ಆದಾಯ ತೆರಿಗೆ ಉಳಿಸಲು ವಿಮೆ ಹೇಗೆ ಸಹಾಯಕ? ಇಲ್ಲಿದೆ ಮಾಹಿತಿ.

ವಿಮೆಯಲ್ಲಿ ಹೂಡಿಕೆ ಮಾಡುವುದು ತೆರಿಗೆ ಉಳಿಸುವ ಬಹಳ ಜನಪ್ರಿಯ ವಿಧಾನಗಳಲ್ಲಿ ಒಂದಾಗಿದೆ.

ತೆರಿಗೆ ಪ್ರಯೋಜನ ಪಡೆಯಬಹುದಾದ ನಾಲ್ಕು ವಿಮಾ ಉತ್ಪನ್ನಗಳ ಮಾಹಿತಿ ಇಲ್ಲಿದೆ.

ಯೂನಿಟ್ ಲಿಂಕ್ಡ್ ಇನ್ಶೂರೆನ್ಸ್ ಪ್ಲಾನ್​ಗಳು ಶೇ 12 - 15ರ ರಿಟರ್ನ್ಸ್​ ಜತೆ ತೆರಿಗೆ ಉಳಿಸುತ್ತವೆ.

ಗ್ಯಾರಂಟೀಡ್ ರಿಟರ್ನ್ಸ್ ಪ್ಲಾನ್​ಗಳು ಐಟಿ ಕಾಯ್ದೆಯ ಸೆಕ್ಷನ್ 80ಸಿ ಹಾಗೂ 10 (10ಡಿ) ಅಡಿ ತೆರಿಗೆ ವಿನಾಯಿತಿ ನೀಡುತ್ತವೆ.

ಟರ್ಮ್​ ಇನ್ಶೂರೆನ್ಸ್ ಪ್ರೀಮಿಯಂ ಪಾವತಿಗೆ 1.50 ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ ಇದೆ.

ಆರೋಗ್ಯ ವಿಮೆಗೆ 25,000 ರೂ. ವರೆಗೆ ತೆರಿಗೆ ವಿನಾಯಿತಿ ಪಡೆಯಬಹುದಾಗಿದೆ.