ಮಕ್ಕಳನ್ನು ಈ ರೀತಿ ಬೆಳೆಸಿ ಎನ್ನುತ್ತಾರೆ ಸುಧಾ ಮೂರ್ತಿ

17 September 2024

Pic credit - pinterest

Sayinanda

ಮಕ್ಕಳನ್ನು ಬೆಳೆಸುವುದು ಅಷ್ಟು ಸುಲಭದ ಮಾತಲ್ಲ, ಈಗಿನ ಕಾಲದ ಮಕ್ಕಳು ಹೆತ್ತವರು ಹೇಳುವ ಮಾತನ್ನೇ ಕೇಳುವುದೇ ಇಲ್ಲ.

Pic credit - pinterest

ಹೀಗಾಗಿ ಮಕ್ಕಳನ್ನು ಬೆಳೆಸುವ ಪೋಷಕರಿಗಾಗಿ ಇನ್ಫೋಸಿಸ್ ಸಹಸಂಸ್ಥಾಪಕಿ ಸುಧಾಮೂರ್ತಿ ಕೆಲವು ಸಲಹೆಗಳನ್ನು ನೀಡಿದ್ದಾರೆ.

Pic credit - pinterest

ಮಕ್ಕಳಿಗೆ ಸರಳತೆಯ ಜೀವನ ಪಾಠವನ್ನು ಕಲಿಸುವುದರೊಂದಿಗೆ ಆಡಂಬರ ಜೀವನ ಶೈಲಿಯಿಂದ ದೂರವಿರಿಸಿ ಎಂದಿದ್ದಾರೆ.

Pic credit - pinterest

ಮಕ್ಕಳಿಗೆ ಪುಸ್ತಕ ಓದುವ ಹವ್ಯಾಸವನ್ನು ರೂಢಿಸಿಕೊಳ್ಳುವಂತೆ ಮಾಡಬೇಕು, ಇದರಿಂದ ಜ್ಞಾನ ಹೆಚ್ಚಾಗುತ್ತದೆಯಂತೆ.

Pic credit - pinterest

ಮಕ್ಕಳಿಗೆ ಹೆಚ್ಚು ಮಾತನಾಡಲು ಬಿಡುವುದರಿಂದ, ಭಯವು ದೂರವಾಗಿ ಸಂವಹನ ಕೌಶಲ್ಯವು ಬೆಳೆಯುತ್ತದೆ.

Pic credit - pinterest

ಪೋಷಕರು ತಮ್ಮ ಆಸೆ ಆಕಾಂಕ್ಷೆಗಳನ್ನು ಹೇರುವುದನ್ನು ಬಿಟ್ಟು ಮಕ್ಕಳ ಖಾಸಗಿತನವನ್ನು ಗೌರವಿಸುವುದರೊಂದಿಗೆ ಒತ್ತಡವನ್ನು ನಿಭಾಯಿಸುವುದನ್ನು ಕಲಿಸಬೇಕು.

Pic credit - pinterest

ಬೆಳೆಯುತ್ತಿರುವ ಮಕ್ಕಳು ಪೋಷಕರನ್ನೇ ನೋಡಿ ಕಲಿಯುವುದೇ ಹೆಚ್ಚು. ಹೀಗಾಗಿ ಪೋಷಕರು ಮಕ್ಕಳಿಗೆ ಮಾದರಿಯಾಗಿರಬೇಕು.

Pic credit - pinterest