Author: Sushma Chakre

ಕೂದಲು ಬೆಳವಣಿಗೆಗೆ ಜಾಸ್ಮಿನ್ ಎಣ್ಣೆಯನ್ನು ತಯಾರಿಸುವುದು ಹೇಗೆ?

16 Dec 2023

Author: Sushma Chakre

ಮನೆಯಲ್ಲಿ ಕೂದಲಿನ ಬೆಳವಣಿಗೆಗೆ ಮಲ್ಲಿಗೆ ಎಣ್ಣೆಯನ್ನು ತಯಾರಿಸುವುದು ಹೇಗೆಂಬ ಮಾಹಿತಿ ಇಲ್ಲಿದೆ. ಮಲ್ಲಿಗೆ ಕೂದಲನ್ನು ಪೋಷಿಸುವ ಮತ್ತು ಬಲಪಡಿಸುವ ಗುಣಗಳನ್ನು ಹೊಂದಿದೆ. ಕೂದಲಿನ ಬೆಳವಣಿಗೆಗೆ ಮಲ್ಲಿಗೆ ಎಣ್ಣೆಯನ್ನು ಹೇಗೆ ತಯಾರಿಸುವುದು ಎಂಬುದರ ಕುರಿತು ಸರಳ ಮಾರ್ಗದರ್ಶಿ ಇಲ್ಲಿದೆ.

ಜಾಸ್ಮಿನ್ ಎಣ್ಣೆ

ಜಾಸ್ಮಿನ್ ಹೂಗಳು- ತಾಜಾ ಅಥವಾ ಒಣಗಿದ ಮಲ್ಲಿಗೆ ಹೂವುಗಳು (ಸಣ್ಣ ಜಾರ್ ತುಂಬಲು ಸಾಕು), ಕ್ಯಾರಿಯರ್ ಎಣ್ಣೆ- ತೆಂಗಿನ ಎಣ್ಣೆ, ಜೊಜೊಬಾ ಎಣ್ಣೆ, ಅಥವಾ ಸಿಹಿ ಬಾದಾಮಿ ಎಣ್ಣೆ (ಜಾರ್​ನಲ್ಲಿ ಹೂಗಳನ್ನು ಮುಚ್ಚಲು ಸಾಕು), ಮುಚ್ಚಳವನ್ನು ಹೊಂದಿರುವ ದೊಡ್ಡ ಗಾಜಿನ ಜಾರ್, ಶೇಖರಿಸಿಡಲು ಎಣ್ಣೆ, ಚೀಸ್‌ಕ್ಲೋತ್ ಅಥವಾ ಫೈನ್ ಸ್ಟ್ರೈನರ್, ವಿಟಮಿನ್ ಇ ಆಯಿಲ್ ಅಥವಾ ರೋಸ್ಮರಿ ಎಸೆನ್ಷಿಯಲ್ ಆಯಿಲ್.

ಬೇಕಾಗುವ ಪದಾರ್ಥಗಳು

ತಾಜಾ ಮಲ್ಲಿಗೆ ಹೂವುಗಳನ್ನು ಬಳಸುತ್ತಿದ್ದರೆ, ಅವುಗಳು ಸ್ವಚ್ಛವಾಗಿದೆಯೇ ಎಂದು ನೋಡಿಕೊಳ್ಳಿ. ಒಣಗಿದ ಮಲ್ಲಿಗೆ ಹೂವುಗಳನ್ನು ಬಳಸುತ್ತಿದ್ದರೆ ಅವು ಸಂಪೂರ್ಣವಾಗಿ ಒಣಗಿರುವುದನ್ನು ಖಚಿತಪಡಿಸಿಕೊಳ್ಳಿ.

ಮಲ್ಲಿಗೆ ಎಣ್ಣೆಯನ್ನು ತಯಾರಿಸಿ

ತೆಂಗಿನಕಾಯಿ, ಜೊಜೊಬಾ ಅಥವಾ ಬಾದಾಮಿ ಎಣ್ಣೆಯಂತಹ ನಿಮಗೆ ಇಷ್ಟವಾದ ಎಣ್ಣೆಯನ್ನು ಆಯ್ಕೆ ಮಾಡಿ.

ನಿಮಗಿಷ್ಟವಾದ ಎಣ್ಣೆಯನ್ನು ಆಯ್ಕೆ ಮಾಡಿಕೊಳ್ಳಿ

ಮಲ್ಲಿಗೆ ಹೂವುಗಳನ್ನು ಗಾಢವಾದ ಗಾಜಿನ ಜಾರ್​ನಲ್ಲಿ ತುಂಬಿಸಿ. ಮೇಲ್ಭಾಗದಲ್ಲಿ ಸ್ವಲ್ಪ ಜಾಗವನ್ನು ಬಿಡಿ. ಹೂವುಗಳ ಮೇಲೆ ನೀವು ಆಯ್ಕೆ ಮಾಡಿದ ಕ್ಯಾರಿಯರ್ ಎಣ್ಣೆಯನ್ನು ಸುರಿಯಿರಿ. ಅವುಗಳನ್ನು ಸಂಪೂರ್ಣವಾಗಿ ಮುಳುಗಿಸಿ, ಮುಚ್ಚಿಡಿ.

ಮಲ್ಲಿಗೆ ಹೂವು ಮತ್ತು ಕ್ಯಾರಿಯರ್ ಎಣ್ಣೆಯನ್ನು ಮಿಕ್ಸ್ ಮಾಡಿ

ಎಣ್ಣೆ ಹಾಕಿದ ಜಾರ್ ಅನ್ನು ಬಿಗಿಯಾಗಿ ಮುಚ್ಚಿರಿ. ಇದು ತೈಲವನ್ನು ಸಂರಕ್ಷಿಸಲು ಮತ್ತು ಯಾವುದೇ ಮಾಲಿನ್ಯಕಾರಕಗಳನ್ನು ಪ್ರವೇಶಿಸದಂತೆ ತಡೆಯಲು ಸಹಾಯ ಮಾಡುತ್ತದೆ.

ಜಾರ್ ಅನ್ನು ಮುಚ್ಚಿ

ಸುಮಾರು 2 ರಿಂದ 4 ವಾರಗಳವರೆಗೆ ಮಲ್ಲಿಗೆ ಮತ್ತು ಎಣ್ಣೆ ತುಂಬಿದ ಜಾರ್ ಅನ್ನು ತಂಪಾದ, ಕತ್ತಲಿನ ಸ್ಥಳದಲ್ಲಿ ಇರಿಸಿ. ಮಲ್ಲಿಗೆ ಹೂವುಗಳು ಚೆನ್ನಾಗಿ ಮುಳುಗಬೇಕು ಮತ್ತು ಎಣ್ಣೆಯು ಅವುಗಳ ಸಾರವನ್ನು ಹೀರಿಕೊಳ್ಳಬೇಕು. ಇದಕ್ಕೆ ಒಂದೆರಡು ದಿನಕ್ಕೊಮ್ಮೆ ಈ ಜಾರ್ ಅನ್ನು ಅಲುಗಾಡಿಸುತ್ತಾ ಇರಿ.

ಎಣ್ಣೆಯನ್ನು ತುಂಬಿಸಿ

ಎಣ್ಣೆಯನ್ನು ಬಟ್ಟೆಯಲ್ಲಿ ಸೋಸಿಕೊಂಡು, ಒಂದು ಮುಚ್ಚಳವನ್ನು ಹೊಂದಿರುವ ಶುದ್ಧವಾದ, ಗಾಢವಾದ ಗಾಜಿನ ಜಾರ್ ಅಲ್ಲಿ ಎಣ್ಣೆಯನ್ನು ಹಾಕಿಟ್ಟುಕೊಳ್ಳಿ.

ಜಾಸ್ಮಿನ್ ಎಣ್ಣೆಯನ್ನು ಸಂಗ್ರಹಿಸಿ