ಪ್ರತಿಯೊಂದು ಸಂಬಂಧವು ವಿಭಿನ್ನವಾಗಿರುತ್ತದೆ. ಸಂಬಂಧಗಳ ನಡುವೆ ಬ್ರೇಕಪ್ ಆಗಲು ಹಲವು ಅಂಶಗಳು ಕಾರಣವಾಗುತ್ತವೆ. ಅವುಗಳಲ್ಲಿ ಪ್ರಮುಖವಾದವುಗಳ ಬಗ್ಗೆ ಮಾಹಿತಿ ಇಲ್ಲಿದೆ.
ಏಕೆ ಬ್ರೇಕಪ್ ಆಗುತ್ತದೆ?
ಸಂವಹನದ ಕೊರತೆಯು ಸಾಮಾನ್ಯವಾಗಿ ಸಂಬಂಧಗಳಲ್ಲಿನ ಸಮಸ್ಯೆಗಳಿಗೆ ಮೂಲ ಕಾರಣವಾಗಿದೆ. ಇದು ಬ್ರೇಕಪ್ಗೆ ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ. ನಿಯಮಿತವಾಗಿ ಸಂವಹನ ನಡೆಸುವ ಜೋಡಿ ಆರೋಗ್ಯಕರ ಸಂಬಂಧವನ್ನು ಕಾಪಾಡಿಕೊಳ್ಳುತ್ತಾರೆ.
ಸಂವಹನದ ಕೊರತೆ
ವಾದಗಳಿಂದ ಹಿಂದೆ ಸರಿಯುವುದು ಸಂಬಂಧಗಳಿಗೆ ಸವಾಲಾಗಿದೆ. ವಾದಗಳ ಸಮಯದಲ್ಲಿ ಯಾರಾದರೊಬ್ಬರು ಸುಮ್ಮನೇ ಇರಬೇಕು. ವಾದ ಮುಂದುವರೆದರೆ ಅದು ಸಂಬಂಧ ಹಳಸಲು ಕಾರಣವಾಗುತ್ತದೆ.
ವಾದ ಮಾಡಬೇಡಿ
ಸಂಬಂಧವನ್ನು ಕೊನೆಗೊಳಿಸಲು ಮತ್ತೊಂದು ಕಾರಣವು ದಾಂಪತ್ಯ ದ್ರೋಹವಾಗಿದೆ. ಕೆಲವು ದಂಪತಿ ತಮಗಾದ ಮೋಸ ಗೊತ್ತಾದ ಬಳಿಕ ಹಿಂದೆ ಸರಿಯಲು ಬಯಸುತ್ತಾರೆ. ದಾಂಪತ್ಯದಲ್ಲಿ ನಿಯತ್ತು ಮುಖ್ಯ.
ದಾಂಪತ್ಯ ದ್ರೋಹ
ಸಂಬಂಧದಲ್ಲಿ ಗೌರವದ ಕೊರತೆ ಇದ್ದಾಗ ದಂಪತಿಗಳು ಪರಸ್ಪರ ಅರ್ಥ ಮಾಡಿಕೊಳ್ಳುವುದಿಲ್ಲ. ಅಗೌರವ ಉಂಟಾದಾಗ ಅವರಿಬ್ಬರೂ ಒಟ್ಟಿಗೇ ಇರಲು ಸಾಧ್ಯವಿಲ್ಲ.
ಗೌರವದ ಕೊರತೆ
ನಿಮ್ಮ ಸಂಗಾತಿಗೆ ನಿಮ್ಮ ಬಗ್ಗೆ ಅತಿಯಾದ ಅಸೂಯೆ ಅಥವಾ ಅಭದ್ರತೆ ಇದ್ದರೆ ಅದು ಸಂಬಂಧ ಹಾಳಾಗಲು ಕಾರಣವಾಗಬಹುದು. ಇದು ಕೂಡ ಬ್ರೇಕಪ್ಗೆ ಮುಖ್ಯ ಕಾರಣವಾಗಿದೆ.
ಅತಿಯಾದ ಅಸೂಯೆ
ನಿಮ್ಮ ಸಂಗಾತಿ ನಿಮಗಾಗಿ ಮಾಡುವ ಎಲ್ಲದಕ್ಕೂ ಧನ್ಯವಾದ ಹೇಳಲು ಮರೆಯಬೇಡಿ. ಕೃತಜ್ಞತೆಯ ಅಭಿವ್ಯಕ್ತಿ ಇಲ್ಲದಿದ್ದಾಗ ನಿಮ್ಮ ಸಂಗಾತಿಗೆ ತನ್ನ ಪ್ರಯತ್ನಗಳು ನಿಮ್ಮ ಗಮನಕ್ಕೆ ಬಂದಿಲ್ಲ ಎಂದು ಬೇಸರವಾಗಬಹುದು. ಅದು ಅಂತಿಮವಾಗಿ ನಿಮ್ಮಿಬ್ಬರ ನಡುವೆ ಅಂತರವನ್ನು ಸೃಷ್ಟಿಸುತ್ತದೆ.