16 October 2024

Pic credit - iStock

ಕಾರಿನಲ್ಲಿ ಹೋಗುವಾಗ ವಾಕರಿಕೆಯಾಗುತ್ತಾ? ಹೀಗೆ ಮಾಡಿ ನೋಡಿ

Author: Sushma Chakre

ಬಸ್ ಅಥವಾ ಕಾರಿನಲ್ಲಿ ದೂರಕ್ಕೆ ಪ್ರಯಾಣ ಮಾಡುವಾಗ ಅನೇಕ ಜನರು ವಾಕರಿಕೆ ಅನುಭವಿಸುತ್ತಾರೆ. ವಾಂತಿಯ ಭಯದಿಂದ ಕೆಲವರು ದೂರದ ಪ್ರಯಾಣ ಮಾಡುವುದೇ ಇಲ್ಲ.

ವಾಂತಿ ಬಂದಂತಾಗುತ್ತಾ?

Pic credit - iStock

ನಿಮಗೂ ಕಾರಿನಲ್ಲಿ ಕುಳಿತು ಹೋಗುವಾಗ ವಾಂತಿ ಬಂದಹಾಗೆ ಅನಿಸಿದರೆ ಇಲ್ಲಿವೆ ಕೆಲವು ಉಪಯುಕ್ತ ಸಲಹೆಗಳು.

ಹೀಗೆ ಮಾಡಿ ನೋಡಿ

Pic credit - iStock

ವಾಹನದ ಒಳಗೆ ಎದುರು ನೋಡುವ ಬದಲು ರಸ್ತೆಯತ್ತ ಗಮನ ಹರಿಸಿ.

ಮುಂದೆ ನೋಡಿ

Pic credit - iStock

ಆಹ್ಲಾದಕರ ವಾಸನೆಯ ಏರ್ ಫ್ರೆಶ್ನರ್ ಅನ್ನು ಕಾರಿನಲ್ಲಿ ಬಳಸಿ. ಅಥವಾ ಕಿಟಕಿ ತೆಗೆದು ತಾಜಾ ಗಾಳಿಯನ್ನು ಉಸಿರಾಡಿ.

ತಾಜಾ ಗಾಳಿ

Pic credit - iStock

ಸಾಧ್ಯವಾದರೆ, ನಿಮ್ಮ ಪ್ರಯಾಣದ ಸಮಯದಲ್ಲಿ ಆಗಾಗ ಸಣ್ಣ ವಿರಾಮಗಳನ್ನು ತೆಗೆದುಕೊಳ್ಳಿ.

ವಿರಾಮ ತೆಗೆದುಕೊಳ್ಳಿ

Pic credit - iStock

ಕಾರಿನೊಳಗೆ ಹೋಗುವಾಗ ಮೊಬೈಲ್, ಟ್ಯಾಬ್ಲೆಟ್​ಗಳನ್ನು ನೋಡಬೇಡಿ.

ಮೊಬೈಲ್ ಬಳಸಬೇಡಿ

Pic credit - iStock

ಆಳವಾಗಿ ಉಸಿರಾಡಿ ಮತ್ತು ನಿಧಾನವಾಗಿ ಉಸಿರು ಬಿಡಿ.

ದೀರ್ಘ ಉಸಿರನ್ನು ತೆಗೆದುಕೊಳ್ಳಿ

Pic credit - iStock

ಮನಸಿಗೆ ಹಿತಕರವಾದ, ಶಾಂತವಾದ ಸಂಗೀತವನ್ನು ಕೇಳುವುದರಿಂದ ವಾಕರಿಕೆಯ ಅನುಭವ ಕಡಿಮೆಯಾಗುತ್ತದೆ.

ಹಿತವಾದ ಸಂಗೀತ ಕೇಳಿ

Pic credit - iStock

ಕಾರಿನಲ್ಲಿ ಹೋಗುವ ಮೊದಲು, ನೀವು ಕೆಲವು ಲವಂಗದ ಎಸಳುಗಳನ್ನು ಪುಡಿ ಇಟ್ಟುಕೊಳ್ಳಿ. ನಿಮಗೆ ವಾಕರಿಕೆ ಬರಲು ಪ್ರಾರಂಭಿಸಿದರೆ ಸ್ವಲ್ಪ ಲವಂಗವನ್ನು ಸಕ್ಕರೆಯೊಂದಿಗೆ ಬೆರೆಸಿ ನಿಮ್ಮ ಬಾಯಿಯಲ್ಲಿ ಇಟ್ಟುಕೊಳ್ಳಿ.

ಲವಂಗ ಬಳಸಿ

Pic credit - iStock

ತುಳಸಿ ಎಲೆಗಳ ಪರಿಮಳವು ವಾಕರಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ತುಳಸಿ ಎಲೆಯ ವಾಸನೆ

Pic credit - iStock

ವಾಕರಿಕೆ ಬರುವಂತೆನಿಸಿದರೆ ಲಿಂಬೆ ಹಣ್ಣಿನ ವಾಸನೆ ತೆಗೆದುಕೊಂಡರೆ ಸ್ವಲ್ಪ ಆರಾಮವೆನಿಸುತ್ತದೆ. ಹೀಗಾಗಿ, ನಿಮ್ಮ ಜೊತೆ 1 ಲಿಂಬೆ ಹಣ್ಣು ಇಟ್ಟುಕೊಳ್ಳಿ.

ಲಿಂಬೆ ಹಣ್ಣು ಇಟ್ಟುಕೊಳ್ಳಿ

Pic credit - iStock