ಈಜುವುದರಿಂದ ಡಯಾಬಿಟಿಸ್ ನಿಯಂತ್ರಿಸಬಹುದಾ?

22 Nov 2023

ಇತ್ತೀಚೆಗೆ ಮಧುಮೇಹ ಸಮಸ್ಯೆ ಸಾಮಾನ್ಯವಾಗಿಬಿಟ್ಟಿದೆ. ರಕ್ತದಲ್ಲಿ ಸಕ್ಕರೆಮಟ್ಟ ಹೆಚ್ಚಳವಾದಾಗ ಡಯಾಬಿಟಿಸ್ ಬರುತ್ತದೆ.

ರಕ್ತದ ಸಕ್ಕರೆಮಟ್ಟ ಹೆಚ್ಚಳ

ತೂಕ ಕಡಿಮೆ ಮಾಡಲು 15 ನಿಮಿಷಗಳ ಬಿರುಸಾದ ವ್ಯಾಯಾಮ ಅತ್ಯಗತ್ಯ. ಇದರ ಮೂಲಕ ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.

ವ್ಯಾಯಾಮ ಮಾಡಿ

ಈಜು ಆರೋಗ್ಯಕರ ಚಟುವಟಿಕೆಯನ್ನು ಒಳಗೊಂಡಿರುತ್ತದೆ. ಇದು ಇಡೀ ದೇಹವನ್ನು ಆ್ಯಕ್ಟಿವ್ ಮಾಡುತ್ತದೆ, ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ, ಹೃದಯರಕ್ತನಾಳದ ಆರೋಗ್ಯವನ್ನು ಹೆಚ್ಚಿಸುತ್ತದೆ.

ರಕ್ತನಾಳದ ಆರೋಗ್ಯ ಹೆಚ್ಚಳ

ಒಮ್ಮೆ ನೀವು ದೇಹದಲ್ಲಿ ಕೊಬ್ಬಿನ ಶೇಖರಣೆಯನ್ನು ಕಡಿಮೆ ಮಾಡಿದರೆ, ನೀವು ಮಧುಮೇಹ ಮತ್ತು ಅಧಿಕ ರಕ್ತದೊತ್ತಡವನ್ನು ಒಟ್ಟಿಗೆ ನಿಯಂತ್ರಿಸಬಹುದು.

ಕೊಬ್ಬು ಕರಗಿಸಿ

ವ್ಯಾಯಾಮದಿಂದ ಟೈಪ್ 2 ಮಧುಮೇಹ ತಡೆಗಟ್ಟಬಹುದು. ಗ್ಲೈಸೆಮಿಕ್ ನಿಯಂತ್ರಣದ ನಿರ್ವಹಣೆ ಮಾಡಬಹುದು. ಕೊಲೆಸ್ಟ್ರಾಲ್ ಮತ್ತು ತೂಕ ಹೆಚ್ಚಳವನ್ನು ನಿಯಂತ್ರಿಸಬಹುದು.

ವ್ಯಾಯಾಮದ ಪ್ರಯೋಜನ

ಈಜುವಾಗ ದೇಹದ ತಾಪಮಾನ ಬಿಸಿಯಾಗುತ್ತದೆ. ಈಜುವುದರಿಂದ ಉಸಿರಾಟದ ಕ್ರಿಯೆ ಸರಾಗವಾಗುತ್ತದೆ, ದೇಹದ ಅಂಗಗಳಿಗೆ ವ್ಯಾಯಾಮ ಸಿಗುತ್ತದೆ.

ಸ್ವಿಮ್ಮಿಂಗ್ ಯಾಕೆ ಬೇಕು?

ನಿಮ್ಮ ಮಾನಸಿಕ ಒತ್ತಡವು ರಕ್ತದ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು. ಆದ್ದರಿಂದ ಯೋಗ, ಧ್ಯಾನ ಅಥವಾ ಪ್ರಕೃತಿಯಲ್ಲಿ ಸಮಯ ಕಳೆಯಲು ಪ್ರಯತ್ನಿಸಿ.

ಯೋಗ ಮಾಡಿ