ಸೆವೋಕ್ ಸೇತುವೆಯನ್ನು ಪಟ್ಟಾಭಿಷೇಕ ಸೇತುವೆಯಂದೂ ಕರೆಯುತ್ತಾರೆ. ಇದು ಬಂಗಾಳದ ಡಾರ್ಜಲಿಂಗ್
ಪಟ್ಟಣದ ಸಮೀಪದಲ್ಲಿದೆ.
ಸೆವೋಕ್ ಸೇತುವೆ, ಡಾರ್ಜಿಲಿಂಗ್
ಹೌರಾ ಸೇತುವೆ ಕೋಲ್ಕತ್ತಾದ ಒಂದು ಐತಿಹಾಸಿಕ ಹೆಗ್ಗುರುತಾಗಿದೆ. ಇದು ಹೂಗ್ಲಿ ನದಿಯ ಮೇಲೆ ನಿರ್ಮಿಸಲಾಗಿದೆ. ಇದರ ವಿಶಿಷ್ಟ ವಿನ್ಯಾಸದಿಂದ ಹೆಸರುವಾಸಿಯಾಗಿದೆ.
ಹೌರಾ ಸೇತುವೆ, ಕೋಲ್ಕತ್ತಾ
ಒಂದು ರೈಲ್ವೆ ಸೇತುವೆಯಾಗಿದೆ. ಮಂಟಪಂ ಪಟ್ಟಣವನ್ನು ಪಂಬನ್ ದ್ವೀಪದಲ್ಲಿರುವ ರಾಮೇಶ್ವರಂನೊಂದಿಗೆ ಸಂಪರ್ಕಿಸುತ್ತದೆ. ಇದು ಭಾರತದ ಮೊದಲ ಸಮುದ್ರ ಸೇತುವೆಯಾಗಿದೆ.
ಪಂಬನ್ ಸೇತುವೆ, ರಾಮೇಶ್ವರಂ
ಲಕ್ಷ್ಮಣಾ ಜೂಲಾ ಎಂಬ ತೂಗು ಸೇತುವೆಯು ಉತ್ತರಾಖಂಡದ ರಿಷಿಕೇಶ ನಗರದಲ್ಲಿ ಗಂಗಾ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಈ ಸೇತುವೆಯು 5 ಕಿ.ಮಿ ವಿಸ್ತಾರವಾಗಿದೆ.
ಲಕ್ಷ್ಮಣ್ ಜೂಲಾ, ಋಷಿಕೇಶ
ಎರಡನೇ ಹೂಗ್ಲಿ ಸೇತುವೆ ಎಂದೂ ಕರೆಯಲ್ಪಡುವ ವಿದ್ಯಾಸಾಗರ ಸೇತು ಪಶ್ಚಿಮ ಬಂಗಾಳದಲ್ಲಿರುವ ಹೂಗ್ಲಿ ನದಿಯ ಮೇಲಿನ ಟೋಲ್ ಸೇತುವೆಯಾಗಿದೆ. ಕೋಲ್ಕತ್ತಾ ಮತ್ತು ಹೌರಾ ನಗರಗಳನ್ನು ಸಂಪರ್ಕಿಸುತ್ತದೆ. 1992ರಲ್ಲಿ ನಿರ್ಮಿಸಲಾಯಿತು.
ವಿದ್ಯಾಸಾಗರ ಸೇತು, ಕೋಲ್ಕತ್ತಾ
ಮಹಾತ್ಮಾ ಗಾಂಧಿ ಸೇತು ಬಿಹಾರದಲ್ಲಿದೆ. ಗಂಗಾ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಪಾಟ್ನಾ ಮತ್ತು ಹಾಜಿಪುರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇದರ ಉದ್ದ 5,750 ಮೀಟರ್ ಇದೆ.
ಮಹಾತ್ಮ ಗಾಂಧಿ ಸೇತು, ಬಿಹಾರ
ಗೋವಾದಲ್ಲಿ ಮಾಂಡೋವಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ. ಬೆಳಗಾವಿ-ವಾಸ್ಕೋ ಡ ಗಾಮಾ ಮಧ್ಯೆ ಸಂಪರ್ಕ ಕಲ್ಪಿಸುತ್ತದೆ. ಪಣಜಿಯಿಂದ 60 ಕಿಮೀ, ಬೆಳಗಾವಿಯಿಂದ 80 ಕಿಮೀ ದೂರವಿದೆ.
ದೂಧ್ಸಾಗರ್ ವಯ್ಡಕ್ಟ್, ಗೋವಾ
ಬಾಂದ್ರಾ-ವರ್ಲಿ ಸೀ ಲಿಂಕ್ 5.6 ಕಿಮೀ ಉದ್ದವಿದೆ. 8 ಲೇನ್ ಅಗಲದ ಕೇಬಲ್ ಸೇತುವೆಯಾಗಿದೆ. ಬಾಂದ್ರಾ-ವರ್ಲಿಯನ್ನು ಸಂಪರ್ಕಿಸುತ್ತದೆ. ಇದು ಅತಿ ಉದ್ದದ ಸಮುದ್ರ ಸೇತುವೆಯಾಗಿದ್ದು, ಭಾರತದ 4ನೇ ಅತಿ ಉದ್ದದ ಸೇತುವೆಯಾಗಿದೆ.