ಮುಖೇಶ್ ಅಂಬಾನಿ, ನೀತಾ ಅಂಬಾನಿ ಡಯೆಟ್ ಹೇಗಿರುತ್ತೆ? ಅವರಿಗೆ ಯಾವ ಆಹಾರ ಫೇವರೆಟ್?

11 JULY 2024

Author: Sushma Chakre

Pic credit - Google

ಏಷ್ಯಾದಲ್ಲಿ ಅತಿ ಶ್ರೀಮಂತ ಉದ್ಯಮಿಯಾಗಿರುವ ಮುಖೇಶ್ ಅಂಬಾನಿ ಇದೀಗ ತಮ್ಮ ಕಿರಿಯ ಪುತ್ರ ಅನಂತ್ ಅಂಬಾನಿಯ ಮದುವೆ ಸಂಭ್ರಮದಲ್ಲಿದ್ದಾರೆ. ಈ ಮದುವೆ ಇಡೀ ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ.

Pic credit - PTI

ಇದರ ನಡುವೆ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಯಾವ ರೀತಿಯ ಆಹಾರವನ್ನು ಸೇವಿಸುತ್ತಾರೆ? ಅವರಿಗೆ ಯಾವ ರೀತಿಯ ಆಹಾರ ಇಷ್ಟ? ಎಂಬ ಬಗ್ಗೆ ಗೂಗಲ್​ನಲ್ಲಿ ಸರ್ಚ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ.

Pic credit - PTI

ಅದ್ದೂರಿ ಜೀವನಶೈಲಿಯ ಹೊರತಾಗಿಯೂ ಮುಖೇಶ್ ಮತ್ತು ನೀತಾ ಅಂಬಾನಿ ಬಹಳ ಸಿಂಪಲ್ ಆದ ಆಹಾರಕ್ರಮವನ್ನು ಅನುಸರಿಸುತ್ತಾರೆ.

Pic credit - PTI

ಪ್ರತಿದಿನ ಅಂಬಾನಿಯ ಬಂಗಲೆ ಆಂಟಿಲಿಯಾದಲ್ಲಿ ಅವರ ವೈಯಕ್ತಿಕ ಬಾಣಸಿಗರು ಆರೋಗ್ಯಕರ, ಕಡಿಮೆ ಕ್ಯಾಲೋರಿ ಊಟವನ್ನು ತಯಾರಿಸುತ್ತಾರೆ.

Pic credit - PTI

ಮನೆಯಲ್ಲಿ ತಯಾರಿಸಿದ ಊಟವನ್ನೇ ಹೆಚ್ಚು ಇಷ್ಟಪಡುವ ಅಂಬಾನಿ ಎಷ್ಟೇ ಕೆಲಸದ ಒತ್ತಡವಿದ್ದರೂ ರಾತ್ರಿ ಒಟ್ಟಿಗೆ ಕುಳಿತು ಊಟವನ್ನು ಮಾಡುತ್ತಾರೆ.

Pic credit - Google

ಅಂಬಾನಿ ಕುಟುಂಬವು ತಮ್ಮ ಅತಿಥಿಗಳಿಗೆ ರುಚಿಕರವಾದ ಔತಣವನ್ನು ನೀಡುತ್ತಿದ್ದರೂ ಪ್ರತಿದಿನ ನಾವು-ನೀವೆಲ್ಲ ಸೇವಿಸುವ ಈ ಸರಳ ಆಹಾರವನ್ನೇ ತಿನ್ನುತ್ತಾರೆ.

Pic credit - PTI

ಮುಖೇಶ್ ಅಂಬಾನಿ ಕೆಲವೊಮ್ಮೆ ಹೊರಗೆ ತಿನ್ನಲು ಇಷ್ಟಪಡುತ್ತಾರೆ. ಆಗ ತಪ್ಪದೇ ಸೇವ್ ಪುರಿ ತಿನ್ನಲು ಮರೆಯುವುದಿಲ್ಲ.

Pic credit - Google

ಅಂಬಾನಿ ದಂಪತಿ ಗುಜರಾತಿ ರೀತಿಯಲ್ಲಿ ತಯಾರಿಸಿದ ದಾಲ್ ಅನ್ನು ಇಷ್ಟಪಡುತ್ತಾರೆ. ಅವರು ಅದನ್ನು ಪ್ರತಿದಿನ ರಾತ್ರಿಯ ಊಟಕ್ಕೆ ಸೇವಿಸುತ್ತಾರೆ.

Pic credit - Google

ಮುಕೇಶ್ ಮತ್ತು ನೀತಾ ಅಂಬಾನಿಗೆ ಮುಂಬೈನ ವಿಶೇಷ ದಹಿ ಆಲೂ ಪುರಿಯೆಂದರೆ ಬಹಳ ಇಷ್ಟ.

Pic credit - Google

ದಕ್ಷಿಣ ಭಾರತೀಯರ ಫೇವರೆಟ್ ತಿಂಡಿಯಾದ ಇಡ್ಲಿ- ಸಾಂಬಾರ್ ಎಂದರೆ ನೀತಾ ಅಂಬಾನಿ ಹಾಗೂ ಮುಖೇಶ್ ಅಂಬಾನಿಗೆ ಬಹಳ ಇಷ್ಟ ಎಂದು ಅವರೇ ಇಂಟರ್​ವ್ಯೂನಲ್ಲಿ ಹೇಳಿಕೊಂಡಿದ್ದಾರೆ.

Pic credit - Google

ದಾಲ್ ಮತ್ತು ರಾಜ್ಮಾದಂತಹ ಮಸೂರದೊಂದಿಗೆ ರೋಟಿ ಸೇವಿಸುವುದು ಮುಖೇಶ್ ಮತ್ತು ನೀತಾ ಅವರ ನೆಚ್ಚಿನ ಊಟವಾಗಿದೆ.

Pic credit - Google