ಮನೆಯಲ್ಲಿ ಈ ಕೆಲವು ಸಾಮಗ್ರಿಗಳಿದ್ದರೆ, ಬೆಳಗ್ಗಿನ ಉಪಹಾರಕ್ಕೆ ದಕ್ಷಿಣ ಭಾರತದ ಪಾಲಕ್ ಮೊಟ್ಟೆ ದೋಸೆ ರೆಡಿಯಾದಂತೆಯೇ.
Pic credit - Pintrest
ಮೊದಲಿಗೆ 1 ಕಪ್ ಅಕ್ಕಿ , 1 ಚಮಚ ಮೆಂತ್ಯ ಕಾಳು, 1/2 ಕಪ್ ಉದ್ದಿನ ಬೇಳೆ 4 ಗಂಟೆಗಳ ಕಾಲ ನೆನೆಸಿಡಿ. ನಂತರ ರುಬ್ಬಿಕೊಂಡು,ರಾತ್ರಿಯಿಡಿ ಹುದುಗಲು ಬಿಡಿ.
Pic credit - Pintrest
2 ಕಪ್ ಪಾಲಕ್ ಹಾಗೂ 1 ಟೀಸ್ಪೂನ್ ಶುಂಠಿ ಹಾಕಿ ಪೇಸ್ಟ್ ತಯಾರಿಸಿ ಈ ಹಿಟ್ಟಿಗೆ ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ.
Pic credit - Pintrest
ಮತ್ತೊಂದು ಬಟ್ಟಲಿನಲ್ಲಿ 2 ಮೊಟ್ಟೆ ಒಡೆದು, ಅದಕ್ಕೆ 1 ಈರುಳ್ಳಿ, ಸ್ವಲ್ಪ ಕೊತ್ತಂಬರಿ ಸೊಪ್ಪು, 1/4 ಟೀಸ್ಪೂನ್ ಮೆಣಸಿನ ಪುಡಿ, 1 ಟೀಸ್ಪೂನ್ ಜೀರಿಗೆ, ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಿ.
Pic credit - Pintrest
ಸ್ಟೌವ್ ಮೇಲೆ ದೋಸೆ ತವಾ ಇಟ್ಟು ಎಣ್ಣೆ ಸವರಿಕೊಂಡು ತೆಳುವಾಗಿ ದೋಸೆ ಹಾಕಿಕೊಳ್ಳಿ. ಇದಕ್ಕೆ ಮೊಟ್ಟೆಯ ಮಿಶ್ರಣ ಹಾಕಿ 5 ನಿಮಿಷ ಕಾಲ ಬೇಯಿಸಿಕೊಳ್ಳಿ.
Pic credit - Pintrest
ದೋಸೆಯನ್ನು ಬೇಕಾದ ಆಕಾರದಲ್ಲಿ ಮಡಚಿದರೆ ಪಾಲಕ್ ಮೊಟ್ಟೆ ದೋಸೆ ಸವಿಯಲು ಸಿದ್ಧವಾಗಿರುತ್ತದೆ.