ಸೌಂದರ್ಯ ಹೆಚ್ಚಿಸುವ ಲೆಹೆಂಗಾ ಉಡುಗೆಯ ಇತಿಹಾಸ ಬಲು ರೋಚಕ

15 October 2024

Pic credit - Pinterest

Sainanda

ಸೀರೆಯ ನಂತರ ಮಹಿಳೆಯರ ಎರಡನೇ ಆಯ್ಕೆಯೇ ಈ ಲೆಹೆಂಗಾ ಚೋಲಿಯಾಗಿರುತ್ತದೆ. 

Pic credit - Pinterest

ಲೆಹೆಂಗಾದ ಇತಿಹಾಸವು ನೂರಾರು ವರ್ಷಗಳಷ್ಟು ಹಳೆಯದ್ದಾಗಿದ್ದು, ಮೊಹೆಂಜೋದಾರೋ ಮತ್ತು ಹರಪ್ಪನ್ ಅವಧಿಯಲ್ಲಿಯೇ ಕಂಡುಬರುತ್ತದೆ.

Pic credit - Pinterest

12 ರಿಂದ 18 ನೇ ಶತಮಾನದವರೆಗೆ ಮೊಘಲರ ಅವಧಿಯಲ್ಲಿ ವಿವಿಧ ರೀತಿಯ ಲೆಹೆಂಗಾಗಳು ಜನಪ್ರಿಯತೆಯನ್ನು ಪಡೆದುಕೊಂಡಿತ್ತು.

Pic credit - Pinterest

ಲೆಹೆಂಗಾ ಮೊಘಲರಿಗೆ ಮಾತ್ರ ಸೀಮಿತವಾಗಿರಲಿಲ್ಲ. ರಜಪೂತ ರಾಜಮನೆತನದ ಮಹಿಳೆಯರೂ ಧರಿಸುತ್ತಿದ್ದರು. ಆದರೆ ಆ ಲೆಹೆಂಗಾಗಳು ತುಂಬಾ ಭಾರವಾಗಿದ್ದವು ಎನ್ನಲಾಗಿದೆ.

Pic credit - Pinterest

ಮೊದಲು ಲೆಹೆಂಗಾವನ್ನು ಹತ್ತಿಯಿಂದ ಮಾಡಲಾಗುತ್ತಿತ್ತು. ಮೊಘಲ್ ಅವಧಿಯಲ್ಲಿ ರೇಷ್ಮೆಯಂತಹ ಬಟ್ಟೆಯ ಲೆಹಂಗಾವು ತಯಾರಾಗುತ್ತಿತ್ತು.

Pic credit - Pinterest

ಆದರೆ,  ಸ್ವಾತಂತ್ರ್ಯ ಚಳವಳಿಯ ಸಮಯದಲ್ಲಿ ಲೆಹೆಂಗಾ ಫ್ಯಾಷನ್‌ನಿಂದ ಹೊರಗುಳಿದಿತ್ತು. ಆ ವೇಳೆಯಲ್ಲಿ ಮಹಿಳೆಯರು ಸೀರೆಯನ್ನೇ ಧರಿಸುತ್ತಿದ್ದರು.

Pic credit - Pinterest

90 ರ ದಶಕದಲ್ಲಿ ಲೆಹೆಂಗಾ ಮತ್ತೆ ಟ್ರೆಂಡ್‌ಗೆ ಬಂದಿತು. ಇದರ ಕೀರ್ತಿ ಬಾಲಿವುಡ್ ಗೆ ಸಲ್ಲುತ್ತದೆ. ಇದೀಗ ಮಾಡರ್ನ್‌ ಹಾಗೂ ಸ್ಟೈಲಿಶ್‌ ಲುಕ್ ನಲ್ಲಿ ಕಾಣ ಸಿಗುತ್ತವೆ.

Pic credit - Pinterest

ಹಲ್ಲು ನೋವಿಗೆ ಅಜ್ಜಿ ಹೇಳಿದ ಮನೆಮದ್ದು