Author: Sushma Chakre

ಜಪಾನೀಯರ ಈ ಹವ್ಯಾಸಗಳು ನಿಮ್ಮನ್ನು ಆ್ಯಕ್ಟಿವ್ ಆಗಿಡುತ್ತವೆ

28 Dec 2023

Author: Sushma Chakre

ನಿಮಗೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ಇದ್ದರೆ ಈ ಜಪಾನೀಸ್ ವಾಟರ್ ಥೆರಪಿ ಬಗ್ಗೆ ತಿಳಿದುಕೊಳ್ಳಲೇಬೇಕು. ನಿಮ್ಮ ರೂಮಿನ ತಾಪಮಾನದಲ್ಲಿರುವ (ಜಾಸ್ತಿ ಬಿಸಿಯೂ ಅಲ್ಲ, ತಣ್ಣಗೂ ಅಲ್ಲ) ನೀರನ್ನು ದಿನವೂ ಬೆಳಗ್ಗೆ ಎದ್ದ ಕೂಡಲೆ ನಾಲ್ಕೈದು ಗ್ಲಾಸ್ ಕುಡಿಯುವ ಮೂಲಕ ಆರಂಭಿಸುವುದು ಜಪಾನೀಸ್ ವಾಟರ್ ಥೆರಪಿ. ಇದು ನಿಮ್ಮ ದೇಹವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ, ಜೀರ್ಣಕಾರಿ ಕಾರ್ಯಗಳನ್ನು ಹೆಚ್ಚಿಸುತ್ತದೆ.

ಜಪಾನೀಸ್ ವಾಟರ್ ಥೆರಪಿ

ಒಮ್ಮೆ ತಿಂಡಿ ತಿಂದ ಬಳಿಕ ಬೇರೆ ಯಾವುದನ್ನಾದರೂ ತಿನ್ನುವ ಅಥವಾ ಕುಡಿಯುವ ಮೊದಲು ಕನಿಷ್ಠ 2 ಗಂಟೆಗಳ ಕಾಲ ಅಂತರ ನೀಡಬೇಕು.

ಊಟದ ನಡುವೆ ಅಂತರ ನೀಡಿ

ನೀವು ಯಾವಾಗಲೂ ನಿಮ್ಮ ಹೊಟ್ಟೆ ಶೇ. 80ರಷ್ಟು ಫುಲ್ ಆಗುವವರೆಗೆ ಮಾತ್ರ ತಿನ್ನಬೇಕು. ಹೊಟ್ಟೆ ಬಿರಿಯುವಷ್ಟು ತಿನ್ನಬಾರದು. ಇದು ನೀವು ಅತಿಯಾಗಿ ಸೇವಿಸುವುದನ್ನು ತಪ್ಪಿಸುತ್ತದೆ ಮತ್ತು ಆರೋಗ್ಯವನ್ನು ಸುಧಾರಿಸುತ್ತದೆ.

ಅರಿವಿನೊಂದಿಗೆ ತಿನ್ನುವುದು

ದಿನವೂ ಗ್ರೀನ್ ಟೀ ಸೇವಿಸಿ. ಇದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಗ್ರೀನ್ ಟೀಯಲ್ಲಿ ಉತ್ಕರ್ಷಣ ನಿರೋಧಕ ಹೇರಳವಾಗಿದೆ. ಇದು ದೀರ್ಘಾಯುಷ್ಯ ನೀಡುತ್ತದೆ.

ಗ್ರೀನ್ ಟೀ ಸೇವನೆ

ಜಪಾನ್​ನಲ್ಲಿ ತೋಟಗಾರಿಕೆ ಬಹಳ ಸಾಮಾನ್ಯ ಹವ್ಯಾಸವಾಗಿದೆ. "ಟ್ಸುಬೊ-ನಿವಾ" ಎಂದು ಕರೆಯಲ್ಪಡುವ ಸಣ್ಣ ಉದ್ಯಾನವನ್ನು ಬೆಳೆಸುವ ಹವ್ಯಾಸ ತಾಜಾ ಉತ್ಪನ್ನಗಳ ಜೊತೆಗೆ ಪ್ರಕೃತಿಯೊಂದಿಗೆ ಬೆರೆಯುವಂತೆ ಮಾಡುತ್ತದೆ.

ಉದ್ಯಾನ ಕೃಷಿ

ನಿಯಮಿತವಾಗಿ ಬಿಸಿ ನೀರಿನ ಸ್ನಾನವನ್ನು ಮಾಡಿ. ಜಪಾನಿನ ಸ್ನಾನಗೃಹಗಳು ವಿಶ್ರಾಂತಿಯನ್ನು ಉಂಟುಮಾಡುವ, ರಕ್ತಪರಿಚಲನೆಯನ್ನು ಉತ್ತೇಜಿಸುವ ಮತ್ತು ಒತ್ತಡವನ್ನು ಕಡಿಮೆ ಮಾಡುವ ಸಾಮರ್ಥ್ಯಕ್ಕೆ ಹೆಸರುವಾಸಿಯಾಗಿದೆ.

ಬಿಸಿ ನೀರಿನ ಸ್ನಾನ

ವಾಕಿಂಗ್, ಸೈಕ್ಲಿಂಗ್ ಅಥವಾ ಸಮರ ಕಲೆಗಳ ತರಬೇತಿಯಂತಹ ನಿಯಮಿತ ವ್ಯಾಯಾಮ ಮಾಡುತ್ತಿರಿ. ಜಪಾನಿನ ಜನರ ದೀರ್ಘಾಯುಷ್ಯದ ಮುಖ್ಯ ರಹಸ್ಯವೆಂದರೆ ದೈನಂದಿನ ಜೀವನದಲ್ಲಿ ಅವರು ಚಟುವಟಿಕೆಯಿಂದ ಇರುವುದು.

ಆಗಾಗ ವ್ಯಾಯಾಮ

ನಿಮ್ಮ ದೈನಂದಿನ ಪ್ರಯಾಣಕ್ಕಾಗಿ ಸೈಕಲ್ ಬಳಸಿ. ಸ್ವಲ್ಪ ಹತ್ತಿರದ ಜಾಗಕ್ಕೆಲ್ಲ ಜಪಾನೀಯರು ಸೈಕಲ್‌ಗಳಲ್ಲೇ ಪ್ರಯಾಣ ಮಾಡುತ್ತಾರೆ. ಇದರಿಂದ ಇಂಧನವೂ ಉಳಿಯುತ್ತದೆ, ದೇಹಕ್ಕೆ ವ್ಯಾಯಾಮವೂ ಸಿಗುತ್ತದೆ.

ಕೆಲಸ ಮಾಡಲು ಸೈಕಲ್ ಸವಾರಿ

ಸ್ಥಳೀಯವಾಗಿ ಮತ್ತು ತಾಜಾವಾಗಿ ಉತ್ಪಾದಿಸುವ ಆಹಾರಗಳಿಗೆ ಆದ್ಯತೆ ನೀಡುವ ಮೂಲಕ ಸಮತೋಲಿತ ಆಹಾರವನ್ನು ಸೇವಿಸಿ. ಉತ್ತಮ ಪೋಷಣೆಗಾಗಿ ತರಕಾರಿಗಳು, ಮೀನು ಮತ್ತು ಧಾನ್ಯಗಳನ್ನು ಸೇವಿಸಿ.

ಸಮತೋಲಿತ ಆಹಾರ