ಒಂದು ಬೌಲ್ ತೆಗೆದುಕೊಂಡು ಮಾಗಿದ ಆವಕಾಡೊ ಹಣ್ಣನ್ನು ಹಾಕಿ, 1 ಚಮಚ ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ. ಈ ಫೇಸ್ ಪ್ಯಾಕ್ ಅನ್ನು ಹಚ್ಚಿಕೊಂಡು, 15-20 ನಿಮಿಷಗಳ ಕಾಲ ಬಿಡಿ. ಆವಕಾಡೊ ಮತ್ತು ಜೇನುತುಪ್ಪದ ಫೇಸ್ ಪ್ಯಾಕ್ ಅನ್ನು ಹಚ್ಚುವುದರಿಂದ ಚಳಿಗಾಲದಲ್ಲಿ ಉಂಟಾಗುವ ಒಣ ತ್ವಚೆಗೆ ನೈಸರ್ಗಿಕ ಪರಿಹಾರ ನೀಡುತ್ತದೆ. ಇದು ಚರ್ಮವನ್ನು ಮೃದುವಾಗಿರಿಸುತ್ತದೆ.