ಸ್ವಾಮಿ ವಿವೇಕಾನಂದರ ಸಂದೇಶಗಳು

12  Jan 2024

Author: Vivek Biradar

ಜನವರಿ 12 ರಂದು ವಿಶ್ವದಾದ್ಯಂತ ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಗುತ್ತದೆ.

ಸ್ವಾಮಿ ವಿವೇಕಾನಂದರ ಜನ್ಮ ದಿನವನ್ನು ಪ್ರತಿವರ್ಷ "ಯುವದಿನ"ವೆಂದು ಆಚರಣೆ ಮಾಡಲಾಗುತ್ತದೆ.

ಸ್ವಾಮಿ ವಿವೇಕಾನಂದರ ಮೂಲ ಹೆಸರು ನರೇಂದ್ರನಾಥ ದತ್ತ ಇವರು 1863, ಜನವರಿ 12ರಂದು ಕೊಲ್ಕತ್ತಾದಲ್ಲಿ ಜನಿಸಿದರು. ತಂದೆ ವಿಶ್ವನಾಥ ದತ್ತ, ತಾಯಿ ಭುವನೇಶ್ವರಿ ದೇವಿ.

ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ.

ನನಗೆ ಬೇಕಾದುದು ಕಬ್ಬಿಣದ ಸ್ನಾಯುಗಳು, ಉಕ್ಕಿನ ನರಗಳು ಮತ್ತು ಸಿಡಿಲಿನಂಥ ಮನಸ್ಸುಗಳು. ಅಂತಹ ಕೆಲವೇ ತರುಣರಿಂದ ದೇಶದ ಭವಿಷ್ಯವನ್ನೇ ಬದಲಾಯಿಸಬಲ್ಲದು.

ನಿಜವಾದ ಶಿಕ್ಷಣವೆಂದರೆ ಮಾನವೀಯತೆಯ ವಿಕಾಸ.

ಯಾವುದೇ ಸಮಸ್ಯೆ ಎದುರಿಸದೆ ದಿನವಿಡೀ ನಡೆದರೆ, ನೀವು ತಪ್ಪು ದಾರಿಯಲ್ಲಿದ್ದೀರಿ ಎಂದು ತಿಳಿಯುತ್ತದೆ.

ಜೀವನದಲ್ಲಿ ಎತ್ತರಕ್ಕೆ ಏರಲು, ನಿಮ್ಮ ಆಂತರಿಕ ಅಹಂಕಾರವನ್ನು ಹೊರಹಾಕು. ನಿನ್ನ ಮನಸ್ಸನ್ನು ಹಗರುಗೊಳಿಸು. ಆಂತರಿಕವಾಗಿ ಹಗುರವಾದವರು ಮಾತ್ರ ಎತ್ತರಕ್ಕೆ ಏರಲು ಸಾಧ್ಯ

ಅನ್ಯರ ಸೇವೆ ಮಾಡಿ. ಮುಕ್ತವಾಗಿ ದಾನ ಮಾಡಿ. ನಿಸ್ವಾರ್ಥವಾಗಿ ಪ್ರೀತಿಸಿ. ಬುದ್ಧಿವಂತಿಕೆಯಿಂದ ಖರ್ಚು ಮಾಡಿ. ಕಾರಣದೊಂದಿಗೆ ವಾದಿಸಿ. ಸಂಕ್ಷಿಪ್ತವಾಗಿ ಮಾತನಾಡಿ

ಯಾವ ಸಮಾಜ ಹೆಣ್ಣನ್ನು ಗೌರವಿಸುವುದಿಲ್ಲವೋ, ಅದು ಬೇಗ ನಾಶವಾಗುತ್ತದೆ

ಅಡಕೆ ಧಾರಣೆ ಮತ್ತು ಕೋಕೋ ದರ ಹೀಗಿದೆ