ಇದು ವಿಶ್ವದ ಅತೀ ಎತ್ತರದ ಎಮ್ಮೆ, ಗಿನ್ನಿಸ್ ದಾಖಲೆ

5 March 2025

Pic credit - Pintrest

Sainanda

ವಿಶ್ವದ ಅತೀ ಎತ್ತರದ ನೀರು ಎಮ್ಮೆ ಎನ್ನುವ ಖ್ಯಾತಿಗೆ ಥೈಲ್ಯಾಂಡಿನ ನಿನ್ಲಾನಿ ಫಾರ್ಮ್ ನಲ್ಲಿರುವ ಕಿಂಗ್ ಕಾಂಗ್ ಎಮ್ಮೆ ಪಾತ್ರವಾಗಿದೆ.

Pic credit - Pintrest

ಗಿನ್ನಿಸ್ ದಾಖಲೆ ಪುಟ ಸೇರಿರುವ ಈ ಎಮ್ಮೆಯ ಹೆಸರು ಕಿಂಗ್ ಕಾಂಗ್. ತನ್ನ ದೈತ್ಯಾಕಾರದಿಂದ ಭಯ ಹುಟ್ಟಿಸಿದರೂ ಇದೊಂದು ಸಾಧು ಜೀವಿ.

Pic credit - Pintrest

ಸಾಮಾನ್ಯ ವಯಸ್ಕ ಎಮ್ಮೆಗಿಂತ 20 ಇಂಚು ಎತ್ತರವಿದ್ದು, ಇದರ ಎತ್ತರ ಆರು ಅಡಿ ಎಂಟು ಇಂಚು ಎನ್ನಬಹುದು

Pic credit - Pintrest

ಮೂರು ವರ್ಷ ವಯಸ್ಸಿನ ಅತೀ ಎತ್ತರದ ಈ ನೀರು ಎಮ್ಮೆ ತನ್ನ ವಯಸ್ಸು ಹಾಗೂ ಗಾತ್ರದಿಂದಲೇ ಎಲ್ಲರ ಗಮನ ಸೆಳೆಯುತ್ತಿದೆ.

Pic credit - Pintrest

2021, ಏಪ್ರಿಲ್ 1 ರಂದು ಈ ಎಮ್ಮೆ ಜನಿಸಿದಾಗಲೇ ಈ ಎಮ್ಮೆ ಉಳಿದ ಎಮ್ಮೆಗಳಿಗಿಂತ ಹೆಚ್ಚು ದೊಡ್ಡದಾಗಿರುತ್ತದೆ ಎಂದು ಮಾಲೀಕ ಸುಚಾರ್ಟ್ ಬೂನ್ ಚರೋಯೆನ್ ಗೆ ತಿಳಿದಿತ್ತಂತೆ.

Pic credit - Pintrest

ದಿನಕ್ಕೆ 35 ಕೆಜಿಯಷ್ಟು ಆಹಾರ ತಿನ್ನುತ್ತವೆ. ಈ ಎಮ್ಮೆಗೆ ಹುಲ್ಲು, ಜೋಳ ಹಾಗೂ ಬಾಳೆಹಣ್ಣುಗಳನ್ನು ಆಹಾರವಾಗಿ ನೀಡಲಾಗುತ್ತದೆ.

Pic credit - Pintrest

ಸಾಮಾನ್ಯವಾಗಿ ಎಮ್ಮೆಗಳು ಆಕ್ರಮಣಕಾರಿಗಳಾಗಿದ್ದು, ಕಿಂಗ್ ಕಾಂಗ್ ತನ್ನ ಸೌಮ್ಯ ಹಾಗೂ ವಿಧೇಯ ಗುಣಗಳಿಂದಲೇ ಮಾಲೀಕರಿಗೆ ಅಚ್ಚುಮೆಚ್ಚಿನದ್ದಾಗಿದೆ.

Pic credit - Pintrest

ನೀವು ಜಾಣರು ಎಂದು ಸೂಚಿಸುತ್ತೆ ನಿಮ್ಮಲ್ಲಿರುವ ಈ ಗುಣಗಳು