ಬಹಳಷ್ಟು ಜನರು ಸುಖವಾಗಿ ನಿದ್ರಿಸಲು ಅಥವಾ ದೀರ್ಘಕಾಲ ನಿದ್ರಿಸಲು ಕಷ್ಟಪಡುತ್ತಾರೆ. ನಿದ್ರೆ ನಮ್ಮ ಜೀವನದ ಒಂದು ಪ್ರಮುಖ ಭಾಗವಾಗಿದೆ. ನೀವು ಪ್ರತಿದಿನ 7ರಿಂದ 9 ಗಂಟೆಗಳ ಕಾಲ ನಿದ್ರೆಯನ್ನು ಮಾಡುವುದು ಬಹಳ ಮುಖ್ಯ.
ನೀವು ಚೆನ್ನಾಗಿ ನಿದ್ದೆ ಮಾಡದಿದ್ದರೆ ಅದು ಅನೇಕ ಸಮಸ್ಯೆಗಳಿಗೆ ಕಾರಣವಾಗಬಹುದು. ತೂಕ ಹೆಚ್ಚಾಗುವುದರಿಂದ ಹಿಡಿದು ದೀರ್ಘಕಾಲದ ಆರೋಗ್ಯ ಸಮಸ್ಯೆಗಳವರೆಗೆ ಹಲವು ಸಮಸ್ಯೆ ಎದುರಾಗಬಹುದು.
ಸರಿಯಾದ ನಿದ್ರೆ ಮಾಡದಿರುವುದು ನಿಮ್ಮ ಆರೋಗ್ಯದ ಮೇಲೆ ವಿವಿಧ ರೀತಿಯಲ್ಲಿ ಪರಿಣಾಮ ಬೀರುತ್ತದೆ. ವಿಭಿನ್ನ ಆಹಾರಗಳನ್ನು ಸೇವಿಸುವುದರಿಂದ ಹಿಡಿದು ಕೆಲವು ಅಭ್ಯಾಸಗಳನ್ನು ಬದಲಾಯಿಸುವುದು ಕೂಡ ನಿದ್ರೆಯ ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ದಿ ಸ್ಲೀಪ್ ಚಾರಿಟಿ ತಯಾರಿಸಿರುವ ನಮಗೆ ನಿದ್ರಿಸಲು ಸಹಾಯ ಮಾಡುವ ಹಣ್ಣುಗಳ ಪಟ್ಟಿಯಲ್ಲಿ ಬಾಳೆಹಣ್ಣು ಅಗ್ರಸ್ಥಾನದಲ್ಲಿದೆ. ಆಹಾರದಲ್ಲಿ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಇರುವುದರಿಂದ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ ಎಂದು ಅದು ಹೇಳಿದೆ.
ಬಾಳೆಹಣ್ಣಿನಲ್ಲಿ ಟ್ರಿಪ್ಟೊಫಾನ್ ಎಂಬ ಅಮೈನೋ ಆಮ್ಲವೂ ಇದೆ. ಟ್ರಿಪ್ಟೊಫಾನ್ ಮೆದುಳನ್ನು ಶಾಂತಗೊಳಿಸುವ ಹಾರ್ಮೋನುಗಳ ಉತ್ಪಾದನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ಬಾಳೆಹಣ್ಣುಗಳು ಮೆಲಟೋನಿನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಇದು ನಿಮ್ಮ ದೇಹದಲ್ಲಿ ನೈಸರ್ಗಿಕವಾಗಿ ಸಂಭವಿಸುವ ಹಾರ್ಮೋನ್ ಮತ್ತು ನೀವು ಎಷ್ಟು ಚೆನ್ನಾಗಿ ನಿದ್ರಿಸುತ್ತೀರಿ ಎಂಬುದರಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ.
ಬಾಳೆಹಣ್ಣು ಮಾತ್ರವಲ್ಲದೆ ಬಾದಾಮಿ, ಮೀನು, ಧಾನ್ಯಗಳು ಮತ್ತು ಚೀಸ್ ಕೂಡ ನಿದ್ರೆಗೆ ಸಹಕಾರಿಯಾಗಿದೆ.