ನಟಿ ಜಾನ್ವಿ ಕಪೂರ್ ನಂತೆ ಹೊಳೆಯುವ ತ್ವಚೆ ಪಡೆಯಲು ತುಪ್ಪ ಹೀಗೆ ಬಳಸಿ

30 January 2025

Pic credit - Pintrest

Sainanda

ಬಾಲಿವುಡ್ ನಟಿ ಜಾನ್ವಿ ಕಪೂರ್ ತ್ವಚೆ ಹಾಗೂ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ತುಪ್ಪವನ್ನು ಈ ರೀತಿ ಬಳಸುವುದೇ ಇದರ ಹಿಂದಿನ ರಹಸ್ಯವಂತೆ.

Pic credit - Pintrest

ತ್ವಚೆಯ ಆರೈಕೆಯಲ್ಲಿ ತುಪ್ಪವನ್ನು ನಿಯಮಿತವಾಗಿ ಬಳಸುವ ಮೂಲಕ ಸೌಂದರ್ಯ ಕಾಪಾಡಿಕೊಳ್ಳಬಹುದು.

Pic credit - Pintrest

ತುಪ್ಪವನ್ನು ಮಾಯಿಶ್ಚರಸರ್ ಆಗಿ ಬಳಸಬಹುದು. ಒಂದೆರಡು ಹನಿ ತುಪ್ಪವನ್ನು ಅಂಗೈ ಮೇಲೆ ಹಾಕಿ ಉಜ್ಜಿಕೊಂಡು ಮುಖಕ್ಕೆ ಹಚ್ಚಿಕೊಳ್ಳಿ.

Pic credit - Pintrest

ಒಂದು ಚಮಚ ತುಪ್ಪಕ್ಕೆ ಒಂದು ಚಮಚ ಜೇನುತುಪ್ಪ ಹಾಗೂ ಒಂದು ಹನಿ ನಿಂಬೆರಸ ಹಾಕಿ ಈ ಮಿಶ್ರಣವನ್ನು ಫೇಸ್ ಮಾಸ್ಕ್ ಆಗಿ ಬಳಸಿದರೆ ತ್ವಚೆ ಅಂದ ಹೆಚ್ಚುತ್ತದೆ.

Pic credit - Pintrest

ತುಪ್ಪವು ತುಟಿಗಳು ಮೃದುವಾಗಿಡಲು ಸಹಾಯ ಮಾಡುತ್ತದೆ. ತುಟಿ ಒಡೆದಿದ್ದರೆ ತುಟಿಗಳಿಗೆ ರಾತ್ರಿ ಮಲಗುವ ಮುನ್ನ ತುಪ್ಪ ಹಚ್ಚಿಕೊಳ್ಳಿ.

Pic credit - Pintrest

ಮಲಗುವ ಮುನ್ನ ಒಂದೆರಡು ಹನಿ ತುಪ್ಪವನ್ನು ಕಣ್ಣಿನ ಕೆಳ ಭಾಗದಲ್ಲಿ ಹಚ್ಚಿ ಮಸಾಜ್ ಮಾಡಿ. ಇದರಿಂದ ಡಾರ್ಕ್ ಸರ್ಕಲ್ ಸಮಸ್ಯೆ ದೂರವಾಗುತ್ತದೆ.

Pic credit - Pintrest

ತುಪ್ಪವನ್ನು ಬಾಡಿ ಲೋಷನ್ ಆಗಿ ಬಳಸಬಹುದು. ತೆಂಗಿನೆಣ್ಣೆಗೆ ಒಂದೆರಡು ಹನಿ ತುಪ್ಪ ಬೆರೆಸಿ ಚರ್ಮಕ್ಕೆ ಅನ್ವಯಿಸಿದರೆ ಮೃದುವಾಗುತ್ತದೆ.

Pic credit - Pintrest

ಕೋಪಿಸಿಕೊಳ್ಳುವ ಮಹಿಳೆಯರು ಹೀಗೆ ಇರ್ತಾರಂತೆ