ಕೂದಲು ಬಿಳಿಯಾಗುವುದನ್ನು ತಡೆಯುವ ಹೇರ್ ಆಯಿಲ್ ಮಾಡುವುದು ಹೇಗೆ?
28 Dec 2023
Author: Sushma Chakre
ಎಲ್ಲ ಕೂದಲು ಬಿಳಿ ಬಣ್ಣಕ್ಕೆ ತಿರುಗುವವರೆಗೆ ಕಾಯುವುದು ಬುದ್ಧಿವಂತರ ಲಕ್ಷಣವಲ್ಲ. ಕೂದಲು ಬಿಳಿಯಾಗುವ ಮೊದಲೇ ಆ ಬಗ್ಗೆ ಎಚ್ಚರ ವಹಿಸುವುದು ಉತ್ತಮ. ಆದ್ದರಿಂದ, ನಿಮ್ಮ ಕೂದಲು ಮತ್ತಷ್ಟು ಬೂದು ಬಣ್ಣಕ್ಕೆ ತಿರುಗುವುದನ್ನು ತಡೆಯಲು ಈ ಹೇರ್ ಆಯಿಲ್ ಸಹಾಯ ಮಾಡುತ್ತದೆ.
ಬಿಳಿ ಕೂದಲಿನಿಂದ ಬಳಲುತ್ತಿದ್ದೀರಾ?
ಕೂದಲಿಗೆ ನೈಸರ್ಗಿಕವಾಗಿ ಕಪ್ಪು ಬಣ್ಣ ನೀಡಲು ಮನೆಯಲ್ಲಿ ತಯಾರಿಸಿದ ಎಣ್ಣೆಗೆ ಬೇಕಾಗುವ ಕೆಲವು ಪದಾರ್ಥಗಳು ಇಲ್ಲಿವೆ.
ಕೂದಲನ್ನು ಕಪ್ಪಾಗಿಸುವ ಎಣ್ಣೆ
ಈ ಎಣ್ಣೆ ತಯಾರಿಸಲು 3ರಿಂದ 4 ನೆಲ್ಲಿಕಾಯಿಗಳನ್ನು ತೆಗೆದುಕೊಳ್ಳಿ.
ನೆಲ್ಲಿಕಾಯಿ
ಅದರ ಜೊತೆಗೆ 4 ಚಮಚ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಳ್ಳಿ.
ತೆಂಗಿನ ಎಣ್ಣೆ
ಒಂದು ಹಿಡಿ ಕರಿಬೇವಿನ ಎಲೆಗಳನ್ನು ತೆಗೆದುಕೊಳ್ಳಿ.
ಕರಿಬೇವು
ತೆಂಗಿನ ಎಣ್ಣೆಯೊಂದಿಗೆ ನೆಲ್ಲಿಕಾಯಿ ಮತ್ತು ಕರಿಬೇವಿನ ಎಲೆಗಳನ್ನು ಒಂದು ಪಾತ್ರೆಯಲ್ಲಿ 15 ನಿಮಿಷಗಳ ಕಾಲ ಬಿಸಿ ಮಾಡಿ. ನಂತರ ಸ್ಟೌವ್ ಆಫ್ ಮಾಡಿ, ಅದು ತಣ್ಣಗಾಗುವವರೆಗೆ ಕಾಯಿರಿ.
ಎಣ್ಣೆ ತಯಾರಿಸುವ ವಿಧಾನ
ಬಳಿಕ ಆ ಎಣ್ಣೆಯನ್ನು ಸೋಸಿಕೊಳ್ಳಿ. ಅದನ್ನು ನಿಮಗೆ ಉಪಯೋಗಿಸಲು ಅನುಕೂಲವಾಗುವ ಗಾಜಿನ ಬಾಟಲಿ ಅಥವಾ ಸ್ಟೀಲ್ ಬಾಟಲಿಯಲ್ಲಿ ಹಾಕಿಟ್ಟುಕೊಳ್ಳಿ.
ಎಣ್ಣೆಯನ್ನು ಸೋಸಿಕೊಳ್ಳಿ
ಈ ಎಣ್ಣೆಯನ್ನು ವಾರದಲ್ಲಿ 2ರಿಂದ 3 ಬಾರಿ ಕೂದಲಿಗೆ ಹಚ್ಚಿ, ಮೂರು ಗಂಟೆಗಳ ಬಳಿಕ ತಲೆ ಕೂದಲನ್ನು ತೊಳೆಯಿರಿ.