ತಲೆಯ ಹೇನಿನಿಂದ ಕಿರಿಕಿರಿಯಾಗುತ್ತಿದ್ದರೆ ಈ ಸರಳ ವಿಧಾನ ಅನುಸರಿಸಿ

 09 July 2024

Pic credit - Pintrest

Author : Akshatha Vorkady

Pic credit - Pintrest

ತಲೆಯಲ್ಲಿ ಪದೇ ಪದೇ ಹೇನು ಆಗುತ್ತಿದ್ದರೆ ಚಿಂತೆ ಬೇಡ. ಈ ಸೊಪ್ಪು ಹಚ್ಚಿದರೆ ಸಾಕು ಹೇನು ನಿವಾರಣೆಯಾಗುತ್ತದೆ.

ಹೇನಿನ ಸಮಸ್ಯೆ

Pic credit - Pintrest

ಇದು ಬೇರೆ ಯಾವುದೇ ಸೊಪ್ಪಲ್ಲ, ಎಲ್ಲಾ ಕಡೆಯಲ್ಲಿಯೂ ಲಭ್ಯವಿರುವ ಬೇವಿನ ಸೊಪ್ಪು. ಮೊದಲು ಈ ಸೊಪ್ಪನ್ನು ಕೊಬ್ಬರಿ ಎಣ್ಣೆಯಲ್ಲಿ ಚೆನ್ನಾಗಿ ಕುದಿಸಿಕೊಳ್ಳಿ.

ಬೇವಿನ ಸೊಪ್ಪು

Pic credit - Pintrest

ಆ ಎಣ್ಣೆ ತಣ್ಣಗಾದ ಬಳಿಕ ಕೂದಲಿನ ಬುಡದವರೆಗೂ ಚೆನ್ನಾಗಿ ಹಚ್ಚಿ ಮಸಾಜ್ ಮಾಡಿ. ತಲೆ ಸ್ನಾನಕ್ಕಿಂತ ಮೊದಲು ಸುಮಾರು 4 ತಾಸು ಹಾಗೆಯೇ ಬಿಡಿ.

ಮಸಾಜ್ ಮಾಡಿ

Pic credit - Pintrest

ಬಳಿಕ ನೀವು ಬಳಸುವ ಯಾವುದಾದರೂ ಶಾಂಪೂ ಹಾಕಿ ಸರಿಯಾಗಿ ತೊಳೆದುಕೊಳ್ಳಿ. 

ಶಾಂಪೂ ಹಾಕಿ

Pic credit - Pintrest

ತಿಂಗಳಿಗೆ ಎರಡು ಅಥವಾ ಮೂರು ಬಾರಿಯಾದರೂ ಈ ಮನೆಮದ್ದನ್ನು ಮಾಡಿ ನೋಡಿ. 

ಹೇನಿನ ಸಮಸ್ಯೆ

Pic credit - Pintrest

ಈ ರೀತಿ ಮಾಡುವುದರಿಂದ ತಲೆಯಲ್ಲಿರುವ ಹೇನು, ಹೊಟ್ಟು ನಿವಾರಣೆಯಾಗಿ ತಲೆ ಕೂದಲು ಸೊಂಪಾಗಿ ಬೆಳೆಯುತ್ತದೆ. 

ಹೊಟ್ಟು ನಿವಾರಣೆ

Pic credit - Pintrest

ಜೊತೆಗೆ ಕೂದಲು ಪದೇ ಪದೇ ಉದುರುತ್ತಿದ್ದರೆ ಈ ಮನೆಮದ್ದು ಮೂಲಕ ಕೂದಲು ಉದುರುವ ಸಮಸ್ಯೆ ಕಡಿಮೆಯಾಗುತ್ತದೆ.

ಮನೆಮದ್ದು