Author: Sushma Chakre

ಚರ್ಮ ಸುಕ್ಕಾಗದಂತೆ ತಡೆಯಲು ರಾತ್ರಿ ಈ ಎಣ್ಣೆಯ ಮಸಾಜ್ ಮಾಡಿ

12 Dec 2023

Author: Sushma Chakre

ನಮಗೆ ವಯಸ್ಸಾದಂತೆ ನಮ್ಮ ಚರ್ಮವು ವಿವಿಧ ಬದಲಾವಣೆಗಳಿಗೆ ಒಳಗಾಗುತ್ತದೆ. ರಾತ್ರಿ ವೇಳೆ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳುವುದರಿಂದ ತ್ವಚೆಯ ಆರೋಗ್ಯ ಸುಧಾರಿಸುತ್ತದೆ. ತೆಂಗಿನ ಎಣ್ಣೆ ಹಾನಿಕಾರಕ ಸೂಕ್ಷ್ಮಾಣುಜೀವಿಗಳಿಂದ ಚರ್ಮವನ್ನು ರಕ್ಷಿಸುತ್ತದೆ. ತೆಂಗಿನ ಎಣ್ಣೆಯಲ್ಲಿರುವ ಕೊಬ್ಬಿನಾಮ್ಲಗಳಾದ ಲಾರಿಕ್ ಮತ್ತು ಕ್ಯಾಪ್ರಿಕ್ ಆಮ್ಲಗಳು ತಮ್ಮ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳಿಂದಾಗಿ ಚರ್ಮವನ್ನು ಆರೋಗ್ಯಕರವಾಗಿಡುತ್ತವೆ.

ತೆಂಗಿನೆಣ್ಣೆಯ ಮಸಾಜ್

ತೆಂಗಿನೆಣ್ಣೆ ನಮ್ಮ ಚರ್ಮದ ಮೇಲೆ ಬೆಳೆಯುವ ಹಾನಿಕಾರಕ ಸೂಕ್ಷ್ಮಾಣುಜೀವಿಗಳನ್ನು ಕೊಲ್ಲುತ್ತವೆ. ಫೋಲಿಕ್ಯುಲೈಟಿಸ್ ಮತ್ತು ಸೆಲ್ಯುಲೈಟಿಸ್‌ನಂತಹ ಚರ್ಮದ ಸೋಂಕುಗಳಾದ ಶಿಲೀಂಧ್ರಗಳು ಮತ್ತು ಬ್ಯಾಕ್ಟೀರಿಯಾಗಳಿಂದ ಮೊಡವೆ ಉಂಟಾಗುತ್ತವೆ.

ತೆಂಗಿನೆಣ್ಣೆಯ ಉಪಯೋಗ

ನಮ್ಮ ಚರ್ಮಕ್ಕೆ ಪೋಷಣೆಯ ಅಗತ್ಯವಿರುತ್ತದೆ. ಅದರಲ್ಲೂ ವಿಶೇಷವಾಗಿ ನಾವು ವಯಸ್ಸಾದಂತೆ ನಮ್ಮ ಚರ್ಮ ಸುಕ್ಕುಗಟ್ಟುವುದು ಸಹಜ. ಅದನ್ನು ಸರಿಪಡಿಸಲು ನಮ್ಮ ಚರ್ಮದ ಆರೈಕೆಯ ದಿನಚರಿಯಲ್ಲಿ ರಾತ್ರಿಯ ವೇಳೆ ತೆಂಗಿನ ಎಣ್ಣೆಯ ಮಸಾಜ್ ಮಾಡಿಕೊಳ್ಳುವುದು ಅಗತ್ಯ.

ತೆಂಗಿನ ಎಣ್ಣೆಯ ಮಸಾಜ್‌ನ ಶಕ್ತಿ

ತೆಂಗಿನೆಣ್ಣೆಯ ಮೃದುವಾದ ಮಸಾಜ್ ಮುಖದ ಸ್ನಾಯುಗಳನ್ನು ವಿಶ್ರಾಂತಿ ಮಾಡುವುದು ಮಾತ್ರವಲ್ಲದೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ದೃಢವಾದ, ಬಿಗಿಯಾದ ಚರ್ಮವನ್ನು ನೀಡುತ್ತದೆ.

ಚರ್ಮವನ್ನು ಬಿಗಿಯಾಗಿಸುತ್ತದೆ

ಸೌಮ್ಯವಾದ ಕ್ಲೆನ್ಸರ್​ನೊಂದಿಗೆ ಪ್ರಾರಂಭಿಸಿ, ನಿಮ್ಮ ಮುಖದ ಕಲ್ಮಶಗಳನ್ನು ತೊಡೆದುಹಾಕಲು ನಿಮ್ಮ ಮುಖವನ್ನು ತೊಳೆಯಿರಿ.

ಮುಖಕ್ಕೆ ತೆಂಗಿನೆಣ್ಣೆ ಹಚ್ಚುವ ವಿಧಾನ

ಚರ್ಮದ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸಲು ತೆಂಗಿನ ಎಣ್ಣೆಯನ್ನು ನಿಧಾನವಾಗಿ ಬಿಸಿ ಮಾಡಿ.

ತೆಂಗಿನ ಎಣ್ಣೆಯನ್ನು ಬೆಚ್ಚಗಾಗಿಸಿ

ಮುಖದ ಮೇಲೆ ವೃತ್ತಾಕಾರವಾಗಿ ಮಸಾಜ್ ಮಾಡಿ. ರಾತ್ರಿ ವೇಳೆ ಕನಿಷ್ಠ 10-15 ನಿಮಿಷಗಳ ಕಾಲ ಮಸಾಜ್ ಮಾಡಿ.

ಮಸಾಜ್ ತಂತ್ರ