Author: Sushma Chakre

ಈ 9 ಹಣ್ಣು ಮತ್ತು ತರಕಾರಿಗಳ ಸಿಪ್ಪೆಯನ್ನು ಎಂದೂ ಎಸೆಯಬೇಡಿ

ಈ 9 ಹಣ್ಣು ಮತ್ತು ತರಕಾರಿಗಳ ಸಿಪ್ಪೆಯನ್ನು ಎಂದೂ ಎಸೆಯಬೇಡಿ

10 ಜನವರಿ 2024

Author: Sushma Chakre

ಸೇಬು ಹಣ್ಣಿನ ಸಿಪ್ಪೆ ತೆಗೆದು ತಿನ್ನುವ ಅಭ್ಯಾಸ ಹಲವರಿಗಿದೆ. ಆದರೆ, ಇದರ ಸಿಪ್ಪೆಗಳು ಹಣ್ಣಿನ ಅರ್ಧದಷ್ಟು ವಿಟಮಿನ್ ಇ ಅಂಶವನ್ನು ಹೊಂದಿರುತ್ತವೆ. ಹೀಗಾಗಿ, ಅದನ್ನು ಎಸೆಯಬೇಡಿ. ಸೇಬಿನ ಸಿಪ್ಪೆಯು ವಿಟಮಿನ್ ಸಿ, ವಿಟಮಿನ್ ಎ ಮತ್ತು ಪೊಟ್ಯಾಸಿಯಮ್‌ನಿಂದ ಕೂಡಿದೆ.

ಸೇಬು

ಕಿವಿ ಹಣ್ಣುಗಳ ಸಿಪ್ಪೆಯನ್ನು ತೆಗೆಯುವುದು ಕಷ್ಟದ ಕೆಲಸ. ಆದರೂ ಈ ಸಿಪ್ಪೆ ಹಣ್ಣಿನ ಒಳಭಾಗದಂತೆಯೇ ರುಚಿಕರವಾಗಿರುತ್ತದೆ. ಕಿವಿ ಹಣ್ಣಿನ ಸಿಪ್ಪೆಯನ್ನು ಕೆಲವರು ಎಸೆಯುತ್ತಾರೆ. ಆದರೆ, ಈ ಸಿಪ್ಪೆ ಸಾಕಷ್ಟು ಫೈಬರ್ ಮತ್ತು ವಿಟಮಿನ್ ಸಿಯಿಂದ ತುಂಬಿರುತ್ತದೆ.

ಕಿವಿ ಹಣ್ಣು

ಬಾಳೆಹಣ್ಣಿನ ಸಿಪ್ಪೆಯು ಫೈಬರ್‌ನ ಶಕ್ತಿ ಕೇಂದ್ರವಾಗಿದೆ ಮತ್ತು ಹೆಚ್ಚಿನ ಪ್ರಮಾಣದ ಟ್ರಿಪ್ಟೊಫಾನ್ ಅನ್ನು ಹೊಂದಿರುತ್ತದೆ. ಇದು ನಿಮ್ಮ ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸಿಪ್ಪೆಯು ಕಹಿ ರುಚಿಯನ್ನು ಹೊಂದಿದ್ದರೂ ಅದರ ಆರೋಗ್ಯ ಪ್ರಯೋಜನಗಳು ಹಲವು.

ಬಾಳೆಹಣ್ಣುಗಳು

ಸೀಬೆ ಅಥವಾ ಪೇರಲೆ ತುಂಬಾ ರುಚಿಕರ ಮತ್ತು ತಿರುಳಿನಿಂದ ಕೂಡಿದೆ. ಇದರಲ್ಲಿ ಉತ್ಕರ್ಷಣ ನಿರೋಧಕಗಳು, ವಿಟಮಿನ್‌ಗಳು, ಫೈಬರ್ ಮತ್ತು ಖನಿಜಗಳಲ್ಲಿ ಅಧಿಕವಾಗಿರುತ್ತದೆ. ಆದ್ದರಿಂದ, ಈ ಹಣ್ಣನ್ನು ಅದರ ಸಿಪ್ಪೆಯೊಂದಿಗೆ ತಿನ್ನಲು ಮರೆಯದಿರಿ. ಇದು ನಿಮ್ಮನ್ನು ಹೈಡ್ರೇಟ್ ಮಾಡುತ್ತದೆ ಮತ್ತು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಪೇರಲೆ

ಆವಕಾಡೊಗಳು ಆರೋಗ್ಯಕರ ಮತ್ತು ಪೌಷ್ಟಿಕವಾಗಿದೆ. ಇದರ ಸಿಪ್ಪೆಯನ್ನು ಸಾಕಷ್ಟು ಬಳಸಲಾಗುವುದಿಲ್ಲ. ಇದರ ಸಿಪ್ಪೆಯನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು. ಅದನ್ನು ಎಸೆಯುವ ಬದಲು ಗುಲಾಬಿ ಬಣ್ಣದಲ್ಲಿ ಬಟ್ಟೆಯನ್ನು ಬಣ್ಣ ಮಾಡಲು ಬಳಸಿ

ಆವಕಾಡೊ

ಮಾವಿನ ಸಿಪ್ಪೆ ಕ್ಯಾರೊಟಿನಾಯ್ಡ್‌ಗಳು, ಪಾಲಿಫಿನಾಲ್‌ಗಳು ಮತ್ತು ಒಮೆಗಾ -3 ಕೊಬ್ಬಿನಾಮ್ಲಗಳಂತಹ ಅಗತ್ಯ ಪೋಷಕಾಂಶಗಳಿಂದ ತುಂಬಿರುತ್ತದೆ. ಇದು ಒಟ್ಟಾರೆ ಚರ್ಮಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಕೆಲವು ಮಾವಿನ ಹಣ್ಣನ್ನು ಸಿಪ್ಪೆಯೊಂದಿಗೆ ತಿನ್ನಲು ಸ್ವಲ್ಪ ಕಷ್ಟವಾಗಬಹುದು. ಆದರೆ, ಮಾವಿನ ಹಣ್ಣಿನ ಸಿಪ್ಪೆಯನ್ನು ಪದಾರ್ಥಗಳಿಗೆ ಹಾಕಬಹುದು.

ಮಾವು

ಆಲೂಗೆಡ್ಡೆಯ ಸಿಪ್ಪೆ ಫೈಬರ್ ಮತ್ತು ವಿಟಮಿನ್‌ಗಳಿಂದ ತುಂಬಿರುತ್ತದೆ. ಅವುಗಳ ಸಿಪ್ಪೆ ತೆಗೆಯುವುದರಿಂದ ನೀವು ಆಹಾರವನ್ನು ವ್ಯರ್ಥ ಮಾಡುವುದಲ್ಲದೆ ಪೋಷಕಾಂಶಗಳನ್ನು ಕಳೆದುಕೊಳ್ಳುತ್ತೀರಿ.

ಆಲೂಗಡ್ಡೆ

ಈರುಳ್ಳಿ ಸಿಪ್ಪೆ ಅಪಾರ ಪ್ರಮಾಣದ ಪರಿಮಳವನ್ನು ಹೊಂದಿರುತ್ತದೆ.  ನೀವು ಈರುಳ್ಳಿ ಸಿಪ್ಪೆ ತೆಗೆಯುವಾಗ ಅದರ ಒಳಭಾಗದ ಸಿಪ್ಪೆಯನ್ನು ಸಾಂಬಾರಿಗೆ ಬಳಸಬಹುದು. ಅದರ ಹೊರಗಿನ ಸಿಪ್ಪೆಯನ್ನು ಗಿಡಗಳ ಬುಡಕ್ಕೆ ಹಾಕಿದರೆ ಗಿಡ ಸೊಂಪಾಗಿ ಬೆಳೆಯುತ್ತದೆ.

ಈರುಳ್ಳಿ

ಕ್ಯಾರೆಟ್‌ಗಳು ತಮ್ಮ ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ. ಕ್ಯಾರೆಟ್​ನ ಸಿಪ್ಪೆ ಫೈಟೊನ್ಯೂಟ್ರಿಯೆಂಟ್‌ಗಳಲ್ಲಿ ಸಮೃದ್ಧವಾಗಿದೆ. ಆದ್ದರಿಂದ, ಅದನ್ನು ಸೇವಿಸುವಾಗ ಸಿಪ್ಪೆ ತೆಗೆಯುವ ಬದಲು ಹಾಗೆಯೇ ಬಳಸಿ.

ಕ್ಯಾರೆಟ್