Author: Sushma Chakre

ಸೂರ್ಯ ಅಸ್ತಮಿಸದ ಭೂಮಿಯ ಮೇಲಿನ 8 ಸ್ಥಳಗಳಿವು

26 Dec 2023

Author: Sushma Chakre

ದಿನದ 24 ಗಂಟೆಗಳ ಅವಧಿಯಲ್ಲಿ ಸರಿಸುಮಾರು 12 ಗಂಟೆಗಳ ಕಾಲ ಹಗಲು ಮತ್ತು ಉಳಿದ ಗಂಟೆಗಳು ರಾತ್ರಿಯ ಸಮಯಕ್ಕೆ ಮೀಸಲಾಗಿರುತ್ತದೆ. ಆದರೆ, ಕೆಲವು ಸ್ಥಳಗಳಲ್ಲಿ ಸೂರ್ಯನು ಸತತ 70 ದಿನಗಳಿಗಿಂತ ಹೆಚ್ಚು ಕಾಲ ದಿಗಂತದಲ್ಲಿ ಉಳಿಯುತ್ತಾನೆ. ಸೂರ್ಯನು ಎಂದಿಗೂ ಅಸ್ತಮಿಸದ ಭೂಮಿಯ ಮೇಲಿನ ಕೆಲವು ಸ್ಥಳಗಳ ಬಗ್ಗೆ ಮಾಹಿತಿ ಇಲ್ಲಿದೆ.

ಸೂರ್ಯ ಮುಳುಗದ ಸ್ಥಳಗಳು

ಮೇ ಆರಂಭದಿಂದ ಆಗಸ್ಟ್ ಅಂತ್ಯದವರೆಗೆ ಮಧ್ಯರಾತ್ರಿಯ ಸುಮಾರಿಗೆ ಇಲ್ಲಿ ಸೂರ್ಯ ಅಸ್ತಮಿಸುತ್ತಾನೆ. ಬಳಿಕ ಸುಮಾರು 4 ಗಂಟೆಗೆ ಸೂರ್ಯ ಉದಯಿಸುತ್ತಾನೆ. ಸ್ವೀಡನ್‌ನ ಕೆಲವು ಪ್ರದೇಶಗಳು ವರ್ಷದ 6 ತಿಂಗಳವರೆಗೆ ನಿರಂತರ ಸೂರ್ಯನ ಬೆಳಕನ್ನು ಕಾಣುತ್ತವೆ.

ಸ್ವೀಡನ್

ಕೇವಲ 3000 ಜನಸಂಖ್ಯೆ ಇರುವ ಕೆನಡಾದ ವಾಯುವ್ಯ ಪ್ರಾಂತ್ಯದಲ್ಲಿ ನುನಾವತ್ ಇದೆ. ಈ ನಗರದಲ್ಲಿ ಸರಿಸುಮಾರು 2 ತಿಂಗಳು ಅಡೆತಡೆಯಿಲ್ಲದ ಸೂರ್ಯನ ಬೆಳಖು ಉಂಟಾಗುತ್ತದೆ. ಆದರೆ ಇಲ್ಲಿ ಚಳಿಗಾಲದಲ್ಲಿ ಸತತ 30 ದಿನಗಳ ಕಾಲ ಸಂಪೂರ್ಣ ಕತ್ತಲೆಯಿಂದ ಕೂಡಿರುತ್ತದೆ.

ನುನಾವತ್, ಕೆನಡಾ

ಆರ್ಕ್ಟಿಕ್ ವೃತ್ತದಲ್ಲಿ ನೆಲೆಗೊಂಡಿರುವ ನಾರ್ವೆಯನ್ನು ಸಾಮಾನ್ಯವಾಗಿ ಮಧ್ಯರಾತ್ರಿಯ ಸೂರ್ಯನ ಭೂಮಿ ಎಂದು ಕರೆಯಲಾಗುತ್ತದೆ. ಮೇ ತಿಂಗಳಿನಿಂದ ಜುಲೈ ಅಂತ್ಯದವರೆಗೆ ನಾರ್ವೆಯು ಸುಮಾರು 76 ದಿನಗಳ ಕಾಲ ಹಗಲಿನ ನಿರಂತರ ಅವಧಿಯನ್ನು ಅನುಭವಿಸುತ್ತದೆ. ಇಲ್ಲಿ ಏಪ್ರಿಲ್ 10ರಿಂದ ಆಗಸ್ಟ್ 23ರವರೆಗೆ ಸೂರ್ಯನು ನಿರಂತರವಾಗಿ ಬೆಳಗುತ್ತಾನೆ.

ನಾರ್ವೆ

ಸ್ವೀಡನ್‌ನ ಉತ್ತರದ ನಗರವಾಗಿರುವ ಕಿರುನಾವು ಮೇ ತಿಂಗಳಿಂದ ಆಗಸ್ಟ್‌ವರೆಗೆ ಸುಮಾರು 100 ದಿನಗಳ ನಿರಂತರ ಸೂರ್ಯನ ಬೆಳಕನ್ನು ಅನುಭವಿಸುತ್ತದೆ. ಕಿರುನಾದ ಆರ್ಟ್ ನೌವೀವ್ ಚರ್ಚ್ ಸ್ವೀಡನ್‌ನ ಅತ್ಯಂತ ಸುಂದರವಾದ ವಾಸ್ತುಶಿಲ್ಪದ ಕೆಲಸಗಳಲ್ಲಿ ಒಂದಾಗಿದೆ.

ಕಿರುನಾ, ಸ್ವೀಡಿಷ್ ಲ್ಯಾಪ್ ಲ್ಯಾಂಡ್

ಯುಕಾನ್ ವರ್ಷದ ಬಹುತೇಕ ದಿನಗಳು ಹಿಮದಿಂದ ಆವೃತವಾಗಿರುತ್ತದೆ. ಆದರೆ, ಬೇಸಿಗೆಯ ದಿನಗಳಲ್ಲಿ ಯುಕಾನ್‌ನ ವಾಯುವ್ಯ ಭಾಗವು 50 ದಿನಗಳವರೆಗೆ ನಿರಂತರ ಸೂರ್ಯನ ಬೆಳಕನ್ನು ಅನುಭವಿಸುತ್ತದೆ. ಮಧ್ಯರಾತ್ರಿ ಸೂರ್ಯನ ಭೂಮಿ ಎಂದು ಕರೆಯಲ್ಪಡುವ ಯುಕಾನ್ ನೀಲಿ ಆಕಾಶ ಮತ್ತು ಬೇಸಿಗೆಯ ಬೆಳಕನ್ನು ಅನುಭವಿಸುತ್ತದೆ.

ಯುಕಾನ್, ಕೆನಡಾ

ಗ್ರೇಟ್ ಬ್ರಿಟನ್ ನಂತರ ಯುರೋಪಿನ ಅತಿದೊಡ್ಡ ದ್ವೀಪವಾಗಿರುವ ಐಸ್​ಲ್ಯಾಂಡ್ ಬೇಸಿಗೆಯಲ್ಲಿ ದೀರ್ಘವಾದ ರಾತ್ರಿಗಳನ್ನು ಅನುಭವಿಸುತ್ತದೆ. ಜೂನ್‌ನಲ್ಲಿ ಐಸ್‌ಲ್ಯಾಂಡ್‌ನ ಕೆಲವು ಭಾಗಗಳು ಆರ್ಕ್ಟಿಕ್ ಸರ್ಕಲ್‌ನಲ್ಲಿರುವ ಅಕುರೆರಿ ಮತ್ತು ಗ್ರಿಮ್ಸೆ ದ್ವೀಪ ಸೇರಿದಂತೆ ಮಧ್ಯರಾತ್ರಿ ಸೂರ್ಯನ ಬೆಳಕಿಗೆ ಸಾಕ್ಷಿಯಾಗುತ್ತವೆ. ಅಲ್ಲಿ ಸೂರ್ಯ ಎಂದಿಗೂ ಅಸ್ತಮಿಸುವುದಿಲ್ಲ.

ಐಸ್​ಲ್ಯಾಂಡ್

ಸಾವಿರ ಸರೋವರಗಳು ಮತ್ತು ದ್ವೀಪಗಳ ನಾಡು ಎಂದು ಹೆಸರಾಗಿರುವ ಫಿನ್‌ಲ್ಯಾಂಡ್‌ನ ಹೆಚ್ಚಿನ ಭಾಗಗಳು ಬೇಸಿಗೆಯಲ್ಲಿ ಕೇವಲ 73 ದಿನಗಳ ಕಾಲ ನೇರ ಸೂರ್ಯನ ಬೆಳಕನ್ನು ಅನುಭವಿಸುತ್ತವೆ. ಈ ಅವಧಿಯಲ್ಲಿ ಸೂರ್ಯನು ನಿರಂತರವಾಗಿ ಬೆಳಗುವುದನ್ನು ನೋಡಬಹುದು. ಆದರೆ ಚಳಿಗಾಲದ ತಿಂಗಳುಗಳಲ್ಲಿ ಕತ್ತಲೆ ಉಂಟಾಗುತ್ತವೆ.

ಫಿನ್​ಲ್ಯಾಂಡ್

ಮೇ ಅಂತ್ಯದಿಂದ ಜುಲೈ ಅಂತ್ಯದವರೆಗೆ ಅಲಾಸ್ಕಾದ ಬ್ಯಾರೋದಲ್ಲಿ ನಿರಂತರ ಸೂರ್ಯನ ಬೆಳಕು ಇರುತ್ತದೆ. ಹಿಮದಿಂದ ಆವೃತವಾದ ಪರ್ವತಗಳು ಮತ್ತು ಸಮ್ಮೋಹನಗೊಳಿಸುವ ಹಿಮನದಿಗಳಿಗೆ ಹೆಸರುವಾಸಿಯಾದ ಈ ಪ್ರದೇಶವು ಚಳಿಗಾಲದ ತಿಂಗಳುಗಳಲ್ಲಿ ಕತ್ತಲೆಯಲ್ಲಿ ಉಳಿಯುತ್ತದೆ.

ಬ್ಯಾರೋ, ಅಲಾಸ್ಕಾ