ಚಳಿಗಾಲದಲ್ಲಿ ನಿಮ್ಮ ಚರ್ಮವನ್ನು ರಕ್ಷಿಸುವ 7 ಸೂಪರ್‌ಫುಡ್‌ಗಳಿವು

23 Nov 2023

ಗೆಣಸಿನಲ್ಲಿ ವಿಟಮಿನ್ ಎ ಮತ್ತು ಬೀಟಾ-ಕ್ಯಾರೋಟಿನ್ ಸಮೃದ್ಧವಾಗಿದೆ, ಇದು ಚಳಿಗಾಲದ ಕಠಿಣ ಪರಿಣಾಮಗಳಿಂದ ಚರ್ಮವನ್ನು ಸರಿಪಡಿಸುತ್ತದೆ ಮತ್ತು ರಕ್ಷಿಸುತ್ತದೆ.

ಗೆಣಸು

ಪಾಲಕ್ ಕಬ್ಬಿಣದ ಉತ್ತಮ ಮೂಲವಾಗಿದೆ. ಇದರಲ್ಲಿ ವಿಟಮಿನ್ ಇ, ಎ ಮತ್ತು ಸಿ ಇರುತ್ತದೆ. ಇವೆಲ್ಲವೂ ಚರ್ಮದ ದುರಸ್ತಿ ಪ್ರಕ್ರಿಯೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

ಪಾಲಕ್ ಸೊಪ್ಪು

ಖರ್ಜೂರ ವಿಟಮಿನ್, ಖನಿಜಗಳು ಮತ್ತು ಫೈಬರ್ ಗಳ ಉತ್ತಮ ಮೂಲವಾಗಿದೆ. ಕ್ಯಾಲ್ಸಿಯಂ ಸಮೃದ್ಧವಾಗಿರುವ ಖರ್ಜೂರವು ಮೂಳೆ ಮತ್ತು ಹಲ್ಲುಗಳನ್ನು ಬಲವಾಗಿಡಲು ಸಹಾಯ ಮಾಡುತ್ತದೆ.

ಖರ್ಜೂರ

ನಟ್ಸ್​ ಮತ್ತು ಸೀಡ್ಸ್​ ಉತ್ಕರ್ಷಣ ನಿರೋಧಕಗಳು, ವಿಟಮಿನ್ ಇ ಮತ್ತು ಅಗತ್ಯವಾದ ಕೊಬ್ಬಿನಾಮ್ಲಗಳ ಉತ್ತಮ ಮೂಲವಾಗಿದೆ. ಇದರ ನಿಯಮಿತ ಸೇವನೆಯು ಚರ್ಮದ ಕೋಶಗಳ ಹಾನಿಯನ್ನು ಸರಿಪಡಿಸಲು ಸಹಾಯ ಮಾಡುತ್ತದೆ.

ನಟ್ಸ್​ ಮತ್ತು ಸೀಡ್ಸ್:

ತುಪ್ಪವು ಅತ್ಯಂತ ಸುಲಭವಾಗಿ ಜೀರ್ಣವಾಗುವ ಕೊಬ್ಬುಗಳಲ್ಲಿ ಒಂದಾಗಿದೆ. ಇದು ನಿಮ್ಮ ಚರ್ಮವು ಶುಷ್ಕ ಮತ್ತು ಫ್ಲಾಕಿ ಆಗುವುದನ್ನು ತಡೆಯಲು ಸಹಾಯ ಮಾಡುತ್ತದೆ.

ತುಪ್ಪ

ಮೀನುಗಳಲ್ಲಿ ಒಮೆಗಾ -3 ಕೊಬ್ಬಿನಾಮ್ಲಗಳು ಸಮೃದ್ಧವಾಗಿರುತ್ತವೆ. ಇದು ಚರ್ಮದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.

ಮೀನು

ಬಟರ್ ಫ್ರೂಟ್ ಉತ್ಕರ್ಷಣ ನಿರೋಧಕಗಳು, ಬೀಟಾ-ಕ್ಯಾರೋಟಿನ್, ಫೋಲೇಟ್, ಒಮೆಗಾ -3 ಕೊಬ್ಬಿನಾಮ್ಲಗಳು ಮತ್ತು ವಿಟಮಿನ್ ಸಿ ಮತ್ತು ಇ ಅನ್ನು ಒಳಗೊಂಡಿರುತ್ತವೆ. ಇದು ನಿಮ್ಮ ಚರ್ಮವನ್ನು ಪೋಷಿಸಲು ಮತ್ತು ಶುಷ್ಕತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಬಟರ್ ಫ್ರೂಟ್