ನವರಾತ್ರಿಗೆ ಧರಿಸುವ ನವ ಬಣ್ಣದ ಉಡುಗೆಯ ಮಹತ್ವವೇನು?

15 Oct 2023

Pic Credit:Pintrest

ಒಂಬತ್ತು ದಿನಗಳ ಕಾಲ ನಡೆಯುವ ಹಬ್ಬವನ್ನು ದೇಶದಾದ್ಯಂತ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ನವರಾತ್ರಿ ಹಬ್ಬ

Pic Credit:Pintrest

ಯಾವ ದಿನ ಯಾವ ಬಣ್ಣದ ಬಟ್ಟೆ ಧರಿಸಬೇಕು ಹಾಗೂ ಈ ನವಬಣ್ಣಗಳ ಮಹತ್ವವೇನು ಎಂಬುದನ್ನು ತಿಳಿಯಿರಿ.

ನವ ಬಣ್ಣದ ಉಡುಗೆ

Pic Credit:Pintrest

ಕಿತ್ತಳೆ ಬಣ್ಣವು ಶಕ್ತಿ ಮತ್ತು ಸಂತೋಷದ ಭಾವನೆಯನ್ನು ನೀಡುತ್ತದೆ ಮತ್ತು ಕಿತ್ತಳೆ ಬಣ್ಣವು ಧನಾತ್ಮಕ ಶಕ್ತಿಯನ್ನು ರವಾನಿಸುತ್ತದೆ.

ದಿನ- 1 

Pic Credit:Pintrest

ಬಿಳಿ ಬಣ್ಣವು ಶುದ್ಧತೆ ಮತ್ತು ಶಾಂತಿಯ ಸಂಕೇತವಾಗಿದೆ. ಅಲ್ಲದೆ ಬಿಳಿ ಬಣ್ಣವು ಆತ್ಮವಿಶ್ವಾಸವನ್ನು ಸಹ ಹೆಚ್ಚಿಸುತ್ತದೆ.

ದಿನ- 2

Pic Credit:Pintrest

ಕೆಂಪು ಬಣ್ಣವು ಜಗನ್ಮಾತೆಯ ನೆಚ್ಚಿನ ಬಣ್ಣ. ಇದಲ್ಲದೇ ಈ ಬಣ್ಣ ಶಕ್ತಿ ಮತ್ತು ಪ್ರೀತಿಯ ಸಂಕೇತವಾಗಿದೆ.

ದಿನ- 3

Pic Credit:Pintrest

ಕೂಷ್ಮಾಂಡ ದೇವಿಗೆ ಪ್ರಿಯವಾದ ಬಣ್ಣವೆಂದರೆ ಕಡುನೀಲಿ ಬಣ್ಣ. ಈ ಬಣ್ಣವು ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ಸೂಚಿಸುತ್ತದೆ.

ದಿನ- 4

Pic Credit:Pintrest

ಹಳದಿ ಬಣ್ಣವು ಖುಷಿ, ಉತ್ಸಾಹ ಮತ್ತು  ಸಕಾರಾತ್ಮಕತೆಯನ್ನು ಸಂಕೇತಿಸುತ್ತದೆ. ಅಲ್ಲದೆ ಹಳದಿ ಬಣ್ಣವು ಶುಭದ ಸಂಕೇತವಾಗಿದೆ.

ದಿನ- 5

Pic Credit:Pintrest

ಆರನೇ ದಿನ ಹಸಿರು ಬಣ್ಣದ ಉಡುಗೆ ತೊಟ್ಟರೆ ಶ್ರೇಷ್ಠ ಎಂದು ಹೇಳಲಾಗುತ್ತದೆ. ಜೊತೆಗೆ ಹೊಸ ಆರಂಭ ಮತ್ತು ಸಮೃದ್ಧಿ ಮತ್ತು ಏಳಿಗೆಯ ಸಂಕೇತ.

ದಿನ- 6 

Pic Credit:Pintrest

ಬೂದು ಬಣ್ಣದ ಉಡುಗೆಯನ್ನುಟ್ಟು ಜಗನ್ಮಾತೆಯನ್ನು ಪೂಜಿಸಿದರೆ ಶ್ರೇಷ್ಠ ಎಂದು ಹೇಳಲಾಗುತ್ತದೆ. ಈ  ಬಣ್ಣವು ಭಾವನೆಗಳನ್ನು ಸಮನ್ವಯಗೊಳಿಸುತ್ತದೆ.

ದಿನ- 7

Pic Credit:Pintrest

ಮಹಾಗೌರಿಗೆ ಪ್ರಿಯವಾದ ಬಣ್ಣವೆಂದರೆ ನೇರಳೆ ಬಣ್ಣ. ಈ ಬಣ್ಣವು ಶ್ರೀಮಂತಿಕೆ ಮತ್ತು ಸಮೃದ್ಧಿಯನ್ನು ಪ್ರತಿನಿಧಿಸುತ್ತದೆ.

ದಿನ- 8

Pic Credit:Pintrest

ಈ ದಿನ ಪಿಕಾಕ್ ಗ್ರೀನ್ ಬಣ್ಣದ ಉಡುಗೆಯನ್ನು ತೊಟ್ಟು ಪೂಜಿಸುವುದು ಶುಭ. ಇದು  ಸಹಾನುಭೂತಿಯನ್ನು ಪ್ರತಿನಿಧಿಸುತ್ತದೆ.

ದಿನ- 9

Pic Credit:Pintrest

9 ದಿನಗಳ ದೇವಿ ಜಗನ್ಮಾತೆಯ ಒಂಬತ್ತು ಅವತಾರಗಳ ಬಗ್ಗೆ ಮಾಹಿತಿ ಇಲ್ಲಿದೆ