18 October 2024
Pic credit - iStock
Author: Sushma Chakre
ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ನಕಲಿ ಆಲೂಗಡ್ಡೆ ಮಾರಾಟವಾಗುತ್ತಿದೆ. ಆಲೂಗಡ್ಡೆಯನ್ನು ಖರೀದಿಸುವಾಗ ಅದು ನಿಜವಾದ ಆಲೂಗಡ್ಡೆಯಾ, ರಾಸಾಯನಿಕ ಮಿಶ್ರಿತವಾಗಿದೆಯೇ ಎಂದು ಕಂಡುಹಿಡಿಯಲು ಈ ಟ್ರಿಕ್ ಬಳಸಿ.
Pic credit - iStock
ಇತ್ತೀಚೆಗೆ ಮಾರುಕಟ್ಟೆಯಲ್ಲಿ ನಕಲಿ ಆಲೂಗಡ್ಡೆಗಳು ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿವೆ. ಈ ಆಲೂಗೆಡ್ಡೆಯಲ್ಲಿ ಹಲವು ಬಗೆಯ ರಾಸಾಯನಿಕಗಳನ್ನು ಬೆರೆಸಿ ಅಂಗಡಿಗಳಲ್ಲಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.
Pic credit - iStock
ನಿಜವಾದ ಮತ್ತು ನಕಲಿ ಆಲೂಗಡ್ಡೆಗಳನ್ನು ಅವುಗಳ ವಾಸನೆಯಿಂದ ಗುರುತಿಸಬಹುದು. ಆಲೂಗಡ್ಡೆ ನಿಜವಾಗಿದ್ದರೆ ಅದು ನೈಸರ್ಗಿಕ ವಾಸನೆಯನ್ನು ಹೊಂದಿರುತ್ತದೆ. ನಕಲಿ ಆಲೂಗಡ್ಡೆ ರಾಸಾಯನಿಕ ವಾಸನೆಯನ್ನು ಹೊಂದಿರುತ್ತದೆ ಮತ್ತು ಅವುಗಳನ್ನು ಹಿಡಿದಾಗ ಕೈಯಲ್ಲಿ ಬಣ್ಣ ಅಂಟಿಕೊಳ್ಳುತ್ತದೆ.
Pic credit - iStock
ನೀವು ಆಲೂಗಡ್ಡೆಯನ್ನು ಕತ್ತರಿಸುವ ಮೂಲಕ ಪರಿಶೀಲಿಸಬಹುದು. ಇದು ನಿಜವಾದ ಆಲೂಗೆಡ್ಡೆಯಾಗಿದ್ದರೆ, ಅದು ಒಳಗೆ ಮತ್ತು ಹೊರಗಿನಿಂದ ಬಹುತೇಕ ಒಂದೇ ಬಣ್ಣವನ್ನು ಹೊಂದಿರುತ್ತದೆ.
Pic credit - iStock
ನಕಲಿ ಆಲೂಗಡ್ಡೆಯ ಬಣ್ಣ ಒಳಗೆ- ಹೊರಗೆ ಭಿನ್ನವಾಗಿರುತ್ತದೆ.
Pic credit - iStock
ನಕಲಿ ಆಲೂಗೆಡ್ಡೆಯ ಮೇಲಿನ ಕೊಳಕು ನೀರಿನಲ್ಲಿ ಕರಗುತ್ತದೆ, ಆದರೆ ನಿಜವಾದ ತಾಜಾ ಆಲೂಗೆಡ್ಡೆಯ ಮೇಲಿನ ಕೊಳಕು ಕೆಲವೊಮ್ಮೆ ಉಜ್ಜಿದ ನಂತರವೂ ಸ್ವಚ್ಛವಾಗುವುದಿಲ್ಲ. ಅದರ ಸಿಪ್ಪೆ ತುಂಬಾ ತೆಳುವಾಗಿರುತ್ತದೆ.
Pic credit - iStock
ನಕಲಿ ಆಲೂಗಡ್ಡೆ ಆರೋಗ್ಯಕ್ಕೆ ಅಪಾಯಕಾರಿ. ಇದಕ್ಕೆ ಸೇರಿಸಲಾದ ಬಣ್ಣಗಳು ಮತ್ತು ರಾಸಾಯನಿಕಗಳು ನಿಮ್ಮ ಮೂತ್ರಪಿಂಡ ಮತ್ತು ಯಕೃತ್ತನ್ನು ಹಾನಿಗೊಳಿಸಬಹುದು.
Pic credit - iStock
ಆಲೂಗೆಡ್ಡೆಯನ್ನು ಮಣ್ಣಿನಲ್ಲಿ ಅದ್ದಿ ಪರಿಶೀಲಿಸಬಹುದು. ನಕಲಿ ಆಲೂಗಡ್ಡೆ ನೀರಿನಲ್ಲಿ ತೇಲುತ್ತದೆ. ಏಕೆಂದರೆ ಅದಕ್ಕೆ ಕೆಲವು ರಾಸಾಯನಿಕಗಳನ್ನು ಹಾಕಲಾಗಿರುತ್ತದೆ. ಆದರೆ ನೈಜ ಮತ್ತು ತಾಜಾ ಆಲೂಗಡ್ಡೆ ನೀರಿನಲ್ಲಿ ಮುಳುಗುತ್ತದೆ.
Pic credit - iStock