Author: Sushma Chakre

ಲೇಡಿ ಸೂಪರ್ ಸ್ಟಾರ್ ನಯನತಾರಾ ಫಿಟ್‌ನೆಸ್ ರಹಸ್ಯವೇನು?

ಲೇಡಿ ಸೂಪರ್ ಸ್ಟಾರ್ ನಯನತಾರಾ ಫಿಟ್‌ನೆಸ್ ರಹಸ್ಯವೇನು?

17 ಜನವರಿ 2024

ಇತ್ತೀಚೆಗಷ್ಟೇ ಬಿಡುಗಡೆಯಾದ ಅನ್ನಪೂರ್ಣಿ ಸಿನಿಮಾದಲ್ಲಿ ಶ್ರೀರಾಮ ಹಾಗೂ ಹಿಂದೂ ಧರ್ಮಕ್ಕೆ ಅವಮಾನವಾಗುವ ರೀತಿಯ ಡೈಲಾಗ್​ಗಳಿವೆ ಎಂಬ ಕಾರಣಕ್ಕೆ ದೇಶಾದ್ಯಂತ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ವಿವಾದಕ್ಕೀಡಾಗಿದ್ದ ನಟಿ

'ಅನ್ನಪೂರ್ಣಿ' ಸಿನಿಮಾ ಮೂಲಕ ಮತ್ತೆ ಚರ್ಚೆಯಲ್ಲಿರುವ ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್ ನಯನತಾರಾ ತಮ್ಮ ಫಿಟ್‌ನೆಸ್ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ.

ಲೇಡಿ ಸೂಪರ್ ಸ್ಟಾರ್

2 ದಶಕಗಳಿಂದ ಚಿತ್ರರಂಗದಲ್ಲಿರುವ ನಯನತಾರಾ ಇಂದಿಗೂ ದಕ್ಷಿಣ ಭಾರತದ ಟಾಪ್​ ನಟಿಯಲ್ಲೊಬ್ಬರು. ದಕ್ಷಿಣ ಭಾರತದ ಬಹುತೇಕ ಎಲ್ಲ ಸ್ಟಾರ್ ನಟರ ಜೊತೆ ಅವರು ಅಭಿನಯಿಸಿದ್ದಾರೆ.

ದಕ್ಷಿಣದ ಟಾಪ್ ನಟಿ

21 ವರ್ಷಗಳಿಂದ ಒಂದೇ ರೀತಿಯ ಫಿಟ್​ನೆಸ್ ಮೇಂಟೇನ್ ಮಾಡಿರುವ ನಯನತಾರಾ ತಮ್ಮ ಫಿಟ್​ನೆಸ್​ಗೆ ಕಾರಣವೇನೆಂಬುದರ ಬಗ್ಗೆ ಮಾಹಿತಿ ನೀಡಿದ್ದಾರೆ.

ಫಿಟ್​ನೆಸ್ ಗುಟ್ಟು

ನಯನತಾರಾ ದಿನವೂ ಯೋಗ ಮಾಡುವುದನ್ನು ಮಿಸ್ ಮಾಡುವುದಿಲ್ಲವಂತೆ. ಅವರು ದಿನವೂ ಯೋಗ ಮತ್ತು ಧ್ಯಾನದ ಸಮಯಕ್ಕೆ ಸಾಕಷ್ಟು ಸಮಯವನ್ನು ಮೀಸಲಿಡುತ್ತಾರೆ. ಇದರಿಂದ ಮನಸು ಶಾಂತವಾಗಿರುವುದು ಮಾತ್ರವಲ್ಲದೆ, ಚರ್ಮದ ಆರೋಗ್ಯಕ್ಕೂ ಒಳ್ಳೆಯದು.

ಯೋಗ ಮಿಸ್ ಮಾಡಲ್ಲ

ನಯನತಾರಾ ತನ್ನ ನಿದ್ರೆಯ ಸಮಯದೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ತನ್ನ ದೇಹಕ್ಕೆ ವಿಶ್ರಾಂತಿ ನೀಡಲು ನಯನತಾರಾ ದಿನವೂ 8 ಗಂಟೆಗಳ ಕಾಲ ನಿದ್ರೆಯನ್ನು ಮಾಡುತ್ತಾರೆ.

ನಿದ್ರೆಯಲ್ಲಿ  ರಾಜಿ ಇಲ್ಲ

ದೇಹಕ್ಕೆ ಸರಿಯಾದ ವ್ಯಾಯಾಮ ಸಿಕ್ಕರೆ ಮಾತ್ರ ಕೊಬ್ಬು ಕರಗುತ್ತದೆ ಎಂಬುದು ನಯನತಾರಾ ನಂಬಿಕೆ. ಹೀಗಾಗಿ, ದಿನವೂ ಜಿಮ್ ವರ್ಕ್​ಔಟ್ ಮಾಡುತ್ತಾರೆ. ಪೈಲೇಟ್​ಗಳನ್ನು ಮಾಡುತ್ತಾರೆ ಮತ್ತು ಸಾಕಷ್ಟು ತೂಕವನ್ನು ಎತ್ತುವ ಕೆಲಸವನ್ನು ಅವರು ಮಾಡುತ್ತಾರೆ.

ಪ್ರತಿದಿನ ಜಿಮ್

ನಯನತಾರಾ ಎಳನೀರಿನ ದೊಡ್ಡ ಅಭಿಮಾನಿ. ಅವರು ದಿನಕ್ಕೆ ಸುಮಾರು 5 ಬಾಟಲಿ ಎಳನೀರು ಕುಡಿಯುತ್ತಾರೆ. ಅದು ತನ್ನ ದೇಹವನ್ನು ಮತ್ತು ತ್ವಚೆಯನ್ನು ಹೊಳೆಯುವಂತೆ ಮಾಡಲು ದೇಹವನ್ನು ಸದಾ ಹೈಡ್ರೇಟ್ ಆಗಿಟ್ಟುಕೊಳ್ಳುತ್ತಾರೆ.

ನೀರು ಅತ್ಯಗತ್ಯ

ನಯನತಾರಾ ಅವರಿಗೆ ಅಡುಗೆ ಮಾಡಲು ಬಹಳ ಇಷ್ಟವಂತೆ. ತಮ್ಮದೇ ಸ್ಟೈಲ್​ನಲ್ಲಿ ಅವರು ವಿಶೇಷ ಅಡುಗೆ ಮಾಡುತ್ತಾರೆ. ದಿನವೂ ಬೆಳಗ್ಗೆ ಅವರು ಮೊಟ್ಟೆ ಮತ್ತು ಧಾನ್ಯಗಳನ್ನು ಸೇವಿಸುತ್ತಾರೆ. ಜೊತೆಗೆ 1 ಗ್ಲಾಸ್ ತಾಜಾ ಹಣ್ಣಿನ ಜ್ಯೂಸ್ ಕುಡಿಯುತ್ತಾರೆ.

ಆರೋಗ್ಯಕರ ಉಪಹಾರ

ಆಹಾರದ ವಿಷಯದಲ್ಲಿ ನಯನತಾರಾ ಬಹಳ ಕಟ್ಟುನಿಟ್ಟು. ಅವರು ಜಂಕ್ ಫುಡ್ ತಿನ್ನುವುದಿಲ್ಲ. ಮನೆಯಲ್ಲಿ ತಯಾರಿಸಿದ ಆಹಾರವನ್ನು ಮಾತ್ರ ತಿನ್ನುತ್ತಾರೆ. ಸಂಸ್ಕರಿಸಿದ ಆಹಾರವನ್ನು ಆದಷ್ಟೂ ಕಡಿಮೆ ತಿನ್ನುತ್ತಾರೆ. ಮನೆಯಲ್ಲೇ ತಯಾರಿಸಿದ ದಕ್ಷಿಣ ಭಾರತೀಯ ಆಹಾರವೆಂದರೆ ಅವರಿಗೆ ಬಹಳ ಇಷ್ಟ.

ಜಂಕ್​ಫುಡ್​ ದೂರ

ದಕ್ಷಿಣ ಭಾರತೀಯ ಅಡುಗೆಯ ದೊಡ್ಡ ಅಭಿಮಾನಿಯಾಗಿರುವ ನಯನತಾರಾ ಬ್ರೌನ್ ಬ್ರೆಡ್ ಅನ್ನು ರಸಂನೊಂದಿಗೆ ತಿನ್ನಲು ಇಷ್ಟಪಡುತ್ತಾರೆ. ಇದರಲ್ಲಿ ಫೈಬರ್ ಅಂಶ ಹೆಚ್ಚಾಗಿರುತ್ತದೆ. ಇದರ ಜೊತೆಗೆ ತರಕಾರಿಗಳನ್ನು ತಿನ್ನುತ್ತಾರೆ. ದೇಹಕ್ಕೆ ಬೇಕಾದ ಪ್ರೋಟೀನ್​ಗಾಗಿ ಅವರು ಮೀನು ಅಥವಾ ಸುಟ್ಟ ಕೋಳಿಯ ಮಾಂಸವನ್ನು ಸೇವಿಸುತ್ತಾರೆ.

ಪೌಷ್ಟಿಕಾಂಶದ ಊಟ

ನಯನತಾರಾ ಉತ್ತಮ ಮತ್ತು ಆರೋಗ್ಯಕರ ನಿದ್ರೆಗಾಗಿ ರಾತ್ರಿಯ ವೇಳೆ ಸ್ವಲ್ಪವೇ ಆಹಾರ ಸೇವಿಸುತ್ತಾರೆ. ಮೊಸರಿನೊಂದಿಗೆ ಸಣ್ಣ ಬಟ್ಟಲು ಅನ್ನ ಅಥವಾ ಚಪಾತಿಯೊಂದಿಗೆ ಸ್ವಲ್ಪ ತರಕಾರಿ ದಾಲ್ ಅನ್ನು ತಿನ್ನುತ್ತಾರೆ.

ಲಘು ಭೋಜನ