8 November 2024
Pic credit - iStock
Author: Sushma Chakre
ನೀವು ಕೂಡ ಬೆಳಗಿನ ಜಾವ 3 ಗಂಟೆಯಿಂದ 5ರ ನಡುವೆ ನಿದ್ರೆಯಿಂದ ಎಚ್ಚರಗೊಳ್ಳುತ್ತೀರಾ? ಅದಕ್ಕೆ ಕಾರಣವೇನು? ಅದನ್ನು ಹೇಗೆ ಸರಿಪಡಿಸುವುದು? ಎಂಬ ಕುರಿತು ಮಾಹಿತಿ ಇಲ್ಲಿದೆ.
Pic credit - iStock
ನೀವು ಕೆಲವೊಮ್ಮೆ ಬೆಳಿಗ್ಗೆ 3ರಿಂದ 5 ಗಂಟೆಯ ನಡುವೆ ಏಕೆ ಎಚ್ಚರಗೊಳ್ಳುತ್ತೀರಿ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ಈ ನಿದ್ರಾ ಭಂಗವು ಆರೋಗ್ಯದ ಸಮಸ್ಯೆಗೆ ಕಾರಣವಾಗಬಹುದು.
Pic credit - iStock
ತಜ್ಞರು ಬೆಳಿಗ್ಗೆ 3-5 ಗಂಟೆಗೆ ಎಚ್ಚರಗೊಳ್ಳುವ ಸಮಯವು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿನ ಏರಿಳಿತಗಳಿಗೆ ಕಾರಣವಾಗುತ್ತದೆ. ಸಕ್ಕರೆಯ ಮಟ್ಟದಲ್ಲಿ ಸ್ವಲ್ಪ ಕುಸಿತವು ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್ ಬಿಡುಗಡೆಯನ್ನು ಪ್ರಚೋದಿಸುತ್ತದೆ ಮತ್ತು ಇದು ನಿದ್ರೆಯನ್ನು ಅಡ್ಡಿಪಡಿಸುತ್ತದೆ ಎನ್ನುತ್ತಾರೆ.
Pic credit - iStock
ನಿದ್ರೆಗೂ ಮುನ್ನ ಜೇನುತುಪ್ಪ, ಕಾಲಜನ್ ಮತ್ತು ಎಂಸಿಟಿ ಎಣ್ಣೆಯನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಹಠಾತ್ ಕುಸಿತ ಕಡಿಮೆಯಾಗುತ್ತದೆ.
Pic credit - iStock
ದೀರ್ಘಕಾಲದ ಒತ್ತಡವು ನಿದ್ರಾ ಭಂಗಕ್ಕೆ ಕಾರಣವಾಗಬಹುದು. ಹೆಚ್ಚಿನ ಕಾರ್ಟಿಸೋಲ್ ಮಟ್ಟಗಳು ಮಧ್ಯರಾತ್ರಿಯಲ್ಲಿ ನಿಮ್ಮ ನಿದ್ರೆಯನ್ನು ಅಡ್ಡಿಪಡಿಸಬಹುದು.
Pic credit - iStock
ಉತ್ತಮ ನಿದ್ರೆಗಾಗಿ, ನೀವು ಯೋಗ, ಸ್ಟ್ರೆಚಿಂಗ್, ವ್ಯಾಯಾಮ ಮತ್ತು ಧ್ಯಾನ ಮಾಡುವುದನ್ನು ಪ್ರಾರಂಭಿಸಬೇಕು.
Pic credit - iStock
ಅಸಮತೋಲನದ ನಿದ್ರೆಯ ಚಕ್ರವು ನಿಮ್ಮ ದೇಹದ ಆಂತರಿಕ ಗಡಿಯಾರಕ್ಕೆ ಸಹ ಕಾರಣವಾಗಿದೆ. ಸಿರ್ಕಾಡಿಯನ್ ರಿದಮ್ನಲ್ಲಿನ ಅಡಚಣೆಗಳು ನಿದ್ರಾ ಭಂಗಕ್ಕೆ ಕಾರಣವಾಗುತ್ತವೆ. ನಿದ್ರೆ ಮತ್ತು ಏಳುವ ಸಮಯವನ್ನು ಒಂದೇ ಸಮಯಕ್ಕೆ ಫಿಕ್ಸ್ ಮಾಡುವ ಮೂಲಕ ಇದನ್ನು ಸರಿಪಡಿಸಬಹುದು.
Pic credit - iStock
ಕೆಲವು ಅಭ್ಯಾಸಗಳು ಮಧ್ಯರಾತ್ರಿಯಲ್ಲಿ ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರಬಹುದು. ರಾತ್ರಿಯಲ್ಲಿ ಒಮ್ಮೆಯಾದರೂ ಮೂತ್ರ ವಿಸರ್ಜಿಸಬೇಕಾದ ಸ್ಥಿತಿ ನೊಕ್ಟೂರಿಯಾ. ಮಲಗುವ ಮುನ್ನ ಹೆಚ್ಚು ದ್ರವವನ್ನು ಸೇವಿಸುವ ಜನರು ಅಥವಾ ಮೂತ್ರನಾಳದ ಸೋಂಕಿನಿಂದ ಬಳಲುತ್ತಿರುವವರು ನೋಕ್ಟೂರಿಯಾವನ್ನು ಅನುಭವಿಸಬಹುದು.
Pic credit - iStock
ಗೊರಕೆ ಕೂಡ ನಿದ್ರೆಯ ಚಕ್ರವನ್ನು ಸಹ ತೊಂದರೆಗೊಳಿಸಬಹುದು. ಗೊರಕೆಯ ವೇಳೆ ನಿಮ್ಮ ಗಂಟಲಿನ ಸ್ನಾಯುಗಳು ಅಗಲವಾಗುತ್ತವೆ. ಇದು ನಿಮ್ಮ ವಾಯುಮಾರ್ಗವನ್ನು ಕಿರಿದಾಗಿಸುತ್ತದೆ. ಇದರಿಂದಾಗಿ ನಿಮ್ಮ ಆಮ್ಲಜನಕದ ಮಟ್ಟವು ಕುಸಿಯುತ್ತದೆ. ಇದು ಮಧ್ಯರಾತ್ರಿಯಲ್ಲಿ ನಿಮ್ಮನ್ನು ಎಚ್ಚರಗೊಳಿಸುತ್ತದೆ.
Pic credit - iStock
ಮಲಗುವಾಗ ಹೆಚ್ಚು ಆಲ್ಕೊಹಾಲ್ ಸೇವನೆಯು ನಿಮ್ಮ ನಿದ್ರೆಯ ಚಕ್ರದ ಮೇಲೆ ಪರಿಣಾಮ ಬೀರಬಹುದು. ಇದು ನಿದ್ರೆಯ ಸಮಸ್ಯೆಗೆ ಕಾರಣವಾಗುತ್ತದೆ.
Pic credit - iStock