೆ.