ಭಾರತದಲ್ಲಿ ಅತಿ ಹೆಚ್ಚು ತೆಂಗು ಬೆಳೆಯುವ ರಾಜ್ಯ ಯಾವುದು?
22 February 2025
Pic credit - Pintrest
Sainanda
ಕಲ್ಪವೃಕ್ಷ ಎಂದೇ ಕರೆಯಲಾಗುವ ತೆಂಗಿನ ಮರ ವರ್ಷಪೂರ್ತಿ ಫಲ ನೀಡುವ ಮರವಾಗಿದ್ದು, ಇದರ ಪ್ರಯೋಜನ ಒಂದೆರಡಲ್ಲ.
Pic credit - Pintrest
ಧಾರ್ಮಿಕ ಕಾರ್ಯಗಳಿಂದ ಹಿಡಿದು ಔಷಧಗಳ ತಯಾರಿಕೆ, ಅಡುಗೆ ಹಾಗೂ ಸೌಂದರ್ಯವರ್ಧಕಗಳವರೆಗೆ ತೆಂಗಿನಕಾಯಿಯನ್ನು ಬಳಸಲಾಗುತ್ತದೆ.
Pic credit - Pintrest
ಭಾರತದಲ್ಲಿ ತೆಂಗಿನಕಾಯಿ ಪ್ರಮುಖ ಬೆಳೆಯಾಗಿದ್ದು, ಆದರೆ ಈ ರಾಜ್ಯದಲ್ಲಿ ಅತೀ ಹೆಚ್ಚು ತೆಂಗಿನಕಾಯಿ ಬೆಳೆಯಲಾಗುತ್ತದೆ.
Pic credit - Pintrest
ಅನುಕೂಲಕರ ಹವಾಮಾನ ಹಾಗೂ ಫಲವತ್ತಾದ ಮಣ್ಣಿನ ಕಾರಣದಿಂದಾಗಿ ತಮಿಳುನಾಡು ಭಾರತದ ಒಟ್ಟು ತೆಂಗಿನ ಕಾಯಿ ಉತ್ಪಾದನೆಯಲ್ಲಿ 31 ರಷ್ಟು ಪಾಲನ್ನು ಪಡೆದಿದೆ.
Pic credit - Pintrest
ತಮಿಳುನಾಡಿನ ಗ್ರಾಮೀಣ ಆರ್ಥಿಕತೆಗೆ ತೆಂಗು ಪ್ರಮುಖ ಬೆಳೆಯಾಗಿದ್ದು, ಇದು ಸಾವಿರಾರು ರೈತರು ಹಾಗೂ ಕಾರ್ಮಿಕರಿಗೆ ಉದ್ಯೋಗವನ್ನು ಒದಗಿಸುತ್ತದೆ.
Pic credit - Pintrest
ಈ ರಾಜ್ಯದಲ್ಲಿ ತೆಂಗು ಕೃಷಿಯೂ 4.2 ಲಕ್ಷ ಹೇಕ್ಟರ್ ನಷ್ಟು ಹೆಚ್ಚು ವಿಸ್ತಾರವಾಗಿದ್ದು, ತಿರುನಲ್ವೇಲಿ, ತೂತುಕುಡಿ ಹಾಗೂ ಕನ್ಯಾಕುಮಾರಿ ಪ್ರಮುಖ ಕೇಂದ್ರಗಳಾಗಿವೆ.
Pic credit - Pintrest
ಈ ರಾಜ್ಯದಲ್ಲಿ ಪ್ರತಿ ಹೇಕ್ಟರ್ ಗೆ 10,000 ತೆಂಗಿನಕಾಯಿ ಇಳುವರಿಯಾಗಿ ಬರುತ್ತದೆ. ಮುಂದುವರಿದ ಕೃಷಿ ತಂತ್ರಗಳು ಹಾಗೂ ಹವಮಾನವೇ ಹೆಚ್ಚಿನ ಇಳುವರಿಗೆ ಕಾರಣವಾಗಿದೆ.
Pic credit - Pintrest
ಇದು ನೋಡಿ ನಮ್ಮ ಜೀವನದ ಕಠಿಣ ಸತ್ಯಗಳು
ಇದನ್ನೂ ಓದಿ