ಈ ಚಳಿಗಾಲದಲ್ಲಿ ಹಿಮದ ಸೊಬಗನ್ನು ಕಣ್ತುಂಬಿಕೊಳ್ಳಲು ಈ ಸ್ಥಳಗಳಿಗೆ ಭೇಟಿ ನೀಡಿ
2 December 2023
Author: Malashree Anchan
ಹೆಚ್ಚಿನರಿಗೆ ಚಳಿಗಾಲದ ಸಮಯದಲ್ಲಿ ಸ್ನೋ ಫಾಲ್ ಬೀಳುವ ಸ್ಥಳಗಳಿಗೆ ಭೇಟಿ ನೀಡುವ ಆಸೆಯಿರುತ್ತದೆ. ಅದಕ್ಕಾಗಿ ನೀವು ಯುರೋಪ್ ದೇಶಗಳಿಗೆ ಭೇಟಿ ನೀಡಬೇಕೆಂದಿಲ್ಲ, ಭಾರತದಲ್ಲಿಯೇ ಅಂತಹ ಸುಂದರ ಸ್ಥಳಗಳಿವೆ, ಈ ಸ್ಥಳಗಳಿಗೆ ಪ್ರವಾಸ ಹೋಗುವ ಮೂಲಕ ಹಿಮದ ಸೊಬಗನ್ನು ಕಣ್ತುಂಬಿಕೊಳ್ಳಬಹುದು.
ಗುಲ್ಮಾರ್ಗ್ ಕಾಶ್ಮೀರದಲ್ಲಿನ ಒಂದು ರಮಣೀಯ ಸ್ಥಳವಾಗಿದ್ದು, ಇಲ್ಲಿ ನೀವು ನೀವು ಹಿಮದಿಂದ ಆವೃತವಾಗಿರುವಂತಹ ಕಣಿವೆಗಳ ಸೊಬಗನ್ನು ಕಣ್ತುಂಬಿಕೊಳ್ಳಬಹುದು. ಅಲ್ಲದೆ ಇಲ್ಲಿ ಸ್ಕೀಯಿಂಗ್, ಸ್ನೋಬೋರ್ಡಿಂಗ್, ಕೇಬಲ್ ಕಾರ್ ರೈಡ್, ಟ್ರೆಕ್ಕಿಂಗ್ನಂತಹ ಅನೇಕ ಸಾಹಸಿ ಕ್ರೀಡೆಗಳನ್ನು ಕೂಡಾ ಆನಂದಿಸಬಹುದು.
ಗುಲ್ಮಾರ್ಗ್
ಮಾನಾಲಿಯು ಭಾರತದ ಅತ್ಯಂತ ಜನಪ್ರಿಯ ಗಿರಿಧಾಮಗಳಲ್ಲಿ ಒಂದಾಗಿದೆ. ಇದು ಹೆಚ್ಚಿನ ಜನರ ನೆಚ್ಚಿನ ಪ್ರವಾಸಿ ತಾಣವಾಗಿದೆ. ಹಿಮದ ಸೊಬಗನ್ನು ಕಣ್ತುಂಬಿಕೊಳ್ಳಬೇಕೆಂದರೆ ನೀವು ಇಲ್ಲಿಗೆ ಭೇಟಿ ನೀಡಬಹುದು. ಅಲ್ಲದೆ ಇಲ್ಲಿ ನೀವು ಸ್ಕೀಯಿಂಗ್, ಟ್ರೆಕ್ಕಿಂಗ್ ನಂತಹ ಸಾಹಸ ಚಟುವಟಿಕೆಗಳನ್ನು ಕೂಡ ಮಾಡಬಹುದು.
ಮನಾಲಿ
ಉತ್ತರಾಖಂಡದ ಮಸ್ಸೂರಿಯನ್ನು ಬೆಟ್ಟಗಳ ರಾಣಿ ಎಂದು ಕರೆಯಲಾಗುತ್ತದೆ. ಈ ಪ್ರದೇಶ ಚಳಿಗಾಲದಲ್ಲಿ ನೋಡಲು ಸ್ವರ್ಗದಂತಿರುತ್ತದೆ. ಹಿಮದಿಂದ ಆವೃತವಾದ ಬೆಟ್ಟಗಳು, ಸ್ನೋಫ್ಲೇಕ್ ಗಳಿಂದ ಅಲಂಕರಿಸಲ್ಪಟ್ಟ ಪೈನ್ ಮರಗಳ ಸುಂದರವಾದ ದೃಶ್ಯಗಳನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು.
ಮಸ್ಸೂರಿ
ಅರುಣಾಚಲಪ್ರದೇಶದ ತವಾಂಗ್ ಶಿಮ್ಲಾ ಮತ್ತು ಮನಾಲಿಗಿಂತ ಕಡಿಮೆಯಿಲ್ಲ. ತವಾಂಗ್ ಅಲ್ಲಿ ನೀವು ಸ್ನೋ ಫಾಲ್ ಅನ್ನು ಸಹ ಆನಂದಿಸಬಹುದು.
ತವಾಂಗ್
ಭಾರತದ ಮಿನಿ ಸ್ವಿಟ್ಜರ್ಲ್ಯಾಂಡ್ ಎಂದು ಕರೆಯಲ್ಪಡುವ ಚೋಪ್ತಾ ಒಂದು ಆಕರ್ಷಕ ಗಿರಿಧಾಮವಾಗಿದ್ದು, ಚಳಿಗಾಲದಲ್ಲಿ ಪ್ರವಾಸ ಕೈಗೊಳ್ಳಲು ಅತ್ಯಂತ ಸೂಕ್ತ ಸ್ಥಳವಾಗಿದೆ.