ಅತಿಯಾಗಿ ಟಿವಿ, ಮೊಬೈಲ್ ನೋಡುವ ಮಕ್ಕಳನ್ನು ನಿಯಂತ್ರಿಸೋದು ಹೇಗೆ?

05 Dec 2023

Author: Sushma Chakre

ಅತಿಯಾಗಿ ಟಿವಿ, ಮೊಬೈಲ್, ಕಂಪ್ಯೂಟರ್ ನೋಡುವ ಮಕ್ಕಳ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮದ ಮೇಲೆ ಅದು ಗಮನಾರ್ಹ ಪರಿಣಾಮಗಳನ್ನು ಬೀರಬಹುದು. ಇದರಿಂದ ಜಡ ಜೀವನಶೈಲಿ ಮತ್ತು ಸ್ಥೂಲಕಾಯತೆ ಮುಂತಾದ ಸಮಸ್ಯೆ ಎದುರಾಗಬಹುದು.

ಮಾನಸಿಕ ಆರೋಗ್ಯಕ್ಕೆ ತೊಂದರೆ

ಮಕ್ಕಳನ್ನು ಕಂಟ್ರೋಲ್ ಮಾಡುವುದು ಬಹಳ ಕಷ್ಟ. ಆದರೆ, ಅತಿಯಾಗಿ ಸ್ಕ್ರೀನ್ ನೋಡುವುದರಿಂದ ಕಣ್ಣಿನ ಆಯಾಸ, ತಲೆನೋವು ಮತ್ತು ನಿದ್ರೆಯ ಸಮಸ್ಯೆ ಎದುರಾಗಬಹುದು.

ಸಮಸ್ಯೆ ಬರಬಹುದು

ಸ್ಕ್ರೀನ್ ನೋಡುತ್ತಾ ದೀರ್ಘಾವಧಿ ಕುಳಿತುಕೊಳ್ಳುವ ಮತ್ತು ಕಡಿಮೆ ದೈಹಿಕ ಚಟುವಟಿಕೆಯನ್ನು ಮಾಡುವುದರಿಂದ ಜಡ ಜೀವನಶೈಲಿ ಉಂಟಾಗುತ್ತದೆ. ನಿರಂತರವಾಗಿ ಟಿವಿ, ಮೊಬೈಲ್ ನೋಡುವುದರಿಂದ ಕಣ್ಣಿನ ಮೇಲೆ ಒತ್ತಡ ಉಂಟಾಗುತ್ತದೆ.

ಆರೋಗ್ಯದ ಮೇಲೆ ದುಷ್ಪರಿಣಾಮ

ಕೆಲವೊಮ್ಮೆ ಇದು ಆಕ್ರಮಣಕಾರಿ ನಡವಳಿಕೆ, ಡಿಸೆನ್ಸಿಟೈಸೇಶನ್ ಮತ್ತು ನಿದ್ರಾಹೀನತೆಗೆ ಕಾರಣವಾಗಬಹುದು. ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲೇ ಸ್ಮಾರ್ಟ್‌ಫೋನ್‌ಗಳನ್ನು ನೀಡುವುದರಿಂದ ಟಿವಿ, ಟ್ಯಾಬ್ಲೆಟ್‌, ವಿಡಿಯೋ ಗೇಮ್‌ ನೀಡುವುದರಿಂದ ಅವರು ಹೊರಾಂಗಣ ಕ್ರೀಡೆಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ.

ನಿದ್ರಾಹೀನತೆ

ಮಕ್ಕಳು ಹೆಚ್ಚು ಸ್ಕ್ರೀನ್ ನೋಡದಂತೆ ತಡೆಯಲು ಪೋಷಕರು ಮಕ್ಕಳ ಜೊತೆಗಿದ್ದಾಗ ಮೊಬೈಲ್, ಟಿವಿ ನೋಡುವುದನ್ನು ಕಡಿಮೆ ಮಾಡಬೇಕು. ಮಕ್ಕಳು ಕನಿಷ್ಠ 1 ಗಂಟೆ ದೈಹಿಕ ಚಟುವಟಿಕೆಯಲ್ಲಿ ತೊಡಗುವಂತೆ ಮಾಡಬೇಕು.

ಅಪ್ಪ-ಅಮ್ಮನ ಸಹಕಾರವೂ ಬೇಕು

ಮಾತು, ಭಾಷೆ ಮತ್ತು ಸಂವಹನವು ಬಾಲ್ಯದ ಬೆಳವಣಿಗೆಯ ಪ್ರಮುಖ ಅಂಶಗಳಾಗಿವೆ. ವಯಸ್ಕರು ಮತ್ತು ಗೆಳೆಯರೊಂದಿಗೆ ಮುಖಾಮುಖಿ ಸಂವಹನವು ಭಾಷಾ ಕೌಶಲ್ಯಗಳು, ಭಾವನಾತ್ಮಕ ನಿಯಂತ್ರಣ ಮತ್ತು ಸಾಮಾಜಿಕ ಯೋಗ್ಯತೆಯನ್ನು ಬೆಳೆಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.

ಭಾಷೆಗೆ ತೊಂದರೆಯಾದೀತು

ವಿಶೇಷವಾಗಿ ಮಲಗುವ ಮುನ್ನ ಮೊಬೈಲ್, ಟಿವಿ ಹೆಚ್ಚಾಗಿ ನೋಡುವುದರಿಂದ ಮಕ್ಕಳ ನಿದ್ರೆಗೆ ತೊಂದರೆ ಆಗುತ್ತದೆ. ಹೀಗಾಗಿ, ಮಲಗುವ ಮುನ್ನ ಕತೆ ಹೇಳಿ ಮಲಗಿಸಲು ಅಥವಾ ಬೇರೆ ಮಾರ್ಗಗಳನ್ನು ಆಯ್ಕೆ ಮಾಡಿಕೊಳ್ಳಿ.

ಮಲಗುವ ಮುನ್ನ ಮೊಬೈಲ್ ಕೊಡಬೇಡಿ

ಮೊಬೈಲ್, ಟಿವಿ ಸ್ಕ್ರೀನ್ ನೋಡುವ ಮಕ್ಕಳ ಯೋಚನಾ ಶಕ್ತಿ ಕಡಿಮೆಯಾಗುತ್ತದೆ ಎಂದು ಅಧ್ಯಯನವೊಂದು ಹೇಳಿದೆ. ವಿಜ್ಞಾನಿಗಳು ಮತ್ತು ಸಂಶೋಧಕರ ಗುಂಪು ಫೋನ್‌ಗಳು ಮತ್ತು ಟಿವಿಗಳಂತಹ ಸ್ಕ್ರೀನ್​ಗಳನ್ನು ನೋಡುವ ಮಕ್ಕಳ ಕುರಿತು ಅನೇಕ ಅಧ್ಯಯನಗಳನ್ನು ನಡೆಸಿದೆ.

ಯೋಚನಾ ಶಕ್ತಿ ಕುಸಿತ

ಸ್ಕ್ರೀನ್ ಬಳಕೆ ನಮ್ಮ ಮೆದುಳಿನ ಮೇಲೆ ಬೀರುತ್ತದೆ. ಇದರಿಂದ ಮಕ್ಕಳು ಯಾವುದೇ ವಿಚಾರವನ್ನೂ ಯೋಚಿಸುವ, ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾ ಹೋಗುತ್ತಾರೆ. ಟಿವಿಯಲ್ಲಿ ಬರುವ ಅಂಶಗಳು ಮಕ್ಕಳ ಯೋಚನಾ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತವೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.

ಮೆದುಳಿನ ಮೇಲೆ ಪರಿಣಾಮ

ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಮಕ್ಕಳಲ್ಲಿ ಸ್ಕ್ರೀನ್ ಸಮಯಕ್ಕಾಗಿ ಮಾರ್ಗಸೂಚಿಗಳನ್ನು ನೀಡಿದೆ. 2 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಸಂಬಂಧಿಕರೊಂದಿಗೆ ವಿಡಿಯೋ ಕಾಲ್ ಮಾಡುವುದನ್ನು ಹೊರತುಪಡಿಸಿ ಯಾವುದೇ ರೀತಿಯ ಸ್ಕ್ರೀನಿಂಗ್​ಗೆ ಒಳಗಾಗಬಾರದು. 2ರಿಂದ 5 ವರ್ಷ ವಯಸ್ಸಿನ ಮಕ್ಕಳು 1 ಗಂಟೆಗೂ ಹೆಚ್ಚು ಸಮಯ ಟಿವಿ, ಮೊಬೈಲ್ ನೋಡಬಾರದು. 6 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ 2-3 ಗಂಟೆ ಸ್ಕ್ರೀನ್ ನೋಡಬಹುದು ಎಂದು ಹೇಳಿದೆ.

ಪೋಷಕರು ಈ ರೀತಿ ಮಾಡಿ