Pic credit - iStock
Author: Sushma Chakre
ದೀರ್ಘಕಾಲದವರೆಗೆ ಟಾಯ್ಲೆಟ್ ಸೀಟ್ ಮೇಲೆ ಕುಳಿತುಕೊಳ್ಳುವುದು ಹೆಮೊರೊಯಿಡ್ಸ್ ಮತ್ತು ದುರ್ಬಲಗೊಂಡ ಶ್ರೋಣಿಯ ಸ್ನಾಯುಗಳು ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.
Pic credit - iStock
ಹೆಚ್ಚಿನ ಜನರು ತಮ್ಮ ಫೋನ್‌ಗಳನ್ನು ಬಾತ್ರೂಮ್ಗೆ ಕೊಂಡೊಯ್ಯುವುದರಿಂದ 15 ನಿಮಿಷದಿಂದ ಅರ್ಧ ಗಂಟೆಯವರೆಗೂ ಟಾಯ್ಲೆಟ್ ರೂಮಿನೊಳಗೆ ಕುಳಿತು ಮೊಬೈಲ್ ಬ್ರೌಸ್ ಮಾಡುತ್ತಾ ಸಮಯ ಕಳೆಯುತ್ತಾರೆ.
Pic credit - iStock
ಮೇಲ್ನೋಟಕ್ಕೆ ಏನೂ ತೊಂದರೆಯಾಗುವುದಿಲ್ಲ ಎಂದೆನಿಸುತ್ತದೆಯಾದರೂ, ಸಿಎನ್ಎನ್ ವರದಿಯ ಪ್ರಕಾರ, ಶೌಚಾಲಯದಲ್ಲಿ 10 ನಿಮಿಷಗಳಿಗಿಂತ ಹೆಚ್ಚು ಸಮಯವನ್ನು ಕಳೆಯುವುದು ಒಳ್ಳೆಯದಲ್ಲ ಎಂದು ವೈದ್ಯರು ಹೇಳುತ್ತಾರೆ.
Pic credit - iStock
ಟಾಯ್ಲೆಟ್ ಸೀಟ್ ಮೇಲೆ ಕುಳಿತುಕೊಳ್ಳುವ ಸ್ಥಾನವು ದೇಹವನ್ನು ವಿಶಿಷ್ಟ ಅನನುಕೂಲತೆಯನ್ನು ಉಂಟುಮಾಡುತ್ತದೆ. ಗುರುತ್ವಾಕರ್ಷಣೆಯು ಮಾನವರನ್ನು ಭೂಮಿಗೆ ಲಂಗರು ಹಾಕುವಂತೆ ಮಾಡುತ್ತದೆ. ಆ ವೇಳೆ ಹೃದಯಕ್ಕೆ ರಕ್ತವನ್ನು ಪಂಪ್ ಮಾಡಲು ದೇಹವು ಕಷ್ಟಪಟ್ಟು ಕೆಲಸ ಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ.
Pic credit - iStock
ವೆಸ್ಟರ್ನ್ ಟಾಯ್ಲೆಟ್ನ ಅಂಡಾಕಾರದ ಆಸನವು ಗುದನಾಳಕ್ಕೆ ಒತ್ತಡ ಉಂಟುಮಾಡುತ್ತದೆ. ಇದು ಗುದನಾಳದ ಹಿಗ್ಗುವಿಕೆಯಂತಹ ಪರಿಸ್ಥಿತಿಗಳಿಗೆ ಕಾರಣವಾಗಬಹುದು.
Pic credit - iStock
ಇದು ಊದಿಕೊಂಡ ರಕ್ತನಾಳಗಳಿಗೆ ಕಾರಣವಾಗಿ, ಹೆಮೊರೊಯಿಡ್ಸ್ ಅಪಾಯವನ್ನು ಹೆಚ್ಚಿಸುತ್ತದೆ. ದೀರ್ಘಾವಧಿಯವರೆಗೆ ಕುಳಿತುಕೊಳ್ಳುವುದು ಸಹ ಆಯಾಸವನ್ನು ಹೆಚ್ಚಿಸುತ್ತದೆ, ಸಮಸ್ಯೆಯನ್ನು ಇನ್ನಷ್ಟು ಉಲ್ಬಣಗೊಳಿಸುತ್ತದೆ.
Pic credit - iStock
ಮಲಬದ್ಧತೆ ಇರುವವರು ಕೂಡ 10 ನಿಮಿಷಗಳಿಗೂ ಹೆಚ್ಚು ಕಾಲ ಟಾಯ್ಲೆಟ್ನಲ್ಲಿರುವುದು ಒಳ್ಳೆಯದಲ್ಲ. ಅಲ್ಲೇ ಕುಳಿತು ಪ್ರೆಶರ್ ಹಾಕುವ ಬದಲಾಗಿ, ಹೆಚ್ಚು ನೀರು ಕುಡಿಯುವುದು, ಹೆಚ್ಚಿನ ಫೈಬರ್ ಆಹಾರದ ಸೇವನೆ ರೂಢಿಸಿಕೊಳ್ಳುವುದು ಉತ್ತಮ.
Pic credit - iStock
ಮಲಬದ್ಧತೆ ಮೂರು ವಾರಗಳವರೆಗೆ ಮುಂದುವರಿದರೆ, ಆರೋಗ್ಯ ತಜ್ಞರನ್ನು ಸಂಪರ್ಕಿಸಿ. ಹೆಚ್ಚು ಹೊತ್ತು ಟಾಯ್ಲೆಟ್ನಲ್ಲಿ ಕೂರುವ ಅಭ್ಯಾಸವನ್ನು ಕಡಿಮೆ ಮಾಡಿ.
Pic credit - iStock