ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಸಿಡಿಸಿರುವ 10 ಬ್ಯಾಟರ್​ಗಳ ಪಟ್ಟಿ ಇಲ್ಲಿದೆ.

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಇದುವರೆಗೆ 3 ದ್ವಿಶತಕ ಸಿಡಿಸಿದ್ದಾರೆ. ಅದರಲ್ಲಿ 264 ಅತ್ಯಧಿಕ ರನ್ ಆಗಿದೆ.

ನ್ಯೂಜಿಲೆಂಡ್ ಆಟಗಾರ ಮಾರ್ಟಿನ್ ಗಪ್ಟಿಲ್ ವೆಸ್ಟ್ ವಿರುದ್ಧ ಅಜೇಯ 237 ರನ್ ಬಾರಿಸಿದ್ದರು

ನ್ಯೂಜಿಲೆಂಡ್ ಆಟಗಾರ್ತಿ ಅಮೆಲಿಯಾ ಕೆರ್ ಐರ್ಲೆಂಡ್ ವಿರುದ್ಧ  ಅಜೇಯ 232 ರನ್ ಬಾರಿಸಿದ್ದರು.

ಆಸ್ಟ್ರೇಲಿಯಾ ಆಟಗಾರ್ತಿ ಬೆಲಿಂಡಾ ಕ್ಲಾರ್ಕ್ ಡೆನ್ಮಾರ್ಕ್​ ವಿರುದ್ಧ ಅಜೇಯ 229 ರನ್​ಗಳ ಇನ್ನಿಂಗ್ಸ್ ಆಡಿದ್ದರು.

ಟೀಂ ಇಂಡಿಯಾ ಆಟಗಾರ ವಿರೇಂದ್ರ ಸೆಹ್ವಾಗ್ ವೆಸ್ಟ್ ಇಂಡೀಸ್ ವಿರುದ್ಧ 219 ರನ್​ ಬಾರಿಸಿದ್ದರು.

ವೆಸ್ಟ್ ಇಂಡೀಸ್ ಆಟಗಾರ ಕ್ರಿಸ್ ಗೇಲ್ ಜಿಂಬಾಬ್ವೆ ವಿರುದ್ಧ 215 ರನ್ ಬಾರಿಸಿದ್ದರು.

ಪಾಕಿಸ್ತಾನದ ಆಟಗಾರ ಫಾಖರ್ ಜಮಾನ್ ಜಿಂಜಾಬ್ವೆ ವಿರುದ್ಧ ಅಜೇಯ 210 ರನ್ ಬಾರಿಸಿದ್ದರು.

ಟೀಂ ಇಂಡಿಯಾ ಆಟಗಾರ ಇಶಾನ್ ಕಿಶನ್ ಬಾಂಗ್ಲಾದೇಶ ವಿರುದ್ಧ 210 ರನ್ ಬಾರಿಸಿದ್ದಾರೆ.

ಟೀಂ ಇಂಡಿಯಾ ಆಟಗಾರ ಶುಭ್​ಮನ್ ಗಿಲ್ ನ್ಯೂಜಿಲೆಂಡ್ ವಿರುದ್ಧ 208 ರನ್ ಬಾರಿಸಿದ್ದಾರೆ.

ಟೀಂ ಇಂಡಿಯಾ ಆಟಗಾರ ಸಚಿನ್ ತೆಂಡೂಲ್ಕರ್ ದಕ್ಷಿಣ ಆಫ್ರಿಕಾ ವಿರುದ್ಧ ಅಜೇಯ 200 ರನ್ ಬಾರಿಸಿದ್ದರು.