ಮುಂಜಾನೆ ಮಕ್ಕಳನ್ನು ಎಬ್ಬಿಸಲು ಇಲ್ಲಿದೆ ಸಿಂಪಲ್ ಟಿಪ್ಸ್
22 November 2024
Pic credit - Pintrest
Sainanda
ಮಕ್ಕಳನ್ನು ಬೆಳಿಗ್ಗೆ ಎಬ್ಬಿಸಿ, ಶುಚಿಗೊಳಿಸಿ, ತಿಂಡಿ ತಿನ್ನಿಸಿ ಶಾಲೆಗೆ ರೆಡಿ ಮಾಡಿ ಕಳುಹಿಸುವುದು ಪೋಷಕರಿಗೆ ಸವಾಲಿನ ಕೆಲಸ.
Pic credit - Pintrest
ಹೀಗಾಗಿ ನಿಮ್ಮ ಮಗುವಿಗೆ ಯಾವ ಸಮಯದಲ್ಲಿ ನಿದ್ರೆ ಬರುತ್ತದೆ ನೋಡಿಕೊಳ್ಳಿ. 6 ರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ 10 ರಿಂದ 11 ಗಂಟೆಗಳ ನಿದ್ರೆ ಅವಶ್ಯಕ.
Pic credit - Pintrest
12 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕನಿಷ್ಠ ಒಂಬತ್ತು ಗಂಟೆಗಳ ಕಾಲ ನಿದ್ದೆ ಮಾಡಲು ಬಿಡುವುದು ಸೂಕ್ತ.
Pic credit - Pintrest
ರಾತ್ರಿ ಮಲಗುವ ಮುನ್ನ ಮಕ್ಕಳಿಗೆ ಲೈಟ್ ಫುಡ್ ಗಳನ್ನು ನೀಡಿ, ಸಿಹಿ ತಿಂಡಿಗಳನ್ನು ನೀಡುವುದನ್ನು ಆದಷ್ಟು ತಪ್ಪಿಸಿ. ಇದು ನಿದ್ದೆಯನ್ನು ಹಾಳು ಮಾಡಬಹುದು.
Pic credit - Pintrest
ಮಕ್ಕಳಿಗೆ ದಿನ ನಿತ್ಯ ವ್ಯಾಯಾಮ ಮಾಡಿಸಿ, ಆದರೆ ಮಲಗುವ ಸಮಯ ಹತ್ತಿರವಿರುವಾಗ ಯಾವುದೇ ದೈಹಿಕ ಚಟುವಟಿಕೆಗಳನ್ನು ಮಾಡಿಸಬೇಡಿ.
Pic credit - Pintrest
ಮಲಗುವುದಕ್ಕಿಂತ ಒಂದು ಘಂಟೆ ಮುಂಚೆಯೇ ಮಕ್ಕಳಿಗೆ ಮೊಬೈಲ್ ನೀಡುವುದಾಗಲಿ ಅಥವಾ ಟಿವಿಯನ್ನು ನೋಡಲು ಬಿಡದಿರುವುದು ಸೂಕ್ತ. ಇವುಗಳ ಬೆಳಕು ನಿದ್ದೆಯನ್ನು ಹಾಳು ಮಾಡುತ್ತವೆ.
Pic credit - Pintrest
ಮಕ್ಕಳು ಮಲಗುವ ಕೋಣೆಯೂ ಶಾಂತ ಹಾಗೂ ಆರಾಮಾದಾಯಕವಾಗಿರಲಿ. ಕತ್ತಲೆಗೆ ಮಕ್ಕಳು ಭಯ ಪಟ್ಟು ಕೊಳ್ಳುತ್ತಾರೆಂದರೆ ನೈಟ್ ಲೈಟ್ ಬಳಸಿ.
Pic credit - Pintrest
ಸಂಕೋಚ ಸ್ವಭಾವದಿಂದ ಹೊರ ಬರಲು ಸುಲಭ ಮಾರ್ಗಗಳು ಇಲ್ಲಿವೆ ನೋಡಿ
ಇದನ್ನೂ ಓದಿ