palak paneer 1

Author: Sushma Chakre

ನಿಮ್ಮಿಷ್ಟದ ಈ ಭಾರತೀಯ ಆಹಾರಗಳು ಎಷ್ಟು ಕೆಟ್ಟದ್ದು ಗೊತ್ತಾ?

20 Dec 2023

Author: Sushma Chakre

TV9 Kannada Logo For Webstory First Slide
ಪಕೋಡಗಳು ತುಂಬ ರುಚಿಕರವಾಗಿದ್ದರೂ ಪಕೋಡಗಳನ್ನು ಎಣ್ಣೆಯಲ್ಲಿ ಕರಿಯುವುದರಿಂದ ಇದರಲ್ಲಿ ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಕ್ಯಾಲೊರಿಗಳು ತುಂಬಿರುತ್ತದೆ. ಹೀಗಾಗಿ, ಆರೋಗ್ಯಕ್ಕೆ ಇದು ಒಳ್ಳೆಯದಲ್ಲ.

ಪಕೋಡಗಳು ತುಂಬ ರುಚಿಕರವಾಗಿದ್ದರೂ ಪಕೋಡಗಳನ್ನು ಎಣ್ಣೆಯಲ್ಲಿ ಕರಿಯುವುದರಿಂದ ಇದರಲ್ಲಿ ಸ್ಯಾಚುರೇಟೆಡ್ ಕೊಬ್ಬುಗಳು ಮತ್ತು ಕ್ಯಾಲೊರಿಗಳು ತುಂಬಿರುತ್ತದೆ. ಹೀಗಾಗಿ, ಆರೋಗ್ಯಕ್ಕೆ ಇದು ಒಳ್ಳೆಯದಲ್ಲ.

ಪಕೋಡ

papad

ಅನೇಕ ಸ್ಥಳಗಳಲ್ಲಿ ಹಪ್ಪಳವನ್ನು ಎಣ್ಣೆಯಲ್ಲಿ ಕರಿಯಲಾಗುತ್ತದೆ. ಇದರ ಬದಲಾಗಿ ಬೆಂಕಿಯಲ್ಲಿ ಸುಟ್ಟುಕೊಂಡು ತಿನ್ನುವುದು ಉತ್ತಮ. ಇದಕ್ಕೆ ಮೇಲೆ ಸ್ವಲ್ಪ ಪುದೀನ ಚಟ್ನಿ ಹಾಕಿಕೊಂಡು ತಿನ್ನಬಹುದು.

ಹಪ್ಪಳ

samosa

ಅತ್ಯಂತ ಜನಪ್ರಿಯ ತಿಂಡಿಗಳಲ್ಲಿ ಒಂದಾದ ಸಮೋಸಾಗಳು ಆಲೂಗಡ್ಡೆ, ಈರುಳ್ಳಿ, ಕ್ಯಾರೆಟ್ ಮತ್ತು ಬಟಾಣಿಗಳಂತಹ ತರಕಾರಿಗಳಿಂದ ತುಂಬಿರುತ್ತವೆ. ಆದರೆ ಅದನ್ನು ಭಾರೀ ಪೇಸ್ಟ್ರಿ ಶೆಲ್ ಆಗಿ ಮಡಚಲಾಗುತ್ತದೆ. ನಂತರ ಕೊಬ್ಬಿನಾಂಶವಿರುವ ಎಣ್ಣೆಯಲ್ಲಿ ಕರಿಯಲಾಗುತ್ತದೆ.

ಸಮೋಸಾ

ಪಾನಿಪುರಿ ಅಥವಾ ಗೋಲ್​ಗಪ್ಪ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಆದರೆ, ಇದನ್ನು ತಿಂದರೆ ನೀವು ಅಜೀರ್ಣಕ್ಕೆ ಒಳಗಾಗಬಹುದು, ಇತರ ಕರುಳಿನ ಸಂಬಂಧಿತ ಸಮಸ್ಯೆಗಳು ಉಂಟಾಗಬಹುದು. ತಜ್ಞರ ಪ್ರಕಾರ, ಗೋಲ್​ಗಪ್ಪದಲ್ಲಿ ಬಳಸುವ ನೀರು ಬ್ಯಾಕ್ಟೀರಿಯಾದ ಸಂತಾನೋತ್ಪತ್ತಿಯ ಸ್ಥಳವಾಗಿದೆ. ಇದು ಆರೋಗ್ಯಕ್ಕೆ ಅಪಾಯಕಾರಿ.

ಗೋಲ್​ಗಪ್ಪ

ಪಾಲಕ್ ಪನೀರ್ ಕಬ್ಬಿಣ ಮತ್ತು ವಿಟಮಿನ್‌ಗಳಿಂದ ತುಂಬಿರುತ್ತದೆ. ಆದರೆ ಈ ಖಾದ್ಯದ ಪನೀರ್ ಪೀಸ್​ಗಳನ್ನು ತುಪ್ಪದಲ್ಲಿ ಹುರಿಯಲಾಗುತ್ತದೆ. ಅಲ್ಲದೆ, ಇದು ಸಾಫ್ಟ್ ಆಗಲೆಂದು ಕೆನೆ ಮತ್ತು ಮೊಸರನ್ನು ಸೇರಿಸಲಾಗುತ್ತದೆ. ಇದರಿಂದ ಕ್ಯಾಲೊರಿ ಹೆಚ್ಚುತ್ತದೆ.

ಪಾಲಕ್ ಪನೀರ್

ಈ ರುಚಿಕರವಾದ ನಾನ್ ಅನ್ನು ಮೈದಾ ಅಥವಾ ಸಂಸ್ಕರಿಸಿದ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಇದು ಕಡಿಮೆ ಪೌಷ್ಟಿಕಾಂಶದ ಮೌಲ್ಯವನ್ನು ಹೊಂದಿರುತ್ತದೆ. ಇದನ್ನು ಮೈದಾ ಹಿಟ್ಟು, ಸಕ್ಕರೆ ಮತ್ತು ಎಣ್ಣೆಯಂತಹ ಕಡಿಮೆ ಆರೋಗ್ಯಕರ ಪದಾರ್ಥಗಳಿಂದ ತಯಾರಿಸಲಾಗುತ್ತದೆ.

ನಾನ್

ಭಾರತೀಯರ ಅಚ್ಚುಮೆಚ್ಚಿನ ಮತ್ತು ರುಚಿಕರವಾದ ಸಿಹಿತಿಂಡಿಗಳಲ್ಲಿ ಒಂದಾದ ಗುಲಾಬ್ ಜಾಮೂನ್ ನಿಮ್ಮ ಡಯಟ್​ಗೆ ಒಳ್ಳೆಯದಲ್ಲ. ಗುಲಾಬ್ ಜಾಮೂನ್ ಹಾಲು, ಸಕ್ಕರೆ ಮತ್ತು ತುಪ್ಪದ ಮಿಶ್ರಣವಾಗಿದ್ದು, ಅದನ್ನು ಎಣ್ಣೆಯಲ್ಲಿ ಕರಿದ ನಂತರ ಸಕ್ಕರೆ ಪಾಕದಲ್ಲಿ ಹಾಕಲಾಗುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ.

ಗುಲಾಬ್ ಜಾಮೂನ್

ಬಿಸಿಯಾಗಿ ಬಡಿಸಿದಾಗ ತುಂಬಾ ರುಚಿಯಾಗಿದ್ದರೂ ಜಿಲೇಬಿ ಮಧುಮೇಹಿಗಳಿಗೆ ಉತ್ತಮವಾದ ತಿನಿಸಲ್ಲ. ಇದನ್ನು ಎಣ್ಣೆಯಲ್ಲಿ ಕರಿದು, ಸಕ್ಕರೆ ಪಾಕದಲ್ಲಿ ಅದ್ದಲಾಗುತ್ತದೆ. ಇದು ನಿಮ್ಮ ಹಲ್ಲಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗೇ ಇದು ತೂಕ ಹೆಚ್ಚಾಗಲು ಕಾರಣವಾಗುತ್ತದೆ.

ಜಿಲೇಬಿ