ಕೆಲವು ಶಬ್ದ ಕೇಳಿದರೆ ನಿಮಗೆ ಕೋಪ ಬರುತ್ತದಾ? ಇದು ಸಾಮಾನ್ಯ ಸಮಸ್ಯೆಯೇನಲ್ಲ

09 July 2024

Author: Sushma Chakre

Pic credit - iStock

ಕೆಲವೊಬ್ಬರಿಗೆ ಒಂದೊಂದು ಶಬ್ದವನ್ನು ಕೇಳಿದರೆ ಕಿರಿಕಿರಿ ಉಂಟಾಗುತ್ತದೆ. ವಿಚಿತ್ರವೆಂದರೆ, ಯಾರಾದರೂ ಬಾಯಿ ತೆರೆದು ಅಗಿಯುವ ಅಥವಾ ತುಂಬಾ ಜೋರಾಗಿ ಉಸಿರಾಡುವ ಶಬ್ದವನ್ನು ಕೂಡ ಕೆಲವೊಮ್ಮೆ ನಮಗೆ ಸಹಿಸಿಕೊಳ್ಳಲು ಆಗುವುದಿಲ್ಲ.

Pic credit - iStock

ನಿಮಗೂ ಈ ರೀತಿಯ ಅನುಭವ ಆಗುತ್ತಿದ್ದರೆ ಅದನ್ನು ನಿರ್ಲಕ್ಷ್ಯ ಮಾಡಬೇಡಿ. ಇದು ನೀವು ಮಿಸೋಫೋನಿಯಾದಿಂದ ಬಳಲುತ್ತಿರುವುದರ ಲಕ್ಷಣವಾಗಿರಬಹುದು.

Pic credit - iStock

ಚಾಕ್‌ಬೋರ್ಡ್‌ನಲ್ಲಿ ಉಗುರುಗಳನ್ನು ಎಳೆಯುವ ಶಬ್ದ, ಚಹಾ ಕುಡಿಯುವಾಗ ಶಬ್ದ ಮಾಡುತ್ತಾ ಹೀರುವ ಶಬ್ದ, ಮಳೆ ನೀರು ಕೆಳಗೆ ಬೀಳುವ ಶಬ್ದ ಕೂಡ ನಿಮಗೆ ಕೋಪ ತರಿಸುತ್ತಿದ್ದರೆ ಅದನ್ನು ನಿರ್ಲಕ್ಷ್ಯ ಮಾಡಬೇಡಿ.

Pic credit - iStock

ಈ ಸಮಸ್ಯೆಯನ್ನು ಮಿಸೋಫೋನಿಯಾ ಎಂದು ಕರೆಯಲಾಗುತ್ತದೆ. ಮಿಸೋಫೋನಿಯಾವು ನಿರ್ದಿಷ್ಟ ಶಬ್ದಗಳಿಂದ ಪ್ರಚೋದಿಸಲ್ಪಟ್ಟ ಕೋಪ ಅಥವಾ ಆತಂಕದಂತಹ ತೀವ್ರವಾದ ಭಾವನಾತ್ಮಕ ಪ್ರತಿಕ್ರಿಯೆಗಳಿಂದ ನಿರೂಪಿಸಲ್ಪಟ್ಟ ಒಂದು ಸ್ಥಿತಿಯಾಗಿದೆ.

Pic credit - iStock

ಈ ಸಮಸ್ಯೆ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಸಾಮಾನ್ಯವಾಗಿದೆ. ಮಿಸೋಫೋನಿಯಾ ಬಾಲ್ಯದಲ್ಲಿ ಅಥವಾ ಹದಿಹರೆಯದ ಆರಂಭದಲ್ಲಿ ಬೆಳವಣಿಗೆಯಾಗುತ್ತದೆ.

Pic credit - iStock

ಸುಮಾರು ಶೇ. 15-20ರಷ್ಟು ಜನರು ಕೆಲವು ಮಟ್ಟದ ಮಿಸೋಫೋನಿಯಾವನ್ನು ಅನುಭವಿಸುತ್ತಾರೆ.

Pic credit - iStock

ಮಿಸೋಫೋನಿಯಾ ರೋಗಲಕ್ಷಣಗಳು ನಿರ್ದಿಷ್ಟ ಶಬ್ದಗಳಿಗೆ ಭಾವನಾತ್ಮಕ ಪ್ರತಿಕ್ರಿಯೆಗಳನ್ನು ಒಳಗೊಂಡಿರುತ್ತವೆ. ಇದನ್ನು ಸಾಮಾನ್ಯವಾಗಿ 'ಕ್ರೋಧ' ಅಥವಾ 'ಪ್ಯಾನಿಕ್' ಎನ್ನಲಾಗುತ್ತದೆ.

Pic credit - iStock

ಹೀಗಾಗಿ, ನೀವು ಕೂಡ ಸಣ್ಣಪುಟ್ಟ ಶಬ್ದಗಳಿಗೆ ಆತಂಕ ಪಡುತ್ತಿದ್ದರೆ ಅಥವಾ ಕಿರಿಕಿರಿ ಅನುಭವಿಸುತ್ತಿದ್ದರೆ ಈ ರೋಗದ ಲಕ್ಷಣಗಳನ್ನು ಅನುಭವಿಸುತ್ತಿರಬಹುದು, ಎಚ್ಚರ.

Pic credit - iStock