ಭೂಮಿ ಹುಣ್ಣಿಮೆ ಹಬ್ಬ, ಸಿಂಗಾರಗೊಂಡ ಭೂತಾಯಿಗೆ ಸೀಮಂತದ ದಿನ

28 OCT 2023

ಪ್ರತಿವರ್ಷ ಆಚರಿಸುವ ಈ ಭೂಮಿ ಹುಣ್ಣಿಮೆ ಹಬ್ಬವನ್ನು ಮಲೆನಾಡು ಭಾಗದ ಪ್ರತಿಯೊಂದು ಹಳ್ಳಿಯಲ್ಲೂ ವಿಶೇಷವಾಗಿ ಆಚರಿಸುತ್ತಾರೆ

ಮಲೆನಾಡು 

ತಮ್ಮ ಹೊಲ ಗದ್ದೆಗಳಲ್ಲಿ ತಾವೇ ಬಿತ್ತಿರುವ ಬೆಳೆ ಪೈರಾಗುವ ಸಂದರ್ಭದಲ್ಲಿ, ರೈತ ಕುಟುಂಬ ಸದಸ್ಯರೆಲ್ಲರೂ ಸೇರಿ ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುತ್ತಾರೆ

ಹೊಲ ಗದ್ದೆಗಳಲ್ಲಿ

ತಾವೇ ಸಿಂಗರಿಸಿರುವ ಬುಟ್ಟಿಯೊಳಗೆ ಬುತ್ತಿಯನ್ನು ತಂದು ಬೆಳೆದ ಬೆಳೆಗೆ ನೈವೈದ್ಯ ಅರ್ಪಿಸುತ್ತಾರೆ. ಒಂದರ್ಥದಲ್ಲಿ ಇದು ಭೂ ತಾಯಿಗೆ ಸೀಮಂತ ಎಂದೇ ಕರೆಯಲಾಗುತ್ತೆ

ಬುಟ್ಟಿಯೊಳಗೆ ಬುತ್ತಿ

ಇದು ಮಲೆನಾಡಿನ ರೈತ ಸಮೂಹ ಪ್ರತಿ ವರ್ಷ ಆಚರಿಸುವ ವಿಶೇಷ ಭೂಮಿ ಹುಣ್ಣಿಮೆ ಹಬ್ಬ. ರೈತರು ತಾವೇ ಬಿತ್ತಿರುವ ಬೀಜ ಮೊಳಕೆ ಒಡೆದು ಪೈರಾಗುವ ಸಮಯದಲ್ಲಿ ಆಚರಿಸುತ್ತಾರೆ

ರೈತ ಸಮೂಹ

ಮುಂಜಾನೆ ಸೂರ್ಯ ತನ್ನ ಕಿರಣಗಳನ್ನು ಪಸರಿಸುವ ಹೊತ್ತಲ್ಲಿ ಈ ಪೂಜೆ ಮಾಡಲಾಗುತ್ತದೆ. ರೈತರು ಪೂಜಾ ವಸ್ತುಗಳನ್ನು ಹಾಗೂ ನೈವೈದ್ಯಕ್ಕೆ ಬುತ್ತಿಯನ್ನು ಹೊತ್ತು ತಮ್ಮ ತಮ್ಮ ಹೊಲ-ಗದ್ದೆಗಳಿಗೆ ಬರುತ್ತಾರೆ

ಮುಂಜಾನೆ

ಭತ್ತದ ಗದ್ದೆಯ ಒಂದು ಜಾಗದಲ್ಲಿ ಈ ಪೂಜೆಗೆ ರೈತರು ಅಣಿಮಾಡಿಕೊಂಡಿರುತ್ತಾರೆ. ಭತ್ತದ ಸಸಿಗೆ ಒಂದು ದಿನದ ಮುಂಚೆಯೇ ಬಾಳೆ ದಿಂಡು, ಕಬ್ಬಿನ ಬೆಳೆಯ ಚಪ್ಪರ ಹಾಕಿ ರೈತರು ಪೂಜೆಗೆ ಸಿದ್ದಪಡಿಸಿಕೊಂಡಿರುತ್ತಾರೆ

ಒಂದು ಜಾಗದಲ್ಲಿ

ಈ ಬೆಳೆಗೆ ಹಸಿರು ಬಳೆ, ಸೀರೆ, ಕುಪ್ಪಸ ಮತ್ತು ತಾಳಿಯನ್ನು ಇಟ್ಟು ಮಹಿಳೆಯರು, ಮಕ್ಕಳು ಸೇರಿದಂತೆ ಮನೆ ಮಂದಿಯೆಲ್ಲ ವಿಶೇಷ ಪೂಜೆ ಸಲ್ಲಿಸುತ್ತಾರೆ

ಬೆಳೆಗೆ ಹಸಿರು ಬಳೆ

ನಂತರ ಮಂಗಳಾರತಿ ಮಾಡುವ ಮೂಲಕ ವರ್ಷ ಪೂರ್ತಿ ಬೆಳೆದ ಬೆಳೆಯನ್ನು ರಕ್ಷಿಸು ತಾಯಿ ಎಂದು ಬೇಡಿಕೊಳ್ಳುತ್ತಾರೆ.

ಬೆಳೆಯನ್ನು ರಕ್ಷಿಸು

ಅಕ್ಕಿ ಹಿಟ್ಟಿನಿಂದ ಬಿಡಿಸಿದ ರಂಗೋಲಿಯಿಂದ ಚಿತ್ರಿಸಲಾದ ಬುಟ್ಟಿಯೊಳಗೆ ಬುತ್ತಿಯನ್ನು ತಂದು ಭೂತಾಯಿಗೆ ಅರ್ಪಿಸುತ್ತಾರೆ

ಬುಟ್ಟಿ

ಕುಟುಂಬದೊಂದಿಗೆ ಸಮಯ ಕಳೆಯಲು ಇಷ್ಟಪಡುವ ಟಾಪ್ 7 ರಾಶಿಯವರು